Advertisement
ಮಂಗಳವಾರ ಹಮ್ಮಿಕೊಂಡಿದ್ದ “ಎಫ್ಕೆಸಿಸಿಐ ಎಕ್ಸ್‌ಪೋರ್ಟ್ ಎಕ್ಸಲೆನ್ಸ್ -2017’ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶ್ರೇಷ್ಠ ರಫ್ತುದಾರರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, “ವಾಣಿಜ್ಯವೂ ಕೈಗಾರಿಕೆಯಷ್ಟೇ ಮುಖ್ಯ ಎಂಬುದನ್ನು ತಿಳಿದುಕೊಳ್ಳಬೇಕು. ಈ ಎರಡರಲ್ಲೂ ಸಮತೋಲಿತ ಬೆಳವಣಿಗೆ ಇರಬೇಕು. ವ್ಯಾಪಾರ ವಿಭಾಗವನ್ನು ನಿರ್ಲಕ್ಷ್ಯ ಮಾಡುವುದು ಸರಿಯಲ್ಲ,’ ಎಂಬ ಸಲಹೆ ನೀಡಿದರು.
Related Articles
Advertisement
ಎಫ್ಕೆಸಿಸಿಐ ಅಧ್ಯಕ್ಷ ಎಂ.ಸಿ.ದಿನೇಶ್ ಮಾತನಾಡಿ, “ರಾಜ್ಯದ ಉತ್ಪನ್ನಗಳ ರಫ್ತು ಪ್ರಮಾಣ ಇನ್ನಷ್ಟು ಹೆಚ್ಚಿಸಲು 2 ವರ್ಷದಲ್ಲಿ ಅಧ್ಯಯನವೊಂದನ್ನು ನಡೆಸಬೇಕು. ಕೈಗಾರಿಕೋದ್ಯಮಕ್ಕೆ ಪೂರಕವಾದ ವಾತಾವರಣ ಸೃಷ್ಟಿಸಬೇಕು. ಕೈಗಾರಿಕಾ ಪ್ರದೇಶದ ಮೂಲ ಸೌಕರ್ಯ ಅಭಿವೃದ್ಧಿಯ ಜತೆಗೆ ಕೈಗಾರಿಕೆಗಳು ಎದುರಿಸುತ್ತಿರುವ ಸಮಸ್ಯೆಗಳಿಗೂ ಪರಿಹಾರ ನೀಡಬೇಕು,’ ಎಂದರು.
ಬಯೊಕಾನ್ ಸಂಸ್ಥೆಗೆ ಬೆಸ್ಟ್ ಎಕ್ಸ್‌ಪೋರ್ಟ್ ಪ್ರಶಸ್ತಿ, ರಾಜೇಶ್ ಎಕ್ಸ್‌ಪೋರ್ಟ್ಸ್ ಸಂಸ್ಥೆಗೆ ಸ್ಟಾರ್ ಎಕ್ಸ್‌ಪೋರ್ಟ್ ಪ್ರಶಸ್ತಿ ಸೇರಿದಂತೆ 44 ವಿಭಾಗದಲ್ಲಿ ರಪು¤ ಪ್ರಶಸ್ತಿ ಪ್ರದಾನ ಮಾಡಲಾಯಿತು. ಎಫ್ಕೆಸಿಸಿಐ ಕೆ.ರವಿ, ಸುಧಾಕರ್ ಶೆಟ್ಟಿ, ತಲ್ಲಂ ಧ್ವಾರಕನಾಥ್, ವಸಂತ್ ಬಂಗೇರಾ ಮೊದಲಾದವರು ಉಪಸ್ಥಿತರಿದ್ದರು.
ಕೈಗಾರಿಕೆಗಳು ತಮ್ಮ ಉತ್ಪನ್ನಗಳನ್ನು ರಫ್ತು ಮಾಡುವುದನ್ನು ಎಫ್ಕೆಸಿಸಿಐ ಗುರುತಿಸಿ, ಪ್ರೋತ್ಸಾಹ ನೀಡುವುದರಿಂದ ಇನ್ನಷ್ಟು ಸೇವೆಗೆ ಪ್ರೇರಣೆ ಸಿಗುತ್ತದೆ. ಗ್ರಾಹಕರಿಗೂ ಉತ್ಕೃಷ್ಟವಾದ ಸೇವೆ ನೀಡಲು ಸಾಧ್ಯವಾಗುತ್ತದೆ. ಹಾಗೆಯೇ ಗುಣಮಟ್ಟದ ಉತ್ಪನ್ನವನ್ನು ದೇಶ ಮತ್ತು ಅಂತಾರಾಷ್ಟ್ರೀಯ ಮಟ್ಟದ ಗ್ರಾಹಕರಿಗೆ ತಲುಪಿಸಲು ಉತ್ತೇಜನ ಸಿಗುತ್ತದೆ. -ನೀರಜ್ ಶೆಟ್ಟಿ, ನಿರ್ದೇಶಕ ಸೆಮಿ-ಸೆಬಿನ್ಸ್ ಗ್ರೂಪ್( ಬೆಸ್ಟ್ ಡಿಸ್ಟಿಕ್ ಎಕ್ಸ್‌ಪೋರ್ಟ್ ಅವರ್ಡ್ ಫಾರ್ ತುಮಕೂರು)