Advertisement
ಕಳೆದ ವರ್ಷ ಸೆಪ್ಟಂಬರ್‌ನಲ್ಲಿ ರಾಜ್ಯ ಸರಕಾರ ಇದಕ್ಕಾಗಿ ಕೈಗಾರಿಕೆಯಿಂದ ನೇರ ಖರೀದಿ ಮಾಡಿ ಕರಾವಳಿಯ ಮೂರು ಜಿಲ್ಲೆಗಳ 8,030 ಪರವಾನಿಗೆದಾರರಿಗೆ ರಿಯಾಯಿತಿ ದರದಲ್ಲಿ ಪ್ರತೀ ತಿಂಗಳು ಪರವಾನಿಗೆಗೆ 200 ಲೀ.ಗಳಂತೆ ಸೆಪ್ಟಂಬರ್‌ನಿಂದ ಮೇ ತಿಂಗಳ ವರೆಗೆ ನೀಡುತ್ತಿರುವುದು ಅನುಕೂಲವಾಗಿದೆ.
ಪ್ರಸ್ತುತ ಮಂಗಳೂರಿನ ಎಚ್‌ಪಿಸಿಎಲ್ ಕಂಪೆನಿಯಿಂದ ಬಿಳಿ ಸೀಮೆ ಎಣ್ಣೆಯನ್ನು ಕರ್ನಾಟಕ ಮೀನು ಗಾರಿಕಾ ಅಭಿವೃದ್ಧಿ ನಿಗಮದವರು ಖರೀದಿಸಿ, ಮೂರೂ ಜಿಲ್ಲೆಗಳ ಸಾಂಪ್ರದಾಯಿಕ ಮೀನುಗಾರರ ಸೊಸೈಟಿಗಳಿಗೆ ಕಳುಹಿಸುತ್ತಿದ್ದಾರೆ.
Related Articles
Advertisement
ಬ್ಯಾಟರಿ ಎಂಜಿನ್ ಬಂದಿಲ್ಲಸೀಮೆ ಎಣ್ಣೆ ಪರಿಸರಕ್ಕೆ ಮಾಲಿನ್ಯಕಾರಿ ಎಂಬ ಕಾರಣಕ್ಕೆ ದೋಣಿಗಳು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಿ ಎಂದು ಕೇಂದ್ರ ಸರಕಾರ ಹಿಂದೆ ಹೇಳಿದೆ. ಆದರೆ ಪರ್ಯಾಯ ವ್ಯವಸ್ಥೆ ಮಾಡದೇ ಏಕಾಏಕಿ ನಿಲ್ಲಿಸಿದ್ದು ಸರಿಯಲ್ಲ ಎಂದು ಪರ್ಯಾಯವಾಗಿ ಬ್ಯಾಟರಿ ಎಂಜಿನ್ ಇನ್ನೂ ಬಂದಿಲ್ಲ ಎನ್ನುತ್ತಾರೆ ಸಾಂಪ್ರದಾಯಿಕ ದೋಣಿ ಮೀನುಗಾರರು. ರಾಜ್ಯ ಸರಕಾರದ ಯೋಜನೆಯಿಂದ ಸೀಮೆ ಎಣ್ಣೆ ನಿರಂತರ ಸಿಗುತ್ತಿದೆ. ಮತ್ಸ é ಕ್ಷಾಮ ಇರುವ ಸಂದರ್ಭ ದೂರ ಹೋಗುವುದು ವೆಚ್ಚ ದಾಯಕ. ಹಾಗಾಗಿ ಮಳೆಗಾಲದಲ್ಲಿ ಇತರ ಮೀನುಗಾರಿಕೆ ನಿಂತಾಗ ನಮಗೆ ಸ್ವಲ್ಪ ಲಾಭವಾಗುತ್ತದೆ.
-ಅಶ್ವತ್ಥ್ ಕಾಂಚನ್, ಅಧ್ಯಕ್ಷರು,
ದ.ಕ. ಮೂಲ ಮೀನುಗಾರರ ಸಂಘ -ವೇಣು ವಿನೋದ್ ಕೆ.ಎಸ್