Advertisement

ಬೆಂಗಳೂರು: ಶಿವಮೊಗ್ಗ ಜಿಲ್ಲೆಯ ಅಬ್ಬಲಗೆರೆ – ಹುಣಸೋಡು ಜಲ್ಲಿ ಕ್ರಷರ್‌ ಬಳಿಯ ಡೈನಾಮೈಟ್‌ ಸ್ಫೋಟ ದುರಂತವು ರಾಜ್ಯದ ಗಣಿ, ಕೈಗಾರಿಕೆ ಮತ್ತು ರಾಸಾಯನಿಕ ಅಪಘಾತಗಳ ಪಟ್ಟಿಗೆ ಹೊಸ ಸೇರ್ಪಡೆಯಾಗಿದೆ. ಕಳೆದೊಂದು ದಶಕದಲ್ಲಿ ರಾಜ್ಯದಲ್ಲಿ ಈ ರೀತಿಯ ಘಟನೆಗಳಿಂದ 700ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

Advertisement

“2020-21ನೇ ಸಾಲಿನ ಕರ್ನಾಟಕ ರಾಜ್ಯ ವಿಕೋಪ ನಿರ್ವಹಣೆ ಯೋಜನೆ’ಯಲ್ಲಿ ಅಧಿಕೃತವಾಗಿ ದಾಖಲಿಸಿರುವ ಮಾಹಿತಿಯಂತೆ 2010ರಿಂದ 2020ರ ವರೆಗೆ ರಾಜ್ಯದಲ್ಲಿ 592ಕ್ಕೂ ಹೆಚ್ಚು   ಕೈಗಾರಿಕಾ ಅಪಘಾತಗಳು ಸಂಭವಿಸಿದ್ದು, 700ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಸುಮಾರು 600ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಕಾರ್ಖಾನೆಗಳ ಕಾಯ್ದೆ-1948ರ ಮೊದಲ ಶೆಡ್ನೂಲ್‌ನಲ್ಲಿ ಅಪಾಯಕಾರಿ ಕಾರ್ಖಾನೆಗಳ ಕಾರ್ಯಚಟುವಟಿಕೆಗಳ ಬಗ್ಗೆ ವಿವರಿಸ ಲಾಗಿದೆ. ಅದರಂತೆ, ರಾಜ್ಯದಲ್ಲಿ ಸುಮಾರು 735 ಅಪಾಯಕಾರಿ ಪ್ರಕ್ರಿಯೆಗಳುಳ್ಳ ಕಾರ್ಖಾನೆಗಳಿವೆ. ಕೈಗಾರಿಕೆಗಳ ಪ್ರಮುಖ ಆಪಘಾತ ಅಪಾಯಗಳ ನಿಯಂತ್ರಣ ನಿಯಮಗಳು- 1994ರ ಅಡಿಯಲ್ಲಿ ಸೂಚಿಸಲಾದ ಮಿತಿಗಳ ಪ್ರಮಾಣದಲ್ಲಿ ಬಳಸ ಲಾದ ಮತ್ತು ತಯಾರಿಸಿದ ರಾಸಾಯನಿಕ ಹಾಗೂ ಸ್ಫೋಟಕ ವಸ್ತುಗಳನ್ನು ಹೊಂದಿರುವ  ಕಾರ್ಖಾನೆಗಳನ್ನು “ಅಪಘಾತ ಅಪಾಯ ಘಟಕ’ಗಳಾಗಿ ವರ್ಗೀಕರಿಸಲಾಗಿದೆ. ಅದರಂತೆ ರಾಜ್ಯದ 17 ಜಿಲ್ಲೆಗಳಲ್ಲಿ 59 ಅಪಘಾತ ಅಪಾಯ ಘಟಕಗಳನ್ನು ಗುರುತಿಸಲಾಗಿದ್ದು, ಇದರಲ್ಲಿ ಶಿವಮೊಗ್ಗ

ಜಿಲ್ಲೆಯೂ ಸೇರಿದೆ.

ಹಾಸನದಲ್ಲೂ  ಗಣಿ ಸ್ಫೋಟ :

Advertisement

ಜಲ್ಲಿ ಕ್ರಷರ್‌, ಕಲ್ಲು ಗಣಿಗಾರಿಕೆಗಳಲ್ಲಿ ಸ್ಫೋಟ ವಾದ ಹಲವು ಘಟನೆಗಳು ಸಂಭವಿಸಿವೆ.  2018ರಲ್ಲಿ ಹಾಸನದಲ್ಲಿ ಮತ್ತು ಕೆಆರ್‌ಎಸ್‌ ಅಣೆಕಟ್ಟು ವ್ಯಾಪ್ತಿಯಲ್ಲಿ  ನಡೆದ ಕಲ್ಲು ಗಣಿ ಸಂಬಂಧಿ  ಸ್ಫೋಟಗಳಲ್ಲಿ ನಾಲ್ವರು ಮೃತರಾಗಿದ್ದರು.

ಐವರ ಗುರುತು ಪತ್ತೆ :

ಹುಣಸೋಡು  ದುರಂತದಲ್ಲಿ ಮೃತಪಟ್ಟ ಆರು ಜನರಲ್ಲಿ ಐವರ ಗುರುತು ಪತ್ತೆಯಾಗಿದೆ. ಅವರನ್ನು ಭದ್ರಾವತಿಯ ಅಂತರಗಂಗೆಯ ಪ್ರವೀಣ್‌ ಕುಮಾರ್‌, ಮಂಜುನಾಥ್‌, ಆಂಧ್ರದ ರಾಯದುರ್ಗದ ಜಾವೀದ್‌, ಪವನ್‌ ಹಾಗೂ ರಾಜು ಎಂದು ಗುರುತಿಸಲಾಗಿದೆ.  ಇನ್ನೊಬ್ಬರ ದೇಹ ಛಿದ್ರವಾಗಿದೆ.

 

ಹತ್ತು ವರ್ಷಗಳಲ್ಲಿ ನಡೆದ ಕೈಗಾರಿಕೆ ಅಪಘಾತಗಳು

ವರ್ಷ       ಅಪಘಾತಗಳು        ಗಾಯಗೊಂಡವರು/ಮೃತಪಟ್ಟವರು

2010       126         189

2011       147         196

2012       137         190

2013       117         165

2014       111         126

2015       66           81

2016       86           59

2017       63           85

2018       72           107

2019 20               12           42

2021 (ಜ.21)        1              6

ಕಾಯ್ದೆ ಇದೆ, ನಿಯಮಗಳಿಲ್ಲ  :

ಬರಗಾಲ, ಪ್ರವಾಹ, ಭೂಕುಸಿತ, ಚಂಡಮಾರುತ ಮುಂತಾದ ಪ್ರಕೃತಿ ವಿಕೋಪಗಳ ಜತೆಗೆ ಮಾನವ ಪ್ರೇರಿತ ವಿಪತ್ತುಗಳನ್ನು ತಪ್ಪಿಸಲು ಮತ್ತು ಸಮರ್ಥವಾಗಿ ನಿರ್ವಹಿಸಲು “ವಿಕೋಪ ನಿರ್ವಹಣ ಕಾಯ್ದೆ-2005′ ಜಾರಿಗೆ ಬಂದಿದೆ. ಈ ಕಾಯ್ದೆಯನ್ವಯ ಪ್ರತಿ ವರ್ಷ ರಾಜ್ಯ ವಿಪತ್ತು ನಿರ್ವಹಣ ಪ್ರಾಧಿಕಾರ ರಚಿಸಿ, ರಾಜ್ಯ ವಿಪತ್ತು ನಿರ್ವಹಣ ಯೋಜನೆ ಸಿದ್ಧಪಡಿಸಬೇಕು ಜಿಲ್ಲಾ  ಮಟ್ಟದಲ್ಲೂ ಪ್ರಾಧಿಕಾರ ಮತ್ತು ಯೋಜನೆ ಸಿದ್ಧಪಡಿಸಬೇಕು. ಆದರೆ ಕಾಯ್ದೆ ಜಾರಿಗೆ ಬಂದು 15 ವರ್ಷಗಳಾದರೂ  ಸರಕಾರ ಪರಿಣಾಮ ಕಾರಿಯಾಗಿ ಅನುಷ್ಠಾನಕ್ಕೆ ತಂದಿಲ್ಲ . ಮುಖ್ಯವಾಗಿ ಕಾಯ್ದೆಗೆ ಪೂರಕವಾಗಿ ನಿಯಮಗಳನ್ನೇ ರೂಪಿಸಲಾಗಿಲ್ಲ.  ಈ ಬಗ್ಗೆ ಹೈಕೋರ್ಟ್‌ ಕೂಡ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

 

Advertisement

Udayavani is now on Telegram. Click here to join our channel and stay updated with the latest news.

Next