Advertisement

ಔದ್ಯಮಿಕ, ಶೈಕ್ಷಣಿಕ ಕ್ಷೇತ್ರಗಳ ವಿಚಾರ ವಿನಿಮಯ ಅಗತ್ಯ

10:44 AM Feb 25, 2017 | Team Udayavani |

ಕಾಪು: ಇಂದಿನ ಆಧುನಿಕ ಕಾಲಘಟ್ಟದಲ್ಲಿ ಉದ್ಯಮ ಕ್ಷೇತ್ರಕ್ಕೆ ನೂತನ ತಂತ್ರಜ್ಞಾನಗಳನ್ನು ಆಧರಿಸಿ ಕಾರ್ಯವೆಸಗುವ ಅನಿವಾರ್ಯತೆ ಯಿದ್ದರೆ, ಶೈಕ್ಷಣಿಕ ಕ್ಷೇತ್ರಕ್ಕೆ ತಾವು ಇಚ್ಛಿಸುವ ಕ್ಷೇತ್ರದಲ್ಲಿ ಸಂಶೋಧನೆ ಮಾಡುವ ಸ್ವಾತಂತ್ರವಿದೆ. ಈ ನಿಟ್ಟಿನಲ್ಲಿ ಉದ್ಯಮ ಮತ್ತು ಶೈಕ್ಷಣಿಕ ಕ್ಷೇತ್ರಗಳ ತಜ್ಞರು ಒಂದಾಗಿ ವಿವಿಧ ವಿಷಯಗಳ ಬಗ್ಗೆ ವಿಚಾರ ವಿನಿಮಯ ಮಾಡಿಕೊಳ್ಳುವುದು ಅನಿವಾರ್ಯ ಎಂದು ಬೆಂಗಳೂರಿನ ಎ.ಎಂ.ಡಿ. ಸಂಸ್ಥೆಯ ಹಿರಿಯ ತಂತ್ರಜ್ಞ ಡಾ| ಪ್ರಕಾಶ್‌ ರಾಘವೇಂದ್ರ ಹೇಳಿದರು.

Advertisement

ಬಂಟಕಲ್ಲು ಶ್ರೀ ಮಧ್ವ ವಾದಿರಾಜ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಆ್ಯಂಡ್‌ ಮ್ಯಾನೇಜ್‌ಮೆಂಟ್‌ ಸಂಸ್ಥೆಯ ಮೂಲಭೂತ ವಿಜ್ಞಾನ ವಿಭಾಗಗಳ ಸಹಯೋಗದಲ್ಲಿ ಎರಡು ದಿನಗಳ ಕಾಲ ಆಯೋಜಿಸಲಾಗಿರುವ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿನ ಇತ್ತೀಚಿನ ಬೆಳವಣಿಗೆಗಳು ಕುರಿತಾದ ರಾಷ್ಟ್ರೀಯ ಸಮ್ಮೇಳನ ಎನ್‌ಸಿಇಟಿಎಸ್‌ಇ-2017 ಕಾರ್ಯಕ್ರಮವನ್ನು ಫೆ. 23 ರಂದು ಉದ್ಘಾಟಿಸಿ ಅವರು ಮಾತ ನಾಡಿದರು.

ದೇಶದ ಹೆಮ್ಮೆ
ಮುಖ್ಯ ಅತಿಥಿಯಾಗಿದ್ದ ಎಡ್ಜ್ ವರ್ವ್‌ ಸಂಸ್ಥೆಯ ಸಹ ಉಪಾಧ್ಯಕ್ಷ ರಾಜಶೇಖರ ವಿ. ಮಯ್ಯ ಮಾತನಾಡಿ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಆಗುತ್ತಿರುವ ಬೆಳವಣಿಗೆಗಳು ದೇಶದ ಹೆಮ್ಮೆಗೆ ಕಾರಣವಾಗಿವೆ. ಅಪಮೌಲ್ಯವೇ ಮೊದಲಾದ ಕ್ರಾಂತಿಕಾರಿ ಯೋಜನೆ ಗಳನ್ನು ಧೈರ್ಯದಿಂದ ಮತ್ತು ಆತ್ಮ ವಿಶ್ವಾಸದಿಂದ ಜಾರಿಗೊಳಿಸಲು ತಂತ್ರಜ್ಞಾನದ ಕ್ಷಮತೆಯೂ ಕಾರಣ ವಾಗಿವೆ ಎಂದರು.

ಎಡ್ಜ್ವರ್ವ್‌ ಸಂಸ್ಥೆಯ ಕಂಪ್ಯೂ ಟರ್‌ ವಿಜ್ಞಾನಿ ಡಾ| ಕಜಾರಿ ಘೋಷ್‌ದಸ್ತಿದಾರ್‌ ಮಾತನಾಡಿ ದರು. ಉಡುಪಿ ಶ್ರೀ ಸೋದೆ ವಾದಿರಾಜ ಮಠ ಎಜುಕೇಶನ್‌ ಟ್ರಸ್ಟ್‌ನ ಕಾರ್ಯದರ್ಶಿ ರತ್ನ ಕುಮಾರ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಡಾ| ಪ್ರಕಾಶ್‌ ರಾಘವೇಂದ್ರ, ರಾಜಶೇಖರ ವಿ. ಮಯ್ಯ, ಡಾ| ಜಾನ್‌ ಕಿರಣ್‌, ಡಾ| ಎಸ್‌.ಎಂ. ಹೆಗ್ಡೆ, ಡಾ| ಮಂಜುನಾಥ್‌ ಪಟ್ಟಾಭಿ, ಡಾ| ಕೆ. ಅಪ್ಪು ಕುಟ್ಟನ್‌, ಡಾ| ರಮೇಶ್‌ ಮೊದಲಾದವರು ವಿವಿಧ ವಿಷಯಗಳ ಮೇಲೆ ವಿಶೇಷ ಉಪನ್ಯಾಸ ನೀಡಿದರು.

Advertisement

ದೇಶದ ವಿವಿಧೆಡೆಗಳಿಂದ ಬಂದ ಸಂಶೋಧಕರು, ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಏಳು ಪ್ರತ್ಯೇಕ ವಿಭಾಗಗಳಲ್ಲಿ ಸುಮಾರು 80ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಪ್ರಸ್ತುತಿ ಪಡಿಸಿದರು.

ಪ್ರಾಂಶುಪಾಲ ಪ್ರೊ| ಡಾ| ತಿರುಮಲೇಶ್ವರ ಭಟ್‌ ಸ್ವಾಗತಿಸಿದರು. ಲಕ್ಷ್ಮೀ ಶೆಟ್ಟಿ, ಸೌಮ್ಯಾ ಭಟ್‌ ಮತ್ತು ರಮ್ಯಶ್ರೀ ಪರಿಚಯಿಸಿದರು. ಸಮ್ಮೇಳನದ ಸಂಯೋಜಕ ಡಾ| ರವೀಂದ್ರ ಎಚ್‌.ಜೆ. ವಂದಿಸಿದರು. ಸಹನಾ ಕಾರಂತ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next