ಪುಣೆ:ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಎನ್‌ಡಿಎ)ಗೆ ಮಹಿಳೆಯರ ಸೇರ್ಪಡೆಗೆ ಅವಕಾಶ ಕಲ್ಪಿಸಲಾಗಿರುವ ಮೂಲಕ ಸಶಸ್ತ್ರ ಸೇನಾಪಡೆಗಳಲ್ಲಿ ಇರುವ ಲಿಂಗ ತಾರತಮ್ಯ ನಿವಾರಣೆಗೆ ಮೊದಲ ಹೆಜ್ಜೆ ಇರಿಸಲಾಗಿದೆ ಎಂದು ಭೂಸೇನಾ ಮುಖ್ಯಸ್ಥ ಜ.ಎಂ.ಎಂ.ನರವಣೆ ಹೇಳಿದ್ದಾರೆ.
ಪುಣೆಯಲ್ಲಿರುವ ಅಕಾಡೆಮಿಯ ಕ್ಯಾಂಪಸ್‌ನಲ್ಲಿ 141ನೇ ಬ್ಯಾಚ್‌ನ ಕೆಡೆಟ್‌ಗಳನ್ನು ಉದ್ದೇಶಿಸಿ ಅವರು ಮಾತನಾಡಿದ ವೇಳೆ ಈ ಅಂಶ ಪ್ರಸ್ತಾಪಿಸಿದ್ದಾರೆ.
ಇದರಿಂದಾಗಿ ಹೆಚ್ಚಿನ ವೃತ್ತಿಪರತೆ ಕಂಡು ಬರಲಿದೆ ಮತ್ತು ಮುಂದಿನ 40 ವರ್ಷಗಳ ಅವಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಹೇಳುವುದಾದರೆ, ಅವರು ಪ್ರಮುಖ ಪಾತ್ರವಹಿಸಲಿದ್ದಾರೆ ಎಂದು ಹೇಳಿದ್ದಾರೆ.
ಜಗತ್ತಿನ ಭೂಪಟದಲ್ಲಿ ದೇಶದ ಸೇನೆಗೆ ವೃತ್ತಿಪರತೆಯಲ್ಲಿ ವಿಶೇಷ ಸ್ಥಾನವಿದೆ ಎಂದಿದ್ದಾರೆ. ಮಹಿಳೆಯರು ಎನ್‌ಡಿಎಗೆ ಸೇರ್ಪಡೆಗೊಂಡ ಬಳಿಕ ಅವರು ಪುರುಷರಿಗಿಂತ ಹೆಚ್ಚು ಸಾಧನೆ ಮಾಡಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ರಾಜಧಾನಿ ಬಗ್ಗೆ ಬಿಜೆಪಿ ಸರ್ಕಾರ ನಿರ್ಲಕ್ಷ್ಯ: ಆರೋಪ
ಕಳೆದ ತಿಂಗಳು ರಕ್ಷಣಾ ಸಚಿವಾಲಯ ಸುಪ್ರೀಂಕೋರ್ಟ್‌ಗೆ ಎನ್‌ಡಿಎಯಲ್ಲಿ ಮಹಿಳೆಯರನ್ನು ಸೇರ್ಪಡೆಗೊಳಿಸುವ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಅರಿಕೆ ಮಾಡಿಕೊಂಡಿತ್ತು.