Advertisement
“ರಾಂಚಿಯಲ್ಲಿ ಅಭ್ಯಾಸ ನಡೆಸುತ್ತಿದ್ದ ವೇಳೆ ನನಗೆ ಮಹಿ ಸರ್ ಜತೆ ಸಮಯ ಕಳೆಯುವ ಅವಕಾಶ ಲಭಿಸಿತು. ಈ ಸಂದರ್ಭದಲ್ಲಿ ಅವರು ಅನೇಕ ಕೀಪಿಂಗ್ ಟಿಪ್ಸ್ ನೀಡಿದರು. 5 ಮೀಟರ್ ಸುತ್ತಳತೆಯ ವ್ಯಾಪ್ತಿಯಲ್ಲಿ ರಿಫ್ಲೆಕ್ಸ್ ಮತ್ತು ಮೂವ್‌ಮೆಂಟ್ ಸುಧಾರಿಸಿಕೊಳ್ಳಬೇಕು ಎಂಬುದು ಇದರಲ್ಲಿ ಮುಖ್ಯವಾಗಿತ್ತು. ಇದನ್ನು ನಾನು ಕೂಡಲೇ ಅಳವಡಿಸಿಕೊಂಡೆ. ಇದರಿಂದ ನನ್ನ ಕೀಪಿಂಗ್‌ನಲ್ಲೂ ಸುಧಾರಣೆ ಕಂಡುಬಂತು. ಪ್ರತೀ ಸಲ ಕೀಪಿಂಗ್‌ಗೆ ಇಳಿಯುವಾಗ ನನಗೆ ಧೋನಿ ಕೊಟ್ಟ ಸಲಹೆ ನೆನಪಾಗುತ್ತದೆ’ ಎಂಬುದಾಗಿ ಇಂದ್ರಾಣಿ ಹೇಳಿದರು.
ತಮ್ಮ ವಾಸ್ತವ್ಯ ಬದಲಿಸಿಕೊಂಡು ಯಶಸ್ಸು ಕಾಣುತ್ತಿದ್ದಾರೆ. ಕಠಿನ ಶ್ರಮಕ್ಕೆ ಸಿಕ್ಕಿದ ಬೆಲೆ
ಭಾರತ ತಂಡಕ್ಕೆ ಆಯ್ಕೆಯಾದ ಕುರಿತು ಅತೀವ ಸಂತೋಷ ವ್ಯಕ್ತಪಡಿಸಿದ ಇಂದ್ರಾಣಿ, “ನನ್ನ ಕಠಿನ ಶ್ರಮಕ್ಕೆ ತಕ್ಕ ಬೆಲೆ ಸಿಕ್ಕಿದೆ. ಸೀನಿಯರ್ ಆಟಗಾರರೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡು, ಅವರೊಂದಿಗೆ ಎಷ್ಟೋ ಕ್ರಿಕೆಟ್ ಪಾಠಗಳನ್ನು ಕಲಿಯಬೇಕಿದೆ. ಹನ್ನೊಂದರ ಬಳಗಕ್ಕೆ ಆಯ್ಕೆಯಾಗಿ ಅತ್ಯುತ್ತಮ ಪ್ರದರ್ಶನ ನೀಡುವುದು ನನ್ನ ಗುರಿ’ ಎಂದರು.