Advertisement

ಲಾವಾ ಸ್ಫೋಟಕ್ಕೆ 13 ಸಾವು : ಇಂಡೋನೇಷ್ಯಾದ ಪೂರ್ವಭಾಗದಲ್ಲಿರುವ ಲುಮಾಜಂಗ್‌ನಲ್ಲಿ ಘಟನೆ

08:59 PM Dec 05, 2021 | Team Udayavani |

ಜಾವಾ : ಇಂಡೋನೇಷ್ಯಾದ ದ್ವೀಪವಾದ ಜಾವಾ ದ್ವೀಪದ ಪೂರ್ವಭಾಗದಲ್ಲಿರುವ ಲುಮಾಜಂಗ್‌ ಜಿಲ್ಲೆಯಲ್ಲಿರುವ ಮೌಂಟ್‌ ಸೆಮೆರು ಜ್ವಾಲಾಮುಖಿ ಪರ್ವತದಿಂದ ಶನಿವಾರದಂದು ದಿಢೀರನೆ ಜ್ವಾಲಾಮುಖೀ ಸ್ಫೋಟಗೊಂಡಿದೆ. ಲಾವಾರಸವು ಧಾರಾಕಾರವಾಗಿ ಸುತ್ತಲಿನ ಹಳ್ಳಿಗಳಿಗೆ ಆವರಿಸಿದ್ದು, ಈ ದುರ್ಘ‌ಟನೆಯಲ್ಲಿ 13 ಜನರು ಸಾವಿಗೀಡಾಗಿದ್ದಾರೆ.

Advertisement

ಸ್ಫೋಟದ ಭೀಕರತೆಗೆ ಜ್ವಾಲಾಮುಖೀಯ ಪರ್ವದ ಬಾಯಿಯಿಂದ ಸುಮಾರು 12,000 ಮೀಟರ್‌ಗಳಷ್ಟು ಎತ್ತರಕ್ಕೆ ಧೂಮ ಚಿಮ್ಮಿದ್ದು, ಅದರ ಬೆನ್ನಿಗೇ ಲಾವಾರಸವು ಜ್ವಾಲಾಮುಖಿ ಪರ್ವತದಿಂದ ಹರಿಯಲಾರಂಭಿಸಿತು. ಲಾವಾದಿಂದಾಗಿ, ಲುಮಾಜಂಗ್‌ನೊಂದಿಗೆ ಹತ್ತಿರದ ಮಾಲಂಗ್‌ ಜಿಲ್ಲೆಗೆ ಸಂಪರ್ಕಿಸುವ ಪ್ರಮುಖ ರಸ್ತೆಯಲ್ಲಿರುವ ಸೇತುವೆಯು ನಾಶವಾಗಿದೆ. ಇದರಿಂದಾಗಿ, ಲುಮಾಜಂಗ್‌ಗೆ ಸಂಪರ್ಕ ನಿಲುಗಡೆಯಾಗಿದೆ.

ಸುತ್ತಲಿನ ಹಳ್ಳಿಗಳಲ್ಲೆಲ್ಲಾ ಹಾರುಬೂದಿ ಆವರಿಸಿಕೊಂಡಿತ್ತು, ಅದರ ಬೆನ್ನಿಗೇ ಅಗಾಧ ಮಳೆ ಸುರಿಯಲಾರಂಭಿಸಿದೆ. ಮಳೆಯಿಂದಾಗಿ ತಣ್ಣಗಾಗಿರುವ ಲಾವಾರಸವು ಸುತ್ತಲಿನ ಹಳ್ಳಿಗಳಲ್ಲೆಲ್ಲಾ ದೈತ್ಯ ಬೂದಿಯ ಪದರವಾಗಿ ಬದಲಾಗಿದ್ದು ಅದರ ಅವಶೇಷಗಳಲ್ಲಿ ಬದುಕುಳಿದಿರಬಹುದಾದ ಜನರನ್ನು ಪತ್ತೆ ಹಚ್ಚುವ ಕಾರ್ಯ ಆರಂಭಿಸಲಾಗಿದೆ.

ಇದನ್ನೂ ಓದಿ : ಸೇವೆಗೆ ಸೇರಿದ 3 ತಿಂಗಳಲ್ಲೇ ಮುದ್ದೇಬಿಹಾಳದ ಯೋಧ ಆತ್ಮಹತ್ಯೆ

Advertisement

Udayavani is now on Telegram. Click here to join our channel and stay updated with the latest news.

Next