Advertisement

ಇಂಡೋನೇಷ್ಯಾ ಓಪನ್‌ ಬ್ಯಾಡ್ಮಿಂಟನ್‌ : ಪ್ರಣಯ್‌ಗೆ ಸೋತ ಲಕ್ಷ್ಯ ಸೇನ್‌

10:29 PM Jun 15, 2022 | Team Udayavani |

ಜಕಾರ್ತಾ: ಇಂಡೋನೇಷ್ಯಾ ಓಪನ್‌ ಬ್ಯಾಡ್ಮಿಂಟನ್‌ ಪಂದ್ಯಾವಳಿಯಿಂದ ಭಾರತದ ಭರವಸೆಯ ಆಟಗಾರ ಲಕ್ಷ್ಯ ಸೇನ್‌ ಹೊರಬಿದ್ದಿದ್ದಾರೆ. ಭಾರತದವರೇ ಆದ ಎಚ್‌.ಎಸ್‌. ಪ್ರಣಯ್‌ ವಿರುದ್ಧದ ದ್ವಿತೀಯ ಸುತ್ತಿನ ಕಾದಾಟದಲ್ಲಿ ಸೇನ್‌ 10-21, 9-21 ಅಂತರದಿಂದ ಎಡವಿದರು.

Advertisement

ಇದು ಲಕ್ಷ್ಯ ಸೇನ್‌ ವಿರುದ್ಧ ಎಚ್‌.ಎಸ್‌. ಪ್ರಣಯ್‌ ಸಾಧಿಸಿದ ಮೊದಲ ಗೆಲುವು. ಇವರಿಬ್ಬರ ತೃತೀಯ ಮುಖಾಮುಖಿ ಇದಾಗಿದೆ.

ಪುರುಷರ ಡಬಲ್ಸ್‌ನಲ್ಲಿ ಎಂ.ಆರ್‌. ಅರ್ಜುನ್‌- ಧ್ರುವ ಕಪಿಲ, ತಮಗಿಂತ ಉನ್ನತ ರ್‍ಯಾಂಕಿಂಗ್‌ನ ಜಪಾನಿ ಆಟಗಾರರಾದ ಕೆಲಿಶಿರೊ -ಯೊಶಿನೋರಿ ಟಕೇಯುಚಿ ವಿರುದ್ಧ ಭಾರೀ ಹೋರಾಟ ನಡೆಸಿ 27-25, 18-25, 21-19 ಅಂತರದ ಮೇಲುಗೈ ಸಾಧಿಸಿದರು.

ಆದರೆ ವನಿತಾ ಡಬಲ್ಸ್‌ನಲ್ಲಿ ಅಶ್ವಿ‌ನಿ ಭಟ್‌-ಶಿಖಾ ಗೌತಮ್‌, ಹರಿತಾ ಎಂ. ಹರಿನಾರಾಯಣ್‌-ಆಶಾ ನೋಯ್‌ ಪರಾಭವಗೊಂಡರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next