Advertisement
ದ್ವಿತೀಯ ಸುತ್ತಿನ ಹೋರಾಟದಲ್ಲಿ ಶ್ರೀಕಾಂತ್ ತನ್ನ ದೇಶದವರೇ ಆದ ಲಕ್ಷ್ಯ ಸೇನ್ ಅವರನ್ನು 21-17, 22-20 ಗೇಮ್‌ಗಳಿಂದ ಉರುಳಿಸಿ ಮುನ್ನಡೆದರು. ಶ್ರೀಕಾಂತ್ ಕ್ವಾರ್ಟರ್‌ಫೈನಲ್‌ನಲ್ಲಿ ಚೀನದ ಲಿ ಶಿ ಫೆಂಗ್ ಅವರ ಸವಾಲನ್ನು ಎದುರಿಸಲಿದ್ದಾರೆ. ಅವರು ಇನ್ನೊಂದು ದ್ವಿತೀಯ ಸುತ್ತಿನ ಸೆಣಸಾಟದಲ್ಲಿ ಸಿಂಗಾಪುರದ ನಾಲ್ಕನೇ ಶ್ರೇಯಾಂಕದ ಲೋಹ್ ಕೀನ್ ಯ್ಯು ಅವರನ್ನು 21-19, 21-14 ಗೇಮ್‌ಗಳಿಂದ ಕೆಡಹಿದ್ದರು.
ಏಳನೇ ಶ್ರೇಯಾಂಕದ ಪ್ರಣಯ್ ಕೇವಲ 43 ನಿಮಿಷಗಳ ಹೋರಾಟ ದಲ್ಲಿ ಹಾಂಕಾಂಗ್‌ನ ಆ್ಯಂಗಸ್ ಎನ್‌ಜಿ ಕ ಲಾಂಗ್ ಅವರನ್ನು 21-18, 21-16 ಗೇಮ್‌ಗಳಿಂದ ಉರುಳಿಸಿ ಕ್ವಾರ್ಟರ್‌ಫೈನಲ್ ಹಂತಕ್ಕೇರಿದರು. ಮುಂದಿನ ಸುತ್ತಿನಲ್ಲಿ ಅವರು ಜಪಾನಿನ ಮೂರನೇ ಶ್ರೇಯಾಂಕದ ಕೊಡಾಯ್ ನರೋಕ ಅವರನ್ನು ಎದುರಿಸಲಿದ್ದಾರೆ. ಸಿಂಧುಗೆ ಆಘಾತ
ವಿಶ್ವದ 14ನೇ ರ್‍ಯಾಂಕಿನ ಸಿಂಧು ಮತ್ತೂಮ್ಮೆ ಬೇಗನೇ ಸೋಲನ್ನು ಕಂಡು ಹೊರಬಿದ್ದಿದ್ದಾರೆ. ಅವರು ವಿಶ್ವದ ಮೂರನೇ ರ್‍ಯಾಂಕಿನ ಚೈನೀಸ್ ತೈಪೆಯ ತೈ ಟಿಝು ಯಿಂಗ್ ಅವರಿಗೆ 18-21, 16-21 ಗೇಮ್‌ಗಳಿಂದ ಶರಣಾದರು. ಸಿಂಧು ಕಳೆದ ಎರಡು ಕೂಟಗಳಲ್ಲಿ ಕೂಡ ಮೊದಲ ಸುತ್ತಿನಲ್ಲಿ ಸೋಲನ್ನು ಕಂಡಿದ್ದರು. ಈ ಸೋಲಿನಿಂದಾಗಿ ವನಿತೆಯರ ಸಿಂಗಲ್ಸ್‌ನಲ್ಲಿ ಭಾರತದ ಸವಾಲು ಅಂತ್ಯಗೊಂಡಿದೆ.
Related Articles
ಭಾರತದ ಉದಯೋನ್ಮುಖ ತಾರೆ ಪ್ರಿಯಾಂಶು ರಾಜಾವತ್ ಕಠಿನ ಹೋರಾಟದಲ್ಲಿ ಸ್ಥಳೀಯ ಫೇವರಿಟ್ ಅಂತೋನಿ ಗಿಂಟಿಂಗ್ ಅವರಿಗೆ 22-20, 15-21, 15-21 ಗೇಮ್‌ಗಳಿಂದ ಶರಣಾಗಿ ಹೊರಬಿದ್ದರು. 2022ರಲ್ಲಿ ಥಾಮಸ್ ಕಪ್ ಗೆದ್ದ ಭಾರತೀಯ ತಂಡದ ಸದಸ್ಯರಾಗಿದ್ದ ರಾಜಾವತ್ ಈ ವರ್ಷದ ಆರಂಭದಲ್ಲಿ ಆರ್ಲಿಯಾನ್ಸ್ ಮಾಸ್ಟರ್ ಕೂಟದ ಪ್ರಶಸ್ತಿ ಜಯಿಸಿದ್ದರು. ಇದು ಅವರ ಚೊಚ್ಚಲ ವಿಶ್ವ ಟೂರ್ ಪ್ರಶಸ್ತಿ ಯಾಗಿತ್ತು.
Advertisement
ಚಿರಾಗ್-ಸಾತ್ವಿಕ್ ಮುನ್ನಡೆಪುರುಷರ ಡಬಲ್ಸ್‌ನಲ್ಲಿ ವಿಶ್ವದ 5ನೇ ರ್‍ಯಾಂಕಿನ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಚೀನದ ಹೆ ಜಿ ತಿಂಗ್ ಮತ್ತು ಝೋ ಹಾವೊ ಡಾಂಗ್ ಅವರನ್ನು 21-17, 21-15 ಗೇಮ್‌ಗಳಿಂದ ಕೆಡಹಿ ಕ್ವಾರ್ಟರ್‌ಫೈನಲ್ ಹಂತಕ್ಕೇರಿದರು. ಮುಂದಿನ ಸುತ್ತಿನಲ್ಲಿ ಅವರು ಅಗ್ರ ಶ್ರೇಯಾಂಕದ ಫಜರ್ ಅಲ್ಫಿಯಾನ್ ಮತ್ತು ಮುಹಮ್ಮದ್ ರಿಯಾನ್ ಆರ್ಡಿಯಾಂತೊ ಅವರನ್ನು ಎದುರಿಸಲಿದ್ದಾರೆ.