Advertisement

ಇಂಡೋನೇಷ್ಯಾ ಮಾಸ್ಟರ್ ಸೂಪರ್‌ 500: ಪಿ.ವಿ. ಸಿಂಧು , ಲಕ್ಷ್ಯ ಸೇನ್‌ ಪರಾಭವ

11:09 PM Jun 10, 2022 | Team Udayavani |

ಜಕಾರ್ತಾ: ಇಂಡೋನೇಷ್ಯಾ ಮಾಸ್ಟರ್ ಸೂಪರ್‌ 500 ಪಂದ್ಯಾವಳಿಯಿಂದ ಭಾರತದ ಪಿ.ವಿ. ಸಿಂಧು ಮತ್ತು ಲಕ್ಷ್ಯ ಸೇನ್‌ ಹೊರಬಿದ್ದಿದ್ದಾರೆ. ಇವರಿಬ್ಬರೂ ಕ್ವಾರ್ಟರ್‌ ಫೈನಲ್‌ನಲ್ಲಿ ಮುಗ್ಗರಿಸಿದರು.

Advertisement

ಪಿ.ವಿ. ಸಿಂಧು ಅವರನ್ನು ವಿಶ್ವದ ನಂ.8 ಆಟಗಾರ್ತಿ, ಥಾಯ್ಲೆಂಡ್‌ನ‌ ರಚನೋಕ್‌ ಇಂತಾನನ್‌ 21-12, 21-10 ಅಂತರದಿಂದ ಸುಲಭದಲ್ಲಿ ಮಣಿಸಿದರು. ಇದು ಇಂತಾನನ್‌ ವಿರುದ್ಧ ಸಿಂಧು ಅನುಭವಿಸಿದ ಸತತ 5ನೇ ಸೋಲು. ಇಂತಾನನ್‌ 13 ಪಂದ್ಯಗಳಲ್ಲಿ ಸಾಧಿಸಿದ 9ನೇ ಗೆಲುವು.

ಪುರುಷರ ಸಿಂಗಲ್ಸ್‌ನಲ್ಲಿ ಲಕ್ಷ್ಯ ಸೇನ್‌ ಚೈನೀಸ್‌ ತೈಪೆಯ ಚೊ ಟೀನ್‌ ಚೆನ್‌ ವಿರುದ್ಧ ಭಾರೀ ಹೋರಾಟ ನಡೆಸಿ 19-21, 21-13, 17-21 ಅಂತರದಿಂದ ಪರಾಭವಗೊಂಡರು.

Advertisement

Udayavani is now on Telegram. Click here to join our channel and stay updated with the latest news.

Next