ಜಕಾರ್ತಾ: ಇಂಡೋನೇಷ್ಯಾ ಮಾಸ್ಟರ್ ಸೂಪರ್-500 ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾರತದ ಲಕ್ಷ್ಯ ಸೇನ್ ಅವರ ಓಟ ಕೊನೆಗೊಂಡಿದೆ.
ಶುಕ್ರವಾರ ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ಅವರು ಏಷ್ಯನ್ ಗೇಮ್ಸ್ ಚಾಂಪಿಯನ್ ಜೊನಾಥನ್ ಕ್ರಿಸ್ಟಿ ವಿರುದ್ಧ ಪರಾಭವಗೊಂಡರು.
ವಿಶ್ವದ 12ನೇ ರ್‍ಯಾಂಕಿಂಗ್ ಆಟಗಾರನಾಗಿರುವ ಕಾಮೆನ್ವೆಲ್ತ್ ಗೇಮ್ಸ್ ಚಾಂಪಿಯನ್ ಲಕ್ಷ್ಯ ಸೇನ್ ಅವರನ್ನು ಜೊನಾಥನ್ ಕ್ರಿಸ್ಟಿ 15-21, 21-10, 21-13ರಿಂದ ಮಣಿಸಿದರು. ಮೊದಲ ಗೇಮ್ ಗೆದ್ದರೂ ಈ ಮುನ್ನಡೆಯನ್ನು ಕಾಯ್ದುಕೊಳ್ಳಲು ಭಾರತೀಯನಿಂದ ಸಾಧ್ಯವಾಗಲಿಲ್ಲ. ಜೊನಾಥನ್ ಕ್ರಿಸ್ಟಿ ವಿರುದ್ಧ ಲಕ್ಷ್ಯ ಸೇನ್ ಆಡಿದ 2ನೇ ಪಂದ್ಯ ಇದಾಗಿತ್ತು. ಮೊದಲ ಪಂದ್ಯದಲ್ಲಿ ಭಾರತೀಯನಿಗೆ ಗೆಲುವು ಒಲಿದಿತ್ತು.