Advertisement

ಇಂಡೋನೇಷ್ಯಾದಲ್ಲಿ ಪ್ರಬಲ ಭೂಕಂಪ: ಕನಿಷ್ಠ 10 ಜನರ ಸಾವು

11:48 AM Feb 27, 2022 | Team Udayavani |

ಜಕಾರ್ತಾ: ಇಂಡೋನೇಷ್ಯಾದ ಸುಮಾತ್ರಾ ದ್ವೀಪದಲ್ಲಿ ಪ್ರಬಲ ಭೂಕಂಪ ಸಂಭವಿಸಿದ ನಂತರ 10 ಜನರು ಸಾವನ್ನಪ್ಪಿದ್ದು, 400 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

Advertisement

ಶುಕ್ರವಾರ ಬೆಳಗ್ಗೆ ಪಶ್ಚಿಮ ಸುಮಾತ್ರಾ ಪ್ರಾಂತ್ಯದಲ್ಲಿ ಸಂಭವಿಸಿದ 6.2 ತೀವ್ರತೆಯ ಭೂಕಂಪದಿಂದ ಕುಸಿದುಬಿದ್ದ ಮನೆಗಳ ಅವಶೇಷಗಳಿಂದ ಶನಿವಾರ ತಡರಾತ್ರಿ ಎರಡು ಮೃತದೇಹಗಳನ್ನು ರಕ್ಷಕರು ಹೊರತೆಗೆದಿದ್ದಾರೆ ಎಂದು ರಾಷ್ಟ್ರೀಯ ವಿಪತ್ತು ತಗ್ಗಿಸುವಿಕೆ ಏಜೆನ್ಸಿಯ ವಕ್ತಾರ ಅಬ್ದುಲ್ ಮುಹಾರಿ ತಿಳಿಸಿದ್ದಾರೆ.

ಸಾವಿರಾರು ಮಂದಿಯನ್ನು ಸ್ಥಳಾಂತರಗೊಳಿಸಲಾಗಿದ್ದು, ಶೋಧ ಕಾರ್ಯಗಳು ಭಾನುವಾರ ಮುಂದುವರಿದಿದೆ ಎಂದು ವಿಪತ್ತು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭೂಕಂಪದಿಂದ ಕನಿಷ್ಠ 388 ಜನರು ಸಂಕಷ್ಟದಲ್ಲಿದ್ದು, ಕಂಪನಗಳು ಮಲೇಷ್ಯಾ ಮತ್ತು ಸಿಂಗಾಪುರದವರೆಗೆ ಅನುಭವಕ್ಕೆ ಬಂದಿವೆ ಮತ್ತು ಸುಮಾರು 42 ಜನರು ಇನ್ನೂ ಗಂಭೀರ ಗಾಯಗಳಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮುಹಾರಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next