Advertisement

Indo-US: ಚಂದ್ರಯಾನದಂತೆ ಭಾರತ-ಅಮೆರಿಕ ಬಾಂಧವ್ಯವು ಎತ್ತರಕ್ಕೆ: ಜೈಶಂಕರ್‌

07:55 PM Oct 01, 2023 | Team Udayavani |

ವಾಷಿಂಗ್ಟನ್‌: ಚಂದ್ರಯಾನದಂತೆ ಭಾರತ-ಅಮೆರಿಕ ನಡುವಿನ ಬಾಂಧವ್ಯವು ಚಂದ್ರನೆತ್ತರಕ್ಕಷ್ಟೇ ಅಲ್ಲ, ಅದನ್ನು ಮೀರಿ ಬೆಳೆಯಲಿದೆ ಎಂದು ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಬಣ್ಣಿಸಿದ್ದಾರೆ.

Advertisement

ವಾಷಿಂಗ್ಟನ್‌ನಲ್ಲಿರುವ ಇಂಡಿಯಾ ಹೌಸ್‌ನಲ್ಲಿ ಅಮೆರಿಕಕ್ಕೆ ಭಾರತದ ರಾಯಭಾರಿ ಕಚೇರಿ ಆಯೋಜಿಸಿದ್ದ “ಸೆಲೆಬ್ರೇಟಿಂಗ್‌ ಕಲರ್ಸ್‌ ಆಫ್ ಫ್ರೆಂಡ್‌ಶಿಪ್‌’ ಕಾರ್ಯಕ್ರಮದಲ್ಲಿ ಭಾರತೀಯ-ಅಮೆರಿಕನ್ನರನ್ನು ಉದ್ದೇಶಿಸಿ ಅವರು ಮಾತನಾಡಿದರು.

“ಭಾರತ ಮತ್ತು ಅಮೆರಿಕ ನಡುವಿನ ಬಾಂಧವ್ಯವು ಸಾರ್ವಕಾಲಿಕವಾಗಿ ಉತ್ತುಂಗದಲ್ಲಿದೆ. ಬದಲಾದ ಈ ಕಾಲಘಟ್ಟದಲ್ಲಿ ಉಭಯ ರಾಷ್ಟ್ರಗಳು ಒಬ್ಬರನ್ನೊಬ್ಬರು ಬಹಳ ಅಪೇಕ್ಷಣೀಯ, ಅತ್ಯುತ್ತಮ ಮತ್ತು ಆರಾಮದಾಯಕ ಪಾಲುದಾರರಾಗಿ ನೋಡುವ ಸ್ಥಾನಕ್ಕೆ ತಲುಪಿವೆ’ ಎಂದಿದ್ದಾರೆ.

“ಅಮೆರಿಕದ ಬೆಂಬಲವಿಲ್ಲದೇ ಜಿ20 ಶೃಂಗಸಭೆಯು ಅತ್ಯಂತ ಯಶಸ್ವಿಯಾಗಿ ಆಗುವುದು ಸಾಧ್ಯವಿರಲಿಲ್ಲ. ಅಮೆರಿಕದ ಕೊಡುಗೆ ಮತ್ತು ಸಹಾಯಕ್ಕಾಗಿ ಧನ್ಯವಾದಗಳು. ಉಭಯ ದೇಶಗಳ ನಡುವಿನ ಮಾನವೀಯ ಬಂಧವು, ದ್ವಿಪಕ್ಷೀಯ ಸಂಬಂಧವನ್ನು ಅನನ್ಯಗೊಳಿಸುತ್ತದೆ’ ಎಂದು ಎಸ್‌.ಜೈಶಂಕರ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next