ವಾಷಿಂಗ್ಟನ್: ಅಮೆರಿಕದಲ್ಲಿ ಇದೇ ವರ್ಷಾಂತ್ಯಕ್ಕೆ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಗೂ ಮುನ್ನ ಭಾರತ-ಅಮೆರಿಕ ನಡುವೆ ‘ಕಿರು ವ್ಯಾಪಾರ ಒಪ್ಪಂದ’ವೊಂದು ಏರ್ಪಡುವ ಸಾಧ್ಯತೆಯಿದೆ ಎಂದು ಅಮೆರಿಕದ ಆಂತರಿಕ ವ್ಯವಹಾರಗಳ ಸಹಾಯಕ ಸಚಿವ ಸ್ಟೀಫನ್ ಬೇಗನ್ ತಿಳಿಸಿದ್ದಾರೆ.
ಯು.ಎಸ್. ಇಂಡಿಯಾ ಸ್ಟ್ರಾಟೆಜಿಕ್ ಫೋರಂ (ಯುಎಸ್‌ಐಎಸ್‌ಪಿಎಫ್) ವತಿಯಿಂದ ಆಯೋಜಿಸಲಾಗಿದ್ದ ಇಂಡಿಯಾ-ಯುಎಸ್ ಲೀಡರ್‌ಶಿಪ್ ಸಮಿಟ್ ಎಂಬ ವಚ್ಯುವಲ್ ಸಮ್ಮೇಳನದಲ್ಲಿ ಅವರು ಮಾತನಾಡಿದರು.
ಅದೇ ಸಮ್ಮೇಳನದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಿದ್ದ ಭಾರತದಲ್ಲಿದ್ದ ಅಮೆರಿಕದ ಮಾಜಿ ರಾಯಭಾರಿ ರಿಚರ್ಡ್ ವರ್ಮಾ, ಇದೇ ನವೆಂಬರ್‌ನೊಳಗೆ ಅಮೆರಿಕ - ಭಾರತದ ನಡುವೆ ವ್ಯಾಪಾರ ಒಪ್ಪಂದ ಏರ್ಪಡುವ ಸಾಧ್ಯತೆಗಳಿವೆಯೇ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸ್ಟೀಫನ್, ”ಎರಡೂ ದೇಶಗಳ ನಡುವೆ ಕಿರು ವಾಣಿಜ್ಯ ಒಪ್ಪಂದ ರೂಪುಗೊಳ್ಳುವ ಸಾಧ್ಯತೆಯಿದೆ.
ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ- ವಹಿವಾಟಿಗೆ ಸಂಬಂಧಿಸಿದಂತೆ ಕೆಲವಾರು ಭಿನ್ನಾಭಿಪ್ರಾಯಗಳಿವೆ. ಅವುಗಳನ್ನು ಪರಿಹರಿಸಲು ಎರಡೂ ದೇಶಗಳು ಪ್ರಯತ್ನಿಸುತ್ತಿವೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಿನ ಗಾಢ ಸ್ನೇಹದಿಂದ ಅದು ಸಾಧ್ಯವಾಗಲೂಬಹುದು” ಎಂದರು.