ಕಾರವಾರ : ಇಲ್ಲಿನ ರವೀಂದ್ರನಾಥ ಠಾಗೋರ್ ಕಡಲತೀರದಲ್ಲಿ ಇಂಡೋ ಫೆಸಿಫಿಕ್ ಹಂಮ್ ಬ್ಯಾಕ್ ಡಾಲ್ಪಿನ್ ಶವ ಇಂದು ಅಪರಾಹ್ನ ಕಂಡು ಬಂದಿದೆ.
ಡಾಲ್ಪಿನ್ 7 ಅಡಿ ಉದ್ದವಿದೆ, 35 ವರ್ಷದ ಹೆಣ್ಣು ಡಾಲ್ಫಿನ್ ಇದಾಗಿದೆ ಎಂದು ಆರ್ ಎಫ್ ಓ ಪ್ರಮೋದ್ ತಿಳಿಸಿದ್ದಾರೆ .
ಡಾಲ್ಪಿನ್ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ಡಾಲ್ಫಿನ್ ದೇಹದಲ್ಲಿ ಯಾವುದೇ ರೀತಿಯಲ್ಲಿ ಆಂತರಿಕ ರಕ್ತ ಸೋರಿಕೆ ಯಾಗಿಲ್ಲ. ಹೊಟ್ಟೆಯಲ್ಲಿ ಪ್ಲಾಸ್ಟಿಕ್ ನಂತಹ ವಸ್ತು ಕಂಡು ಬರದ ಹಿನ್ನಲೆಯಲ್ಲಿ ವಯೋಸಹಜ ಸಾವು ಎಂದು ಮರಣೋತ್ತರ ಪರೀಕ್ಷೆಯಲ್ಲಿ ಧೃಡ ಪಟ್ಟಿದೆ ಎಂದು ಪಶು ವೈದ್ಯರು ತಿಳಿಸಿದ್ದಾರೆ.
ಕಾರವಾರ, ಮಾಜಾಳಿ, ದೇವಭಾಗ, ಅಲಿಗದ್ದಾದಲ್ಲಿ ದೊರೆತ ಡಾಲ್ಫಿನ್ ಶವಗಳ ಪೈಕಿ ಈ ವರ್ಷದಲ್ಲಿ ಸಾವನ್ನಪ್ಪಿದ ೫ ನೇ ಡಾಲ್ಫಿನ್ ಇದಾಗಿದೆ.
ಇದನ್ನೂ ಓದಿ : ಶ್ರೀರಂಗಪಟ್ಟಣದ ಬಳಿ ಕಾವೇರಿ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ಪ್ರವಾಸಿಗನ ರಕ್ಷಣೆ