Advertisement
ಅವರು ರವಿವಾರ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಗೌಡ ಸಾರಸ್ವತ ಬ್ರಾಹ್ಮಣ (ಜಿಎಸ್‌ಬಿ) ಸಮಾಜದ ವೈದಿಕರ ಧನ್ವಂತರಿ ಹವನ ಪ್ರಯುಕ್ತ ನಡೆದ ಸಭಾ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.ವಿದೇಶಿಯರು ಆಕ್ರಮಣ ಮಾಡಿದಾಗಲೂ ಸಂಸ್ಕೃತಿ, ಧರ್ಮ ಮುಖ್ಯ ಎಂದು ಗೋವೆಯಿಂದ ಕರಾವಳಿಗೆ ಬಂದು ನೆಲೆಸಿ, ವ್ಯಾಪಾರ, ಶಿಕ್ಷಣ, ವೈದಿಕ ಹೀಗೆ ಎಲ್ಲ ಕ್ಷೇತ್ರಗಳಲ್ಲಿಯೂ ಯಶಸ್ವಿಯಾಗಿದ್ದಾರೆ. ಜಿಎಸ್‌ಬಿ ಸಮಾಜ ಒಂದು ಅಪೂರ್ವ ಪರಂಪರೆಯನ್ನೇ ಹೊಂದಿದೆ ಎಂದರು.
“ತರಂಗ’ ವಾರಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಡಾ| ಸಂಧ್ಯಾ ಎಸ್. ಪೈ ಮಾತನಾಡಿ, ಹಿಂದೆ ಎಲ್ಲ ಧರ್ಮಗಳು ಒಂದೇ ಆಗಿದ್ದವು. ವೃತ್ತಿ ಪೃವೃತ್ತಿಯನ್ನು ನುಂಗಿದಾಗ ಧರ್ಮಗಳು, ಜಾತಿಗಳ ಮಧ್ಯೆ ಭೇದಭಾವ, ಬೇಲಿಗಳು ನಿರ್ಮಾಣವಾದವು. ಇದರಿಂದ ಅಸಹಿಷ್ಣುತೆ ಹುಟ್ಟಿಕೊಂಡಿತು. ಇದು ಈಗ ಅತ್ಯಂತ ಭೀಕರತೆಯನ್ನು ಹುಟ್ಟಿಹಾಕಿದೆ. ಇದರಿಂದ ಜೀವನದ ಗುರಿಯನ್ನು ತಿಳಿದುಕೊಳ್ಳುವುದು ಅಸಾಧ್ಯ. ಸಮಾಜಮುಖೀ ಕಾರ್ಯ ಮಾಡುತ್ತಿರುವ ಶ್ರೀಗಳು ಎಲ್ಲರನ್ನು ಒಂದುಗೂಡಿಸುವ ಐತಿಹಾಸಿಕ ಕಾರ್ಯಕ್ಕೆ ನಾಂದಿ ಹಾಡಿದ್ದಾರೆ ಎಂದರು.
Related Articles
Advertisement
“ಸಂಪ್ರದಾಯದಲ್ಲಿ ವ್ಯತ್ಯಾಸ, ಸಿದ್ಧಾಂತ ಒಂದೇ’ಜಿಎಸ್‌ಬಿ ಸಮಾಜ ಹಾಗೂ ಶಿವಳ್ಳಿ ಸಮಾಜದಲ್ಲಿ ಸಂಪ್ರದಾಯದಲ್ಲಿ ವ್ಯತ್ಯಾಸವಿರಬಹುದು, ಆದರೆ ಸಿದ್ಧಾಂತ ಮಾತ್ರ ಒಂದೇ ಆಗಿದೆ. ಜಿಎಸ್‌ಬಿ ಸಮಾಜದ ಕೈವಲ್ಯ ಮಠ, ಕಾಶೀ ಹಾಗೂ ಪರ್ತಗಾಳಿ ಮಠಗಳೆಲ್ಲವುಗಳ ಜತೆಗೂ ಅನ್ಯೋನ್ಯ ಸಂಬಂಧವಿದೆ. ಎಲ್ಲ ಮಠಗಳ ಶ್ರೀಗಳು ಹಾಗೂ ಶಿಷ್ಯ ವೃಂದ ಆತ್ಮೀಯರಾಗಿದ್ದಾರೆ. ಮೊದಲ ಪರ್ಯಾಯದಲ್ಲಿ ಅ.ಭಾ. ಮಾಧ್ವ ತಣ್ತೀಜ್ಞಾನ ಸಮ್ಮೇಳನ, ಎರಡನೇ ಪರ್ಯಾಯದಲ್ಲಿ ಹಿಂದೂ ಸಮಾವೇಶದಲ್ಲಿ ಜಿಎಸ್‌ಬಿ ಸಮಾಜದವರು ಸಹಕಾರ ನೀಡಿದ್ದಾರೆ. ಈ ಕಾರ್ಯಕ್ರಮದಿಂದ ಆ ಸಂಬಂಧ ಇನ್ನಷ್ಟು ಗಟ್ಟಿಯಾಗಿ ರೂಪುಗೊಳ್ಳಲಿ ಎಂದು ಶ್ರೀಗಳು ಹಾರೈಸಿದರು.