Advertisement

ಇಂಡೋ-ಬಾಂಗ್ಲಾ ಜಲಸಾರಿಗೆ

01:48 AM Sep 06, 2020 | mahesh |

ಅಗರ್ತಲಾ: ಭಾರತ ಮತ್ತು ಬಾಂಗ್ಲಾದೇಶ ನಡುವಿನ ಒಳನಾಡು ಜಲಸಾರಿಗೆ ಪ್ರಾಯೋಗಿಕವಾಗಿ ಆರಂಭಗೊಂಡಿದೆ. ಬಾಂಗ್ಲಾದೇಶದಿಂದ ಹೊರಟ 50 ಮೆಟ್ರಿಕ್‌ ಟನ್‌ ಸಿಮೆಂಟು ಸರಕು ಹೊತ್ತ ದೋಣಿ ತ್ರಿಪುರಾದ ಸೋನಾಮುರ ಬಂದರನ್ನು ತಲುಪಲಿದೆ.

Advertisement

ತ್ರಿಪುರಾಕ್ಕೆ ಆಗಮಿಸುವ ಈ ದೋಣಿಯನ್ನು ಕೇಂದ್ರ ಸಚಿವ ಮನ್‌ಸುಖ್‌ ಮಾಂಡವಿಯಾ ನವದೆಹಲಿಯಿಂದ ವಿಡಿಯೊ ಕಾನ್ಫರೆನ್ಸ್‌ನಲ್ಲಿ ಸ್ವಾಗತಿಸಲಿದ್ದಾರೆ. ಇಲ್ಲಿಯ ತನಕ ಭೂಮಾರ್ಗಗಳ ಮೂಲಕ ಈಶಾನ್ಯ ರಾಜ್ಯ ತ್ರಿಪುರಾಕ್ಕೆ ಸರಕು ಸಂಚಾರ ನಡೆಸಲಾಗುತ್ತಿತ್ತು. ಈ ಸಾಗಾಟ ದುಬಾರಿಯಾದ ಕಾರಣ, ಬಾಂಗ್ಲಾ ಬಂದರುಗಳನ್ನು ಬಳಸಿಕೊಂಡು ಒಳನಾಡು ಜಲಮಾರ್ಗಗಳ ಮೂಲಕ ತ್ರಿಪುರಾಕ್ಕೆ ಸರಕು ಸಾಗಿಸಲು ಕೇಂದ್ರ ಸರ್ಕಾರ ಯೋಜಿಸಿತ್ತು.

ಮೇ ತಿಂಗಳಿನಲ್ಲಿ “ಇಂಡೋ- ಬಾಂಗ್ಲಾ ಪ್ರೊಟೊ ಕಾಲ್‌’ (ಐಬಿಪಿ) ಮಾರ್ಗಗಳಿಗೆ ಸೋನಾಮುರ (ತ್ರಿಪುರಾ)- ದೌಡ್ಕಂಡಿ (ಬಾಂಗ್ಲಾದೇಶ) ಜಲ ಮಾರ್ಗ ವನ್ನು ಸೇರಿಸುವ ಒಪ್ಪಂದಕ್ಕೂ ಉಭಯ ರಾಷ್ಟ್ರಗಳು ಸಹಿಹಾಕಿದ್ದವು.

ಗೋಮತಿ- ಮೇಘನಾ: ಬಾಂಗ್ಲಾದೇಶ ಅಧಿಕಾರಿಗಳ ಸರ್ವೇ ಪ್ರಕಾರ, ಸೋನಾಮುರಾ- ದೌಡ್ಕಂಡಿ ಪ್ರೊಟೊಕಾಲ್‌ ಮಾರ್ಗ 90 ಕಿ.ಮೀ.ಗಳಲ್ಲಿ 89.5 ಕಿ.ಮೀ. ಬಾಂಗ್ಲಾದೇಶದಲ್ಲಿಯೇ ಬರುತ್ತದೆ. ತ್ರಿಪುರಾದ ಗೋಮತಿ ನದಿ, ಬಾಂಗ್ಲಾದೇಶದ ಮೇಘನಾ ನದಿ ಮೂಲಕ ಭಾರತದ ರಾಷ್ಟ್ರೀಯ ಜಲಮಾರ್ಗಗಳೊಂದಿಗೆ ಸಂಪರ್ಕ ಬೆಸೆಯುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next