Advertisement
ಚೀನವು ಭಾರತಕ್ಕಷ್ಟೇ ಅಲ್ಲ, ಅಮೆರಿಕಕ್ಕೂ ತಲೆನೋವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಿರುವುದು ಮಹತ್ವದ ಬೆಳವಣಿಗೆ. ಮೂರನೇ ಆವೃತ್ತಿಯ 2+2 ಮಾತುಕತೆಗಾಗಿ ಭಾರತಕ್ಕೆ ಬಂದಿರುವ ಅಮೆರಿಕದ ವಿದೇಶಾಂಗ ಸಚಿವ ಮೈಕ್ ಪೊಂಪ್ಯೋ ಮತ್ತು ರಕ್ಷಣ ಸಚಿವ ಮಾರ್ಕ್ ಟಿ. ಇಸ್ಪಾರ್ ಹಾಗೂ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ರಕ್ಷಣ ಸಚಿವ ರಾಜನಾಥ್ ಸಿಂಗ್ ಅವರ ಉಪಸ್ಥಿತಿಯಲ್ಲಿ ಈ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ವಿಶೇಷವೆಂದರೆ ಈ ಒಪ್ಪಂದದಿಂದ ನೆರೆ ರಾಷ್ಟ್ರಗಳ ಮಿಲಿಟರಿ ಮತ್ತು ಮಿಲಿಟೆಂಟ್ ಗುರಿಗಳನ್ನು ನಿಖರವಾಗಿ ಪತ್ತೆಹಚ್ಚಬಹುದು.
ಬೇಸಿಕ್ ಎಕ್ಸ್‌ಚೇಂಜ್ ಆ್ಯಂಡ್ ಕೋ-ಆಪರೇಶನ್ ಅಗ್ರಿಮೆಂಟ್‌ನಿಂದಾಗಿ ಎರಡೂ ದೇಶಗಳಿಗೆ ಪ್ರಯೋಜನವಿದೆ. ಇದರಡಿ ಭಾರತ ಮತ್ತು ಅಮೆರಿಕ ನಕಾಶೆಗಳು, ವಾಣಿಜ್ಯ ಮತ್ತು ಇತರ ಅನ್‌ಕ್ಲಾಸಿಫೈಡ್ (ಗೌಪ್ಯ) ಚಿತ್ರಗಳು, ಜಿಯೋಡೇಟಿಕ್, ಜಿಯೋಫಿಸಿಕಲ್, ಜಿಯೋಮ್ಯಾಗ್ನೆಟಿಕ್ ಮತ್ತು ಗ್ರ್ಯಾವಿಟಿ ಡಾಟಾಗಳನ್ನೂ ಹಂಚಿಕೊಳ್ಳಲಿವೆ. ನಿಖರವಾಗಲಿದೆ ಕ್ಷಿಪಣಿ ಗುರಿ!
ಚೀನ, ಪಾಕ್ ಭಾರತಕ್ಕೆ ತಲೆನೋವಾಗಿರುವ ಸಂದರ್ಭದಲ್ಲೇ ಒಪ್ಪಂದಕ್ಕೆ ಸಹಿ ಹಾಕಿರುವುದು ಮಹತ್ವ ಪಡೆದಿದೆ. ಭಾರತದ ಕ್ಷಿಪಣಿ ವ್ಯವಸ್ಥೆಗೆ ಅತ್ಯಂತ ನಿಖರವಾಗಿ ಟಾರ್ಗೆಟ್ ಗುರುತಿಸಬಲ್ಲ ವ್ಯವಸ್ಥೆಯೊಂದು ಬೇಕಾಗಿದೆ. ಅಮೆರಿಕದ ನಿಖರ ಸ್ಯಾಟಲೈಟ್ ದತ್ತಾಂಶಗಳು ಸಿಗಲಿರುವುದು ಕ್ಷಿಪಣಿ ವ್ಯವಸ್ಥೆಗೆ ಇನ್ನಷ್ಟು ಬಲ ತುಂಬಿದಂತೆ ಎಂದು ರಕ್ಷಣ ತಜ್ಞರು ಹೇಳಿದ್ದಾರೆ. ಪಾಕ್ ಗಡಿಯಲ್ಲಿ ಅಡಗಿರುವ ಉಗ್ರರ ನೆಲೆಗಳನ್ನೂ ಗುರುತಿಸಿ ನೇರವಾಗಿ ದಾಳಿ ಮಾಡಬಲ್ಲ ಶಕ್ತಿಯೂ ಹೆಚ್ಚಾಗಲಿದೆ.
Related Articles
– ಅಮೆರಿಕದ ಅತ್ಯಂತ ನಿಖರವಾದ ಸ್ಯಾಟಲೈಟ್ ಮಾಹಿತಿ ಭಾರತಕ್ಕೆ ಲಭ್ಯ
– ಶತ್ರುಗಳ ಮಿಲಿಟರಿ ತಾಣಗಳ ಬಗ್ಗೆ ಕರಾರುವಾಕ್ ಮಾಹಿತಿ ಸಿಗಲಿದೆ
– ಕ್ಲಾಸಿಫೈಡ್ (ಗೌಪ್ಯ) ಮಾಹಿತಿಹಂಚಿಕೊಳ್ಳಲು ಅವಕಾಶ
– ಮೂರನೇ ದೇಶದೊಂದಿಗೆ ಈ ಮಾಹಿತಿ ಹಂಚಿಕೊಳ್ಳುವಂತಿಲ್ಲ
Advertisement
5 ಒಪ್ಪಂದಗಳಿಗೆ ಸಹಿ1 ಬೇಸಿಕ್ ಎಕ್ಸ್‌ಚೇಂಜ್ ಆ್ಯಂಡ್ ಕೋ-ಆಪರೇಶನ್ ಅಗ್ರಿಮೆಂಟ್(ಬಿಇಸಿಎ)
2 ಭೂ ವಿಜ್ಞಾನಗಳ ಬಗೆಗಿನ ತಾಂತ್ರಿಕ ಸಹಕಾರ ಒಪ್ಪಂದ
3 ವಿತ್ತೀಯ ಸಹಕಾರದ ವ್ಯವಸ್ಥೆ ಮೇಲಿನ ನಿರ್ವಹಣ ವಿಸ್ತರಣೆ ಒಪ್ಪಂದ
4 ಅಂಚೆ ಸೇವೆಗಳ ಒಪ್ಪಂದ
5 ಕ್ಯಾನ್ಸರ್ ಸಂಶೋಧನೆ, ಆಯುರ್ವೇದ ಸಹಕಾರ