Advertisement

PM ಮೋದಿಯಿಂದ ಭ್ರಷ್ಟಾಚಾರಕ್ಕೆ ಪರೋಕ್ಷ ಬೆಂಬಲ: ಉಗ್ರಪ್ಪ

10:13 PM Jul 28, 2024 | Team Udayavani |

ಚಿಕ್ಕಮಗಳೂರು: ಮೋದಿಯಂಥ ದುರ್ಬಲ ಪ್ರಧಾನಮಂತ್ರಿ ಭ್ರಷ್ಟಾಚಾರಕ್ಕೆ ಪರೋಕ್ಷವಾಗಿ ಬೆಂಬಲ ನೀಡಿದ್ದಾರೆ ಎಂದು ಕೆಪಿಸಿಸಿ ಸತ್ಯ ಸಂಶೋಧನಾ ಸಮಿತಿ ಅಧ್ಯಕ್ಷ ಉಗ್ರಪ್ಪ(V. S. Ugrappa) ಟೀಕಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೋದಿ ಆಡಳಿತದಲ್ಲಿ ರೈತರಿಗೆ ದೌರ್ಜನ್ಯವಾಗಿದೆ. ದೇಶದ ಸಾಲ 180 ಲಕ್ಷ ಕೋಟಿ ರೂ.ಗೆ ತಲುಪಿದೆ. 1,675 ಕೋಟಿ ರೂ. ರಫೆಲ್‌ ಯುದ್ಧ ವಿಮಾನ ಅಂಬಾನಿ ಕಂಪನಿಯಿಂದ ಖರೀದಿಸಿದ್ದು, ಒಂದು ವಿಮಾನಕ್ಕೆ ಸಾವಿರ ಕೋಟಿ ಕಿಕ್‌ಬ್ಯಾಕ್‌ ಆಗಿದೆ.

5ಜಿ ದೂರಸಂಪರ್ಕದಲ್ಲಿ 55 ಸಾವಿರ ಕೋಟಿ ರೂ. ಭ್ರಷ್ಟಾಚಾರ ನಡೆದಿದೆ. ಇಷ್ಟೆಲ್ಲ ಆದರೂ ಏನು ಆಗಿಲ್ಲವೆಂಬಂತೆ ಮೋದಿ ನಡೆದುಕೊಳ್ಳುತ್ತಿದ್ದಾರೆ. ಮೋದಿ ಪಾಪದ ಕೊಡ ತುಂಬಿದೆ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next