Advertisement

ಇಂದಿರಾನಗರದಲ್ಲಿ ನಾರಿಯರ ಮೆಚ್ಚಿನ ಸ್ಯಾರಿ ಲೋಕ

04:46 PM Mar 04, 2017 | Team Udayavani |

ದೇಶದ ಪಾರಂಪರಿಕ ವೃತ್ತಿಯಾಗಿರುವ ಕೈಮಗ್ಗ ಮತ್ತು ಭಾರತೀಯ ನಾರಿಯ ಸಾಂಸ್ಕೃತಿಕ ಉಡುಗೆಯಾದ ಸೀರೆಯನ್ನು ಈ ಆಧುನಿಕ ಜಗತ್ತಿನಲ್ಲಿ ಮತ್ತಷ್ಟು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಟೈಟಾನ್‌ನ ತನೈರಾ ಮುಂದಾಗಿದೆ. ಇದಕ್ಕಾಗಿ ತನೈರಾದ ತಂಡ ದೇಶಾದ್ಯಂತ ಇರುವ ಪಾರಂಪರಿಕ ಕೈಮಗ್ಗ ನೇಕಾರರನ್ನು ಸಂಪರ್ಕಿಸಿ ಕೈಮಗ್ಗ ಉತ್ಪನ್ನಗಳು ಮತ್ತು ಕರಕುಶಲಯುಕ್ತ ಸೀರೆಗಳ ಸಂಗ್ರಹವನ್ನು ಬೆಂಗಳೂರಿನ ಇಂದಿರಾನಗರದ 100 ಅಡಿ ರಸ್ತೆಯಲ್ಲಿ ಆರಂಭವಾಗಿರುವ ತನೈರಾ ಶೋರೂಂನಲ್ಲಿ ಪ್ರದರ್ಶಿಸುತ್ತಿದೆ. ಅಸ್ಸಾಂನ ಮುಗಾಸ್‌, ಚೆಟ್ಟಿನಾಡಿನ ಕಾಟನ್‌, ಭಗಲ್ಪುರದ ತುಸ್ಸಾರ್‌, ಗುಜರಾತ್‌, ಆಂಧ್ರಪ್ರದೇಶ ಮತ್ತು ಒರಿಸ್ಸಾದ ಇಕತ್‌, ಬಂಗಾಳದ ಜಾಮ್‌ಧಾನಿ, ಲಕ್ನೋದ ಚಿಕಂಕರಿ ಕುಶಲ, ಅತ್ಯಾಕರ್ಷಕವಾದ ಮತ್ತು ಶಾಸ್ತ್ರೀಯವಾದ ಬನಾರಸ್‌ ರೇಷ್ಮೆ, ಕಾಂಜೀವರಂ, ಪಟಾನ್‌ ಪಟೋಲಾಸ್‌ ಮತ್ತು ಮಸ್ಲಿನ್‌ ಜಾಮ್‌ಧಾನಿಯಂತಹ ಹೇರ್‌ಲೂಂ ಪೀಸ್‌ನಂತಹ ಆಕರ್ಷಕವಾದ ಸೀರೆಗಳನ್ನು ಐಟಿ ಸಿಟಿಗೆ ಪರಿಚಯಿಸುತ್ತಿದೆ.

Advertisement

ಇಂದಿರಾನಗರದ 100 ಅಡಿ ರಸ್ತೆಯಲ್ಲಿರುವ ತನೈರಾ ಸ್ಟೋರ್‌ನಲ್ಲಿ 3500ಕ್ಕೂ ಅಧಿಕ ಸೀರೆ, ಲೆಹೆಂಗಾ, ಶಾಲುಗಳು ಮತ್ತು ದುಪಟ್ಟಾಗಳ ಸಂಗ್ರಹವೇ ಇದೆ. ಇವುಗಳ ಬೆಲೆ 2000 ರು.ಯಿಂದ ಪ್ರಾರಂಭ. ಇವಿಷ್ಟೇ ಅಲ್ಲದೆ, ರೆಡಿಮೇಟ್‌ ಕುಪ್ಪಸಗಳು, ಗ್ರಾಹಕರ ಅನುಕೂಲಕ್ಕಾಗಿ ಹೊಲಿಗೆ ಸೇವೆಯನ್ನೂ ಕಲ್ಪಿಸಿದೆ. ಮದುವೆ ಮತ್ತು ಇತರ ಶುಭ ಸಮಾರಂಭಗಳಿಗೆಂದು ಸೀರೆ ಕೊಳ್ಳಲು ಇದು ಹೇಳಿ ಮಾಡಿಸಿದ ಸ್ಥಳ. 

ನೂತನ ತನೈರಾ ಮಳಿಗೆಯಲ್ಲಿನ ಜವಳಿ ಉತ್ಪನ್ನಗಳ ಮೇಲಿನ ಕಲೆಗಾರಿಕೆ, ಗುಣಮಟ್ಟ ಗ್ರಾಹಕರಿಗೆ ವಿಶಿಷ್ಟ ಅನುಭವ ನೀಡಲಿದೆ ಎನ್ನುವುದು ಸಂಸ್ಥೆಯ ವಿಶ್ವಾಸ. 

Advertisement

Udayavani is now on Telegram. Click here to join our channel and stay updated with the latest news.

Next