Advertisement
ಹೂಳೆತ್ತುವ ಕೆಲಸ ಬಾಕಿನಗರಸಭೆ ವ್ಯಾಪ್ತಿಯಲ್ಲಿ 2ನೇ ಅತೀ ದೊಡ್ಡ ವಾರ್ಡ್ ಆಗಿರುವ ಬಡಗುಬೆಟ್ಟು ವಾರ್ಡ್‌ನಲ್ಲಿ ಮಳೆ ನೀರು ಹರಿದು ಹೋಗುವ ಚರಂಡಿಗಳ ಹೂಳೆತ್ತುವ ಕೆಲಸ ಬಹುತೇಕ ಬಾಕಿ ಇದ್ದು, ಇಲ್ಲಿನ ಪ್ರಮುಖ ಮಳೆ ಹರಿಯುವ ಚರಂಡಿ ಕುಕ್ಕಿಕಟ್ಟೆಯಿಂದ ಬಲಾಯಿ ಪಾದೆ ನಡುವೆ ಮುಖ್ಯ ತೋಡುಗಳ ಹೂಳೆತ್ತುವ ಕಾರ್ಯ ಬಾಕಿಯಲ್ಲೇ ಇದೆ. ವಾಸುದೇವಕೃಪಾ ಇಂಗ್ಲಿಷ್ ಮೀಡಿಯಂ ಶಾಲೆ, ಭೀಮಾನಗರ, ವಾಸುಕಿ ನಗರ, ಜಗನ್ನಾಥ ನಗರ, ದುರ್ಗಾನಗರ, ಬಡಗುಬೆಟ್ಟು ಪಾರ್ಕ್ ಬಳಿ ಪರಿಸ್ಥಿತಿ ಹೀಗೆಯೇ ಇದೆ.
ಇಂದಿರಾನಗರ ವಾರ್ಡ್‌ನ ದುಗ್ಲಿ ಪದವಿನಲ್ಲಿ ಮುಂಜಾವ 3 ಗಂಟೆಗೆ ನೀರು ಬಂದು 4 ಗಂಟೆಗೆ ಸ್ಥಗಿತವಾಗುವುದು ಮತ್ತು ಕೆಲವೊಮ್ಮೆ ಅದೂ ಇರುವುದಿಲ್ಲ. ಈ ಭಾಗದಲ್ಲಿ 170 ಮನೆ ಇದ್ದು, ಇಲ್ಲಿನ ಮಂದಿ ನೀರಿಗೆ ಪರದಾಡುವಂತಾಗಿದೆ. ಬೇಸಗೆಯಲ್ಲಿ ನೀರಿನ ಸಮಸ್ಯೆ ಇಲ್ಲಿ ಉಲ್ಬಣವಾಗುತ್ತದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
Related Articles
2 ತಿಂಗಳಿಂದ ಕಾರ್ಮಿಕರಿಲ್ಲದೆ ಮಳೆಗಾಲದ ಪೂರ್ವತಯಾರಿಗೆ ಸಮಸ್ಯೆಯಾಗಿದೆ. ಈ ಹಿಂದೆ ವಾರಕ್ಕೆ 2 ಬಾರಿ ಕಾರ್ಮಿಕರು ಬರುತ್ತಿದ್ದರು. ಈಗ ವಾರಕ್ಕೆ ಒಮ್ಮೆ 4 ಜನ ಮಾತ್ರ ಸಿಗುತ್ತಿದ್ದಾರೆ. ದುಗ್ಲಿಪದವಿನಲ್ಲಿ ತುಂಬ ನೀರಿನ ಸಮಸ್ಯೆ ಇದೆ. ಸದ್ಯ ಒಂದು ಕೊಳವೆ ಬಾವಿ ಮಾಡಿ ತಾತ್ಕಾಲಿಕ ಪರಿಹಾರ ನೀಡಲಾಗಿದೆ. ಕೆಲವೆಡೆ ಚರಂಡಿ ಕೆಲಸ ನಡೆಯುತ್ತಿದೆ.
– ಚಂದ್ರಶೇಖರ್ ಯು. ಶೇರಿಗಾರ್, 21ನೇ ಇಂದಿರಾನಗರ ವಾರ್ಡ್ ಸದಸ್ಯ.
Advertisement
ಕಾರ್ಮಿಕರ ಕೊರತೆಮಳೆಗಾಲದ ಪೂರ್ವತಯಾರಿ ಯಾದ ಚರಂಡಿಗಳ ಹೂಳೆತ್ತುವ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ. 2 ವಾರಗಳಿಂದ, ವಾರದಲ್ಲಿ ಒಂದು ದಿನದಂತೆ 4 ಮಂದಿ ಮಾತ್ರ ಕಾರ್ಮಿಕರು ವಾರ್ಡ್‌ನ ಕೆಲಸಕ್ಕೆ ಸಿಗುತ್ತಿದ್ದಾರೆ. ಬಡಗುಬೆಟ್ಟು ಮುಖ್ಯ ರಸ್ತೆಯ ತೋಡು ವೇಗಸ್ ಬಳಿಯ ತೋಡುಗಳ ಹೂಳು ತೆರವುಗೊಳಿಸಿದ್ದು ಬಿಟ್ಟರೆ ಬೇರೆ ಎಲ್ಲೂ ಕೆಲಸ ಆಗಿಲ್ಲ. ಬಡಗುಬೆಟ್ಟು ಪಾರ್ಕ್ ಬಳಿ ಹೊಸ ರಸ್ತೆಯ ಕಾಮಗಾರಿಯಾಗಿದ್ದು, ಚರಂಡಿ ಯಾಗದೆ ಇಲ್ಲಿ ನೀರು ನಿಲ್ಲುವ ಸಾಧ್ಯತೆಯೂ ಇದೆ.
– ವಿಜಯ ಪೂಜಾರಿ ಬೈಲೂರು, 22ನೇ
ಬಡಗುಬೆಟ್ಟು ವಾರ್ಡ್