Advertisement
ಕೇಂದ್ರ ಸರ್ಕಾರದ ಸಮಿತಿಯ ಶಿಫಾರಸ್ಸುಗಳ ಆಧಾರದಲ್ಲಿ ಬದಲಾವಣೆ ತಂದು “70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ನಿಯಮಗಳು 2022′ ಅನ್ನು ರೂಪಿಸಲಾಗಿದೆ. “ಇಂದಿರಾ ಗಾಂಧಿ ಅತ್ಯುತ್ತಮ ಚೊಚ್ಚಲ ಚಲನಚಿತ್ರ’ ಪ್ರಶಸ್ತಿಯು “ನಿರ್ದೇಶಕರ ಅತ್ಯುತ್ತಮ ಚೊಚ್ಚಲ ಚಲನಚಿತ್ರ’ ಆಗಿ ಬದಲಾಗಲಿದೆ. ಅಲ್ಲದೇ ಈ ಪ್ರಶಸ್ತಿಗೆ ಈ ಹಿಂದೆ ನಿರ್ದೇಶಕ ಮತ್ತು ನಿರ್ಮಾಪಕರಿಗೆ ಪ್ರಶಸ್ತಿ ಮೊತ್ತವನ್ನು ಸಮಾನವಾಗಿ ಹಂಚಿಕೆ ಮಾಡಲಾಗುತ್ತಿತ್ತು. ಆದರೆ ಇನ್ನೂ ಮುಂದೆ ಈ ಮೊತ್ತವು ನಿರ್ದೇಶಕರಿಗೆ ಮಾತ್ರ ನೀಡಲಾಗುತ್ತದೆ. “ರಾಷ್ಟ್ರೀಯ ಭಾವೈಕ್ಯತೆಯ ಅತ್ಯುತ್ತಮ ಚಲನಚಿತ್ರಕ್ಕಾಗಿ ನರ್ಗೀಸ್ ದತ್’ ಪ್ರಶಸ್ತಿಯು “ರಾಷ್ಟ್ರೀಯ, ಸಾಮಾಜಿಕ ಮತ್ತು ಪರಿಸರ ಮೌಲ್ಯಗಳನ್ನು ಉತ್ತೇಜಿಸುವ ಅತ್ಯುತ್ತಮ ಚಲನಚಿತ್ರ’ ಆಗಿ ಬದಲಾಗಲಿದೆ.
ಫಾಲ್ಕೆ ಪ್ರಶಸ್ತಿ ಮೊತ್ತವನ್ನು 10 ಲಕ್ಷ ರೂ.ಗಳಿಂದ 15 ಲಕ್ಷ ರೂ.ಗೆ ಏರಿಸ ಲಾಗಿದೆ. ಇದೇ ರೀತಿ ಹಲವು ಪ್ರಶಸ್ತಿ ಗಳ ಮೊತ್ತವನ್ನು ಏರಿಸಲಾಗಿದೆ. ಸ್ವರ್ಣ ಕಮಲ ಪ್ರಸ್ತಿ ಮೊತ್ತವನ್ನು 3 ಲಕ್ಷ ರೂ.ಗಳಿಗೆ ಏರಿಸಿ, ರಜತ ಕಮ ಲ ಪ್ರಶಸ್ತಿ ವಿಜೇತ ರಿಗೆ ನೀಡುವ ಮೊತ್ತ 2 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ.