Advertisement

4 ತಿಂಗಳಿನಿಂದ ವೇತನವಿಲ್ಲವೆಂದು ಇಂದಿರಾ ಕ್ಯಾಂಟೀನ್ ಸಿಬಂದಿಗಳಿಂದ ಧರಣಿ

11:01 PM Sep 25, 2022 | Team Udayavani |

ಕೊರಟಗೆರೆ: ಪಟ್ಟಣದ ತಾಲ್ಲೂಕು ಆಡಳಿತ ಕಚೇರಿ ಪಕ್ಕದಲ್ಲಿ ಇರುವ ಇಂದಿರಾ ಕ್ಯಾಂಟೀನ್ ಸಿಬಂದಿಗಳಿಗೆ ಸುಮಾರು 4 ತಿಂಗಳಿನಿಂದ ವೇತನ ನೀಡದೆ ಹಾಗೂ ಆಹಾರ ಸಾಮಗ್ರಿಗಳು ಸರಬರಾಜು ಮಾಡುತ್ತಿಲ್ಲವೆಂದು ಸಿಬಂದಿ ವರ್ಗ ಕ್ಯಾಂಟೀನ್ ಮುಂದೆ ವೇತನಕ್ಕಾಗಿ ಧರಣಿ ಸತ್ಯಾಗ್ರಹ ನಡೆಸಿದ್ದಾರೆ.

Advertisement

ಕಳೆದ 5 ವರ್ಷಗಳ ಹಿಂದೆ ಆರಂಭವಾದ ಇಂದಿರಾ ಕ್ಯಾಂಟೀನ್‌ ನಲ್ಲಿ ಆಪಾರ ಸಂಖ್ಯೆಯಲ್ಲಿ ಜನರು ಸದುಪಯೋಗ ಪಡೆಯುತ್ತಿದ್ದರು, ಗ್ರಾಮೀಣ ಪ್ರದೇಶದಿಂದ ಸರ್ಕಾರಿ ಇಲಾಖೆಗಳಲ್ಲಿ ತಮ್ಮ ಸಮಸ್ಯೆ ಬಗೆಹರಿಸಿಕೊಳ್ಳಲು ಬರುತ್ತಿದ್ದ ರೈತರು, ಶಾಲಾ ಮಕ್ಕಳು, ಆಟೋ ಚಾಲಕರ ಸಾವಿರಾರು ಮಂದಿ ಹಸಿವು ನೀಗಿಸಿಕೊಳ್ಳುತ್ತಿದ್ದರು. ಆದರೆ ಇತ್ತೀಚೆಗೆ ಇಂದಿರಾ ಕ್ಯಾಂಟೀನ್ ಚಿತ್ರಣ ಬದಲಾಗಿದೆ.

ಮುಖ್ಯವಾಗಿ ಕೋವಿಡ್ ಕಾರಣ ಜನ ಮನೆಯಿಂದ ಹೊರಗೆ ಆಹಾರ ಸೇವಿಸುವುದನ್ನು ಕಡಿಮೆ ಮಾಡುತ್ತಿದ್ದರು. ಕೊರಟಗೆರೆ ಪಟ್ಟಣದ ತಾಲೂಕು ಕಚೇರಿಯ ಇಂದಿರಾ ಕ್ಯಾಂಟೀನ್ ನಡೆಸಲು ಗುತ್ತಿಗೆ ಪಡೆದ ಬೆಂಗಳೂರು ಮೂಲಕ ಗುತ್ತಿಗೆದಾರ ಕಳೆದ 8 ತಿಂಗಳಿ ನಿಂದ ಸಮರ್ಪಕವಾಗಿ ಆಹಾರ ಸಾಮಗ್ರಿಗಳನ್ನು, ತರಕಾರಿಗಳನ್ನು ಸರಬರಾಜು ಮಾಡದೆ ಸಿಬಂದಿಗಳಿಗೆ 7 ತಿಂಗಳಿನಿಂದ ವೇತನ ನೀಡದೆ, ಸ್ಥಳೀಯ ಅಂಗಡಿ ಮಾಲೀಕರಿಂದ ಖರೀದಿಸಿದ ಸಾಮಗ್ರಿಗಳ ಹಣ ನೀಡದೆ ಕಣ್ಮರೆಯಾಗಿದ್ದಾರೆಂದು ಧರಣಿ ನಿರತರು ದೂರಿದ್ದಾರೆ.

ವೇತನವಿಲ್ಲದೆ ಕಷ್ಟಕ್ಕೆ ಸಿಲುಕಿದ್ದು ವೇತನಕ್ಕಾಗಿ ಗುತ್ತಿಗೆ ದಾರರಿಗೆ ಕರೆ ಮಾಡಿದರೆ ದೂರವಾಣಿ ಸ್ಥಗಿತಗೊಳಿಸುತ್ತಾರೆ ಎಂದು, ಬಾಕಿ ವೇತನ ನೀಡುವವರೆಗೂ ಧರಣಿ ನಡೆಸುವುದಾಗಿ ತಿಳಿಸಿದರು.

ಕೊರಟಗೆರೆ ಇಂದಿರಾ ಕ್ಯಾಂಟೀನ್‌ನಲ್ಲಿ 8 ಮಂದಿ ಸಿಬಂದಿಗಳು ಕೆಲಸಮಾಡ ಬೇಕಾಗಿದ್ದು ಆದರೆ ಗುತ್ತಿಗೆದಾರರು ಕೇವಲ 4 ಮಂದಿಯನ್ನು ನೇಮಕ ಮಾಡಿಕೊಂಡಿದ್ದು 8 ಮಂದಿ ಸಿಬ್ಬಂದಿಗಳ ಕೆಲಸ ಕೇವಲ 4 ಮಂದಿ ಕಳೆದ ೫ ವರ್ಷಗಳಿಂದ ಮಾಡಿಕೊಂಡು ಬರುತ್ತಿದ್ದಾರೆ.

Advertisement

ತಹಶೀಲ್ದಾರ್ ನಾಹಿದಾ ಜಮ್ ಜಮ್ ಮಾತನಾಡಿ, ವಿಷಯ ತಿಳಿದ ತಕ್ಷಣ ನಾನು ಖುದ್ದು ಭೇಟಿ ನೀಡಿ ಎಲ್ಲವನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಕಾಂಟ್ರಾಕ್ಟರ್ ನಿಖಿಲ್ ರವರಿಗೆ ದೂರವಾಣಿ ಮೂಲಕ ಕರೆ ಮಾಡಿ ಒಂದು ವಾರದೊಳಗೆ ವೇತನವನ್ನು ನೀಡಬೇಕೆಂದು ತಿಳಿಸಿರುತ್ತೇನೆ ಮತ್ತು ಇನ್ನು ಮುಂದೆ ಇಂದಿರಾ ಕ್ಯಾಂಟೀನ್ ಗೆ ಬರುವ ಪ್ರತಿಯೊಬ್ಬರಿಗೂ ಗುಣಮಟ್ಟದ ಆಹಾರವನ್ನು ನೀಡಬೇಕೆಂದು ತಿಳಿಸಿದ್ದೇನೆ ಮತ್ತು ಕಂಟ್ರಾಕ್ಟರ್ ನಿಖಿಲ್ ಗೆ ನೋಟಿಸ್ ನೀಡುವಂತೆ ಈಗಾಗಲೇ ಆದೇಶಿಸಿದ್ದೇನೆ ಎಂದರು.

ದಲಿತ ಮುಖಂಡ ಜೆಟ್ಟಿ ಅಗ್ರಹಾರ ನಾಗರಾಜು ಮಾತನಾಡಿ ತಾಲೂಕಿನ ಬಡ ಜನತೆಯ ಹಸಿವು ನೀಗಿಸುತ್ತಿದ್ದ ಇಂಧಿರಾ ಕ್ಯಾಂಟೀನ್‌ಗೆ ಗುತ್ತಿಗೆದಾರ ಸಮರ್ಪಕವಾಗಿ ಆಹಾರ ಸಾಮಗ್ರಿಗಳನ್ನು ಸರಬರಾಜು ಮಾಡದೆ ಹಾಗೂ ಸಿಬ್ಬಂದಿಗೆ ವೇತನ ನೀಡದೆ ಪ.ಪಂ.ಯಿಂದ ಸಂಪೂರ್ಣ ಬಿಲ್ ಪಡೆದಿದ್ದು ಸಂಬಂದಿಸಿದ ಅಧಿಕಾರಿಗಳು ತಕ್ಷಣ ಗುತ್ತಿಗೆದಾರರ ಮೇಲೆ ಕ್ರಮ ಕೈಗೊಂಡು ಸಿಬ್ಬಂದಿಗೆ ವೇತನ ಕೊಡಿಸುವಂತೆ ಹಾಗೂ ಕ್ಯಾಂಟೀನ್ ಪ್ರಾರಂಭಿಸುವಂತೆ ಆಗ್ರಹಿಸಿ ಅವರು ತಪ್ಪಿದರೆ ಸಿಬ್ಬಂದಿಯೊಂದಿಗೆ ಉಗ್ರಹೋರಾಟ ಮಾಡುವುದಾಗಿ ಎಚ್ಚರಿಸಿದರು.

ಪ.ಪಂ.ಅಧ್ಯಕ್ಷೆ ಕಾವ್ಯರಮೇಶ್ ಸ್ಥಳಕ್ಕೆ ಬೇಟಿ ನೀಡಿ ಮಾತನಾಡಿ ಪಟ್ಟಣ ಪಂಚಾಯಿತಿ ವತಿಯಿಂದ ಗುತ್ತಿಗೆದಾರರಿಗೆ ಯಾವುದೇ ಬಿಲ್ ಬಾಕಿ ಇಲ್ಲ ಇಂದಿರಾ ಕ್ಯಾಂಟೀನ್ ನಿಂದ ಸಾರ್ವಜನಿಕರಿಗೆ ತೋಂದರೆಯಾಗಬಾರದು ಎಂಬ ದೃಷ್ಟಿಯಿಂದ ಕಾಲ ಕಾಲಕ್ಕೆ ಸರಿಯಾಗಿ ಬಿಲ್ ಪಾವತಿಸಲಾಗಿದೆ. ಸಿಬ್ಬಂದಿಗೆ ವೇತನ ನೀಡಿಲ್ಲ ಎಂಬ ವಿಷಯ ತಿಳಿದು ಗುತ್ತಿಗೆದಾರರಿಗೆ ದೂರವಾಣಿ ಮಾಡಿದರೆ ಗುತ್ತಿಗೆದಾರ ದೂರವಾಣಿ ಸ್ವೀಕರಿಸುತ್ತಿಲ್ಲ.ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ವರದಿ ಮಾಡಿ ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುವುದಾಗಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next