Advertisement
ಗೋ ಫಸ್ಟ್ ಏರ್‌ಲೈನ್ಸ್‌ನ 54 ವಿಮಾನ ನೋಂದಣಿ ರದ್ದುಗೊಳಿಸಿ: ಹೈಕೋರ್ಟ್ಮುಂದಿನ 5 ದಿನಗಳಲ್ಲಿ ಗೋ ಫಸ್ಟ್ ಏರ್‌ಲೈನ್ಸ್ ಗುತ್ತಿಗೆ ಪಡೆದಿರುವ ವಿಮಾನಗಳ ನೋಂದಣಿ ರದ್ದು ಮಾಡಲು ನಾಗರಿಕ ವಿಮಾನ ಯಾನ ಮಹಾ ನಿರ್ದೇಶನಾಲಯಕ್ಕೆ ದಿಲ್ಲಿ ಹೈಕೋರ್ಟ್ ಶುಕ್ರವಾರ ಸೂಚನೆ ನೀಡಿದೆ. ಇದು ಆರ್ಥಿಕವಾಗಿ ದಿವಾಳಿ ಎಂದು ಕಳೆದ ವರ್ಷವಷ್ಟೇ ಘೋಷಿ ಸಿ ಕೊಂಡಿ ರುವ ಗೋ ಫಸ್ಟ್ ಏರ್‌ಲೈನ್ಸ್‌ಗೆ ಆಗಿ ರುವ ಪ್ರಮುಖ ಹಿನ್ನಡೆ. ಪ್ರಕರಣದ ವಿಚಾರಣೆ ನಡೆಸಿದ ದಿಲ್ಲಿ ಹೈಕೋರ್ಟ್, ಗೋ ಫಸ್ಟ್ ಸಂಸ್ಥೆಯ ಎಲ್ಲ 54 ವಿಮಾನಗಳ ನೋಂದಣಿ ರದ್ದುಗೊಳಿಸಲು ಸೂಚಿಸಿದೆ. ಜತೆಗೆ ಈ ವಿಮಾನಗಳ ಕಾರ್ಯಾ ಚರಣೆ ನಡೆಸದಂತೆ ಸೂಚಿಸಿದೆ. ವಿವಿಧ ಏವಿಯೇಶನ್ ಕಂಪೆನಿಗಳು ತಮ್ಮ ವಿಮಾನಗಳನ್ನು ಗೋ ಫಸ್ಟ್ ಏರ್‌ಲೈನ್ಸ್‌ನಿಂದ ಹಿಂಪಡೆಯಲು ಅನುಮತಿ ನೀಡುವಂತೆ 2023ರಲ್ಲಿ ದಿಲ್ಲಿ ಹೈಕೋರ್ಟ್ ಮೊರೆ ಹೋಗಿದ್ದವು.