ಮುಂಬಯಿ: ಜಾಗತಿಕ ಷೇರು ಮಾರುಕಟ್ಟೆಯಲ್ಲಿನ ದುರ್ಬಲ ವಹಿವಾಟಿನ ಪರಿಣಾಮ ಮಂಗಳವಾರ(ನವೆಂಬರ್ 23)ವೂ ಮುಂಬೈ ಷೇರುಪೇಟೆಯ ಸಂವೇದಿ ಸೂಚ್ಯಂಕ 568 ಅಂಕಗಳಷ್ಟು ಇಳಿಕೆಯೊಂದಿಗೆ ಆರಂಭಿಕ ವಹಿವಾಟು ನಡೆಸಿದೆ.
ಇದನ್ನೂ ಓದಿ:ಉಡುಪಿ: ಮಣ್ಣಿನಡಿಯಲ್ಲಿ ಚಿನ್ನಾಭರಣ ಹೂತ್ತಿಟ್ಟಿದ್ದ ಕಳ್ಳನ ಬಂಧನ
ಮುಂಬೈ ಷೇರುಪೇಟೆಯ ಸಂವೇದಿ ಸೂಚ್ಯಂಕ 568.46 ಅಂಕಗಳಷ್ಟು ಕುಸಿದಿದ್ದು, 57,897.43 ಅಂಕಗಳಲ್ಲಿ ವಹಿವಾಟು ಮುಂದುವರಿದಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 150.00 ಅಂಕ ಇಳಿಕೆಯಾಗಿದ್ದು, 17,266.50 ಅಂಕಗಳ ಮಟ್ಟದಲ್ಲಿದೆ.
ಸೆನ್ಸೆಕ್ಸ್, ನಿಫ್ಟಿ ಇಳಿಕೆಯೊಂದಿಗೆ ಟಾಟಾ ಸ್ಟೀಲ್, ಜೆಎಸ್ ಡಬ್ಲ್ಯು ಸ್ಟೀಲ್, ಗ್ರಾಸಿಂ ಇಂಡಸ್ಟ್ರೀಸ್, ಆಲ್ಟ್ರಾ ಟೆಕ್ ಸಿಮೆಂಟ್, ಕೋಲ್ ಇಂಡಿಯಾ ಷೇರುಗಳು ಲಾಭಗಳಿಸಿದೆ. ಮತ್ತೊಂದೆಡೆ ಇನ್ಫೋಸಿಸ್, ಐಸಿಐಸಿಐ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್, ಟಾಟಾ ಮೋಟಾರ್ಸ್ ಷೇರುಗಳು ನಷ್ಟ ಕಂಡಿದೆ.
ಮುಂಬೈ ಷೇರುಪೇಟೆ ಹೂಡಿಕೆದಾರರಿಗೆ ಭಾರೀ ಆಘಾತವೆಂಬಂತೆ ಸೋಮವಾರ ಸೆನ್ಸೆಕ್ಸ್ 1,170 ಅಂಕ ಪತನಗೊಂಡಿತ್ತು. ಸತತ 4ನೇ ದಿನವೂ ಷೇರುಪೇಟೆ ಸೂಚ್ಯಂಕ ಇಳಿಕೆಯ ಹಾದಿಯಲ್ಲೇ ಸಾಗಿದ್ದು, 7 ತಿಂಗಳ ಕನಿಷ್ಠಕ್ಕೆ ತಲುಪಿತ್ತು. ಸೋಮವಾರ ಒಂದೇ ದಿನ ಹೂಡಿಕೆದಾರರಿಗೆ 8 ಲಕ್ಷ ಕೋಟಿ ರೂಪಾಯಿ ನಷ್ಟ ಅನುಭವಿಸುವಂತಾಗಿತ್ತು.