ಮುಂಬಯಿ: ಜಾಗತಿಕ ಷೇರುಪೇಟೆಯ ಸಕಾರಾತ್ಮಕ ವಹಿವಾಟಿನ ಪರಿಣಾಮ ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ ಗುರುವಾರ(ಏಪ್ರಿಲ್ 29) ಮತ್ತೆ 50,000 ಗಡಿಗೆ ತಲುಪಿದೆ. ಹೂಡಿಕೆದಾರರು ಹೆಚ್ಚಿನ ಖರೀದಿಯಲ್ಲಿ ತೊಡಗಿರುವುದು ಸೆನ್ಸೆಕ್ಸ್ ಏರಿಕೆಗೆ ಕಾರಣವಾಗಿದೆ.
ಇದನ್ನೂ ಓದಿ:ಇಂದು ಹಸೆಮಣೆ ಏರಬೇಕಿದ್ದ ಯುವಕ ಕೋವಿಡ್-19 ಸೋಂಕಿಗೆ ಬಲಿ
ಮುಂಬಯಿ ಷೇರುಪೇಟೆಯ ಇಂದಿನ ವಹಿವಾಟಿನಲ್ಲಿ ಸಂವೇದಿ ಸೂಚ್ಯಂಕ 567 ಅಂಕ ಏರಿಕೆಯಾಗಿದ್ದು, 50,300 ಅಂಕಗಳ ವಹಿವಾಟು ನಡೆಸಿದೆ. ಅದೇ ರೀತಿ ನಿಫ್ಟಿ ಕೂಡಾ 15 ಸಾವಿರದ ಗಡಿ ತಲುಪಿದೆ.
ಸೆನ್ಸೆಕ್ಸ್ ಏರಿಕೆಯಿಂದ ಇಂಡಸ್ ಇಂಡ್ ಬ್ಯಾಂಕ್, ಆ್ಯಕ್ಸಿಸ್ ಬ್ಯಾಂಕ್, ಬಜಾಜ್ ಫಿನ್ ಸರ್ವ್, ಐಸಿಐಸಿಐ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಲಾಭ ಗಳಿಸಿದ್ದರೆ, ಎಚ್ ಸಿಎಲ್ ಟೆಕ್ ಷೇರು ಮಾತ್ರ ನಷ್ಟ ಅನುಭವಿಸಿದೆ.
ಬುಧವಾರ ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ 789.70 ಅಂಕ ಹೆಚ್ಚಳವಾಗಿ 49,733.84 ಅಂಕಗಳೊಂದಿಗೆ ದಿನಾಂತ್ಯದ ವಹಿವಾಟು ಮುಕ್ತಾಯಗೊಳಿಸಿತ್ತು. ನಿಫ್ಟಿ ಕೂಡಾ 211.50ಅಂಕ ಏರಿಕೆಯಾಗಿ 14,864.55 ಅಂಕಗಳಲ್ಲಿ ವಹಿವಾಟು ಕೊನೆಗೊಳಿಸಿತ್ತು.