Advertisement

ಅಫ್ಘಾನ್‌ ಏಕೈಕ ಟೆಸ್ಟ್‌ ಪಂದ್ಯಕ್ಕೆ ಸಾಹಾ ಬದಲು ದಿನೇಶ್‌ ಕಾರ್ತಿಕ್‌

03:55 PM Jun 02, 2018 | Team Udayavani |

ಮುಂಬಯಿ : ಇದೇ ಜೂನ್‌ 14ರಿಂದ ಬೆಂಗಳೂರಿನಲ್ಲಿ  ಅಫ್ಘಾನಿಸ್ಥಾನದ ವಿರುದ್ಧ ನಡೆಯುವ ಏಕೈಕ ಟೆಸ್ಟ್‌ ಕ್ರಿಕೆಟ್‌ ಪಂದ್ಯಕ್ಕೆ ಭಾರತದ ಭರವಸೆಯ ಕ್ರಿಕೆಟಿಗ ವೃದ್ಧಿಮಾನ್‌ ಸಾಹಾ ಅವರು ಅಲಭ್ಯರಾಗಿದ್ದಾರೆ. ಅವರ ಹೆಬ್ಬೆರಳಿಗೆ ಆಗಿರುವ ಗಾಯ ಗುಣವಾಗಲು ಆರು ವಾರಗಳು ಬೇಕಿರುವುದೇ ಇದಕ್ಕೆ ಕಾರಣವಾಗಿದೆ ಎಂದು ಬಿಸಿಸಿಐ ಇಂದು ಶುಕ್ರವಾರ ಹೇಳಿದೆ.

Advertisement

ಮೇ 25 ಐಪಿಎಲ್‌ ಪಂದ್ಯದಲ್ಲಿ ಕೋಲ್ಕತ್ತ ನೈಟ್‌ ರೈಡರ್ಸ್‌ ಎದುರು ಆಡುವಾಗ ಸನ್‌ ರೈಸರ್ಸ್‌ ಹೈದರಾಬಾದ್‌ ತಂಡದ 33ರ ಹರೆಯದ ಕ್ರಿಕೆಟಿಗ ಸಾಹಾ ಅವರ ಹೆಬ್ಬೆರಳಿಗೆ ಗಾಯವಾಗಿತ್ತು. 

ಜೂನ್‌ 14ರಿಂದ ಬೆಂಗಳೂರಿನಲ್ಲಿ ನಡೆಯುವ ಅಫ್ಘಾನಿಸ್ಥಾನ ವಿರುದ್ಧದ ಏಕೈಕ ಟೆಸ್ಟ್‌ ಪಂದ್ಯಕ್ಕೆ ಈಗಿನ್ನು ಸಾಹಾ ಅವರ ಸ್ಥಾನದಲ್ಲಿ ದಿನೇಶ್‌ ಕಾರ್ತಿಕ್‌ ಆಡಲಿದ್ದಾರೆ. 

ಕಳೆದ ವರ್ಷ ಜೂನ್‌ ನಲ್ಲಿ ಅಯರ್ಲಂಡ್‌ ಜತೆಗೆ ಟೆಸ್ಟ್‌ ಕ್ರಿಕೆಟ್‌ ಪೂರ್ಣ ಸ್ಥಾನಮಾನ ನೀಡಲಾಗಿರುವ ಅಫ್ಘಾನಿಸ್ಥಾನಕ್ಕೆ ಭಾರತದ ಎದುರಿನ ಈ ಐದು ದಿನಗಳ ಪಂದ್ಯ ಚೊಚ್ಚಲ ಟೆಸ್ಟ್‌ ಪಂದ್ಯ ಆಗಿರುತ್ತದೆ. 

Advertisement

Udayavani is now on Telegram. Click here to join our channel and stay updated with the latest news.

Next