ನವದೆಹಲಿ: ಭಾರತದ ನಿರುದ್ಯೋಗ ದರ ಏಪ್ರಿಲ್ ನಲ್ಲಿ ಶೇ.7.83ಕ್ಕೆ ಏರಿಕೆಯಾಗಿದ್ದು, ಇದು ಕಳೆದ ಮಾರ್ಚ್ ನಲ್ಲಿ ಶೇ.7.60ರಷ್ಟಿತ್ತು ಎಂದು ಕೇಂದ್ರ ಆರ್ಥಿಕ ಮೇಲ್ವಿಚಾರಣೆ ಸಂಸ್ಥೆ (ಸಿಎಂಐಇ) ಸೋಮವಾರ (ಮೇ 2) ಬಿಡುಗಡೆ ಮಾಡಿರುವ ಅಂಕಿಅಂಶದಲ್ಲಿ ತಿಳಿಸಿದೆ.
ಇದನ್ನೂ ಓದಿ:ಅಮೆಜಾನ್ ನಿಂದ ಸಮ್ಮರ್ ಸೇಲ್: ಮೊಬೈಲ್, ಟಿವಿ, ಗೃಹೋಪಯೋಗಿ ಉಪಕರಣ ಕೊಳ್ಳಲು ಸದಾವಕಾಶ
ನಗರ ಪ್ರದೇಶದ ನಿರುದ್ಯೋಗ ದರ ಶೇ.8.28ರಿಂದ ಶೇ.9.22ಕ್ಕೆ ಏರಿಕೆಯಾಗಿದೆ. ಮತ್ತೊಂದೆಡೆ ಗ್ರಾಮೀಣ ನಿರುದ್ಯೋಗ ದರ ಮಾರ್ಚ್ ನಲ್ಲಿ ಶೇ.7.29ರಷ್ಟಿದ್ದು, ಏಪ್ರಿಲ್ ನಲ್ಲಿ ಶೇ.7.18ಕ್ಕೆ ಇಳಿಕೆ ಕಂಡಿರುವುದಾಗಿ ಅಂಕಿಅಂಶ ವಿವರಿಸಿದೆ.
ಉತ್ತರಭಾರತದ ಹರ್ಯಾಣದಲ್ಲಿ ಅತೀ ಹೆಚ್ಚು ನಿರುದ್ಯೋಗ ದರ (ಶೇ.34.5) ವರದಿಯಾಗಿದ್ದು, ರಾಜಸ್ಥಾನದಲ್ಲಿ ಶೇ.28.8ರಷ್ಟಿರುವುದಾಗಿ ಅಂಕಿಅಂಶ ತಿಳಿಸಿದೆ. ನಿಧಾನಗತಿಯ ದೇಶಿಯ ಬೇಡಿಕೆ ಮತ್ತು ಹೆಚ್ಚುತ್ತಿರುವ ಬೆಲೆ ಏರಿಕೆ ನಡುವೆ ಆರ್ಥಿಕ ಚೇತರಿಕೆ ಕೂಡಾ ಮಂದಗತಿಯಲ್ಲಿರುವ ಪರಿಣಾಮ ಉದ್ಯೋಗಾವಕಾಶದ ಮೇಲೆ ಪರಿಣಾಮ ಬೀರುವಂತಾಗಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಬಿಹಾರದಲ್ಲಿ ಶೇ.21.1ರಷ್ಟು, ಜಮ್ಮು-ಕಾಶ್ಮೀರದಲ್ಲಿ ಶೇ.15.6ರಷ್ಟು, ಗೋವಾದಲ್ಲಿ ಶೇ.15.5. ಕರ್ನಾಟಕದಲ್ಲಿ ನಿರುದ್ಯೋಗ ದರ ಶೇ.2.7ರಷ್ಟಿದುದ್ದ, ಹಿಮಾಚಲ ಪ್ರದೇಶದ ದೇಶದಲ್ಲಿಯೇ ಅತೀ ಕಡಿಮೆ ಪ್ರಮಾಣದ (ಶೇ.02) ನಿರುದ್ಯೋಗ ದರ ದಾಖಲಾಗಿರುವುದಾಗಿ ವರದಿ ಹೇಳಿದೆ.
ಮಾರ್ಚ್ ನಲ್ಲಿ ಸಗಟು ಹಣದುಬ್ಬರ ಶೇ.6.95ಕ್ಕೆ ಏರಿಕೆಯಾಗಿದ್ದು, ಇದು ಕಳೆದ 17 ತಿಂಗಳಲ್ಲಿನ ಗರಿಷ್ಠ ಪ್ರಮಾಣದ್ದಾಗಿತ್ತು. ಈ ವರ್ಷಾಂತ್ಯದಲ್ಲಿ ಸಗಟು ಹಣದುಬ್ಬರ ಶೇ.7.5ಕ್ಕೆ ಹೆಚ್ಚಳವಾಗುವ ಸಾಧ್ಯತೆ ಇದ್ದಿರುವುದಾಗಿ ಆರ್ಥಿಕ ತಜ್ಞ ಶಿಲಾನ್ ಶಾ ತಿಳಿಸಿದ್ದಾರೆ.