Advertisement

ರೋಹನ್‌ ಬೋಪಣ್ಣ , ಸಾನಿಯಾ ಮಿರ್ಜಾ ವಿಜಯ

11:28 AM Sep 02, 2017 | Team Udayavani |

ನ್ಯೂಯಾರ್ಕ್‌: ಯುಎಸ್‌ ಓಪನ್‌ ಡಬಲ್ಸ್‌ನಲ್ಲಿ  ಭಾರತದ ರೋಹನ್‌ ಬೋಪಣ್ಣ, ಸಾನಿಯಾ ಮಿರ್ಜಾ ಜೋಡಿ ಗೆಲುವಿನ ಆರಂಭ ಮಾಡಿದೆ.  ಉರುಗ್ವೆಯ ಪಾಬ್ಲೊ ಕುವಾಸ್‌ ಜತೆಗೂಡಿ ಪುರುಷರ ಡಬಲ್ಸ್‌ ಆಡುತ್ತಿರುವ ರೋಹನ್‌ ಬೋಪಣ್ಣ, ಮೊದಲ ಸುತ್ತಿನ ಪಂದ್ಯದಲ್ಲಿ ಅಮೆರಿಕದ ಬ್ರಾಡ್ಲಿ ಕ್ಲಾನ್‌-ಸ್ಕಾಟ್‌ ಲಿಪ್‌ಕ್ಸಿ ವಿರುದ್ಧ 1-6, 6-3, 6-4 ಅಂತರದ ಜಯ ಸಾಧಿಸಿದರು. ಬೋಪಣ್ಣ-ಕುವಾಸ್‌ ಅವರಿನ್ನು ಇಟಲಿಯ ಸಿಮೋನ್‌ ಬೊಲೆಲ್ಲಿ-ಫ್ಯಾಬಿಯೊ ಫೊಗಿನಿ ವಿರುದ್ಧ ಆಡಲಿದ್ದಾರೆ.

Advertisement

ವನಿತಾ ಡಬಲ್ಸ್‌ನಲ್ಲಿ ಸಾನಿಯಾ ಹಾಗೂ ಚೀನದ ಶುಯಿ ಪೆಂಗ್‌ ಸೇರಿಕೊಂಡು ಕ್ರೊವೇಶಿಯಾದ ಪೆಟ್ರಾ ಮಾರ್ಟಿಕ್‌-ಡೋನಾ ವೆಕಿಕ್‌ ವಿರುದ್ಧ 6-4, 6-1 ಅಂತರದ ಸುಲಭ ಗೆಲುವನ್ನು ಒಲಿಸಿಕೊಂಡರು. ಸಾನಿಯಾ-ಪೆಂಗ್‌ ದ್ವಿತೀಯ ಸುತ್ತಿನಲ್ಲಿ ಸ್ಲೊವಾಕಿಯಾದ ಜಾನಾ ಸೆಪಲೋವಾ-ಮಾಗ್ಡಲೆನಾ ರಿಬರಿಕೋವಾ ಸವಾಲನ್ನು ಎದುರಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next