ನವದೆಹಲಿ: ಸೋಲಾರ್ ಪ್ಯಾನೆಲ್‌ಗಳನ್ನು ನಿರ್ಮಿಸುವ, ನಾರ್ವೆ ಮೂಲದ ರೆಕ್ ಸೋಲಾರ್ ಹೋಲ್ಡಿಂಗ್ಸ್ (ರೆಕ್ ಗ್ರೂಪ್) ಕಂಪನಿಯನ್ನು ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್), ಸುಮಾರು 5,800 ಕೋಟಿ ರೂ.ಗಳ ಮೊತ್ತಕ್ಕೆ ಖರೀದಿಸಿದೆ.
ರಿಲಯನ್ಸ್ ನ್ಯೂ ಎನರ್ಜಿ ಸೋಲಾರ್ ಲಿಮಿಟೆಡ್ (ಆರ್‌ಎನ್‌ಇಎಸ್‌ಎಲ್) ಸಂಸ್ಥೆಯ ಹೆಸರಿನಲ್ಲಿ ರೆಕ್ ಕಂಪನಿಯನ್ನು ಖರೀದಿಸಲಾಗಿದೆ.
ರೆಕ್ ಕಂಪನಿಯ ಒಡೆತನವನ್ನು “ಚೀನಾ ನ್ಯಾಷನಲ್ ಬ್ಲೂಸ್ಟಾರ್’ ಕಂಪನಿ (ಕೆಲವು ವರ್ಷಗಳ ಹಿಂದೆ ಖರೀದಿಸಿತ್ತು. ಆದರೂ, ಅದರ ಕೇಂದ್ರ ಕಚೇರಿ, ನಾರ್ವೆ ದೇಶದಲ್ಲೇ ಇತ್ತು. ಈಗ ಇದು ರಿಲಯನ್ಸ್ ಪಾಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಶಿಕ್ಷಣ ನೀತಿ ಒಂದು ಜಾತಿ-ಧರ್ಮಕ್ಕೆ ಸೀಮಿತವಲ್ಲ :ಸಚಿವ ಡಾ. ಅಶ್ವಥ್ ನಾರಾಯಣ
ಖರೀದಿ ಕುರಿತಂತೆ ಟ್ವೀಟ್ ಮಾಡಿರುವ ಮುಕೇಶ್ ಅಂಬಾನಿ, “ಸೋಲಾರ್ ಪ್ಯಾನೆಲ್ ತಯಾರಿಕಾ ಕಂಪನಿಯಾದ ರೆಕ್‌ನಿಂದ ಇನ್ನು ರಿಲಯನ್ಸ್‌ಗೆ ಹೆಚ್ಚಿನ ಲಾಭವಾಗಲಿದೆ ಎಂದು ಆಶಿಸುತ್ತೇನೆ. ಸೂರ್ಯನ ಕಿರಣಗಳನ್ನು ಬಳಸುವ ತಂತ್ರಜ್ಞಾನವು ನಮ್ಮ ಕಂಪನಿಗೆ ಸೂರ್ಯನ ಆಶೀರ್ವಾದವೂ ಲಭಿಸುತ್ತದೆಂಬ ನಿರೀಕ್ಷೆಯಿದೆ’ ಎಂದರು.