ಸಿಡ್ನಿ : ಟಿ 20 ವಿಶ್ವಕಪ್ ಗೂ ಮುಂಚಿತವಾಗಿ ಸೋಮವಾರ ನಡೆದ ಅಭ್ಯಾಸ ಪಂದ್ಯದಲ್ಲಿ ಪಶ್ಚಿಮ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ ಜಯ ಸಾಧಿಸಿದೆ.
ಅರ್ಷದೀಪ್, ಭುವನೇಶ್ವರ್ ಕುಮಾರ್ ಮತ್ತು ಸೂರ್ಯಕುಮಾರ್ ಯಾದವ್ ಅವರು ಭರ್ಜರಿ ಪ್ರದರ್ಶನ ನೀಡಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್ ಗಳಲ್ಲಿ 6ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿತು. ಸೂರ್ಯಕುಮಾರ್ ಯಾದವ್ 35 ಎಸೆತಗಳಲ್ಲಿ 52 ರನ್ ಗಳಿಸಿದೆ. ಹಾರ್ದಿಕ್ ಪಾಂಡ್ಯ 20 ಎಸೆತಗಳಲ್ಲಿ 29 ರನ್ ಗಳಿಸಿದರು.
ಆರಂಭಿಕರಾಗಿ ಬಂದ ನಾಯಕ ರೋಹಿತ್ ಶರ್ಮಾ 3 , ರಿಷಬ್ ಪಂತ್ 9 ರನ್ ಗಳಿಸಿ ಬೇಗನೆ ನಿರ್ಗಮಿಸಿದರು. ದೀಪಕ್ ಹೂಡಾ 22, ದಿನೇಶ್ ಕಾರ್ತಿಕ್ ಅಜೇಯ 19, ಅಕ್ಷರ್ ಪಟೇಲ್ 10, ಹರ್ಷಲ್ 5 ರನ್ ಗಳಿಸಿದರು. ಕೊಹ್ಲಿ ಅವರಿಗೆ ಪಂದ್ಯದಲ್ಲಿ ರೆಸ್ಟ್ ನೀಡಲಾಗಿತ್ತು.
ಗುರಿ ಬೆನ್ನಟ್ಟಿದ ಪಶ್ಚಿಮ ಆಸ್ಟ್ರೇಲಿಯಾ ತಂಡ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 145 ರನ್ ಗಳಿಸಲಷ್ಟೇ ಶಕ್ತವಾಯಿತು. ಭಾರತ ತಂಡ 13 ರನ್ ಗಳ ಅನಂತರದ ಗೆಲುವನ್ನು ತನ್ನದಾಗಿಸಿಕೊಂಡಿತು. ಬೌಲಿಂಗ್ ನಲ್ಲಿ ಅರ್ಷದೀಪ್ 3 ವಿಕೆಟ್ ಪಡೆದು ಗಮನ ಸೆಳೆದರೆ, ಭುವನೇಶ್ವರ್ ಕುಮಾರ್ 2, ಯಜುವೇಂದ್ರ ಚಾಹಲ್ 2, ಹರ್ಷಲ್ ಪಟೇಲ್ 1 ವಿಕೆಟ್ ಪಡೆದರು.