Advertisement

ಕೋವಿಡ್ ಎಫೆಕ್ಟ್: ಭಾರತದಲ್ಲಿ ಪೆಟ್ರೋಲ್ ಮಾರಾಟ ಹೆಚ್ಚಳ, ಡೀಸೆಲ್ ಮಾರಾಟ ಇಳಿಕೆ

12:33 PM Oct 01, 2020 | Nagendra Trasi |

ನವದೆಹಲಿ: ವರ್ಷದ ಆರಂಭಕ್ಕೆ ಹೋಲಿಸಿದಲ್ಲಿ ದೇಶದಲ್ಲಿ ಪೆಟ್ರೋಲ್ ಬಳಕೆ ಪ್ರಮಾಣ ಶೇ.2ರಷ್ಟು ಏರಿಕೆಯಾಗಿದ್ದು, ಡೀಸೆಲ್ ಮಾರಾಟದಲ್ಲಿ ಶೇ.7.3ರಷ್ಟು ಇಳಿಕೆಯಾಗಿರುವುದಾಗಿ ಸರ್ಕಾರಿ ಸ್ವಾಮಿತ್ವದ ಇಂಡಿಯನ್ ಆಯಿಲ್ ಅಂಕಿ-ಅಂಶ ತಿಳಿಸಿರುವುದಾಗಿ ವರದಿ ಹೇಳಿದೆ.

Advertisement

ಕೋವಿಡ್ 19 ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ಭಾರತದಲ್ಲಿ ಮಾರ್ಚ್ ನಿಂದ ಲಾಕ್ ಡೌನ್ ಜಾರಿಗೊಳಿಸಲಾಗಿತ್ತು. ಇದೀಗ ಲಾಕ್ ಡೌನ್ ತೆರವಿನ ನಂತರ ರಾಜ್ಯಗಳಲ್ಲಿನ ಪೆಟ್ರೋಲ್ ಮಾರಾಟದಲ್ಲಿ ಸ್ವಲ್ಪ ಏರಿಕೆ ಕಂಡು ಬಂದಿರುವುದಾಗಿ ವಿವರಿಸಿದೆ.

ರಾಜ್ಯ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪ್, ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪ್ ಮತ್ತು ಭಾರತ್ ಪೆಟ್ರೋಲಿಯಂ ಸಂಸ್ಥೆ ಭಾರತದ ಚಿಲ್ಲರೆ ಇಂಧನ ಮಳಿಗೆಗಳಲ್ಲಿ ಶೇ.90 ರಷ್ಟು ಪಾಲನ್ನು ಹೊಂದಿವೆ.

ಅಕ್ಟೋಬರ್ 31ರವರೆಗೆ ಅಂತಾರಾಷ್ಟ್ರೀಯ ವಿಮಾನ ಸಂಚಾರ ಬಂದ್:

ಅಕ್ಟೋಬರ್ 31ರವರೆಗೂ ಅಂತಾರಾಷ್ಟ್ರೀಯ ಪ್ರಯಾಣಿಕ ವಿಮಾನ ಸಂಚಾರ ಬಂದ್ ಮುಂದುರಿಯಲಿದೆ ಎಂದು ಡಿಜಿಸಿಎ ತಿಳಿಸಿದೆ. ಕೋವಿಡ್ 19 ಪರಿಸ್ಥಿತಿ ಅವಲೋಕನದ ನೆಲೆಯಲ್ಲಿ ಅಂತಾರಾಷ್ಟ್ರೀಯ ವಿಮಾನ ಸಂಚಾರವನ್ನು ಕೆಲವು ಆಯ್ದ ಮಾರ್ಗಗಳಲ್ಲಿ ಮಾತ್ರ ಸಂಚರಿಸಲು ಅವಕಾಶ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next