Advertisement

ವಿಶ್ವ ರ್‍ಯಾಂಕಿಂಗ್‌ನಲ್ಲಿ ಚೋಪ್ರಾ ನಂ.2

08:59 PM Aug 12, 2021 | Team Udayavani |

ನವದೆಹಲಿ: ಒಲಿಂಪಿಕ್ಸ್‌ ಚಿನ್ನ ಗೆದ್ದ ಭಾರತದ ಜಾವೆಲಿನ್‌ ಸ್ಟಾರ್‌ ನೀರಜ್‌ ಚೋಪ್ರಾ ಅವರಿಗೆ ಈಗ ಇನ್ನೊಂದು ಸಂಭ್ರಮ. ವಿಶ್ವ ರ್‍ಯಾಂಕಿಂಗ್‌ನಲ್ಲಿ ಅವರು ಒಮ್ಮೆಲೇ 14 ಸ್ಥಾನ ಮೇಲೇರಿ ಎರಡನೇ ಸ್ಥಾನ ಅಲಂಕರಿಸಿದ್ದಾರೆ.

Advertisement

ನೀರಜ್‌ ಚೋಪ್ರಾ ಒಟ್ಟು 1,315 ಅಂಕ ಹೊಂದಿದ್ದಾರೆ. ಜರ್ಮನಿಯ ಜೊಹಾನ್ನೆಸ್‌ ವೆಟರ್‌ 1,396 ಅಂಕಗಳೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.

ಚಿನ್ನ ಗೆಲ್ಲುವ ನೆಚ್ಚಿನ ಅಥ್ಲೀ ಟ್‌ ಆಗಿದ್ದ ವೆಟರ್‌ಗೆ ಯಾವುದೇ ಪದಕ ಲಭಿಸಲಿಲ್ಲ ಎಂಬುದು ಟೋಕಿಯೊ ಒಲಿಂಪಿಕ್ಸ್‌ ಅಚ್ಚರಿಗಳಲ್ಲೊಂದು. ಅಲ್ಲಿ ಇವರಿಗೆ ಲಭಿಸಿದ್ದು 9ನೇ ಸ್ಥಾನ! ಇದೇ ವೇಳೆ ನೀರಜ್‌ ಚೋಪ್ರಾ ಅವರ ಸಾಧನೆಗೆ ವಿಶ್ವ ಆ್ಯತ್ಲೆಟಿಕ್ಸ್‌ ವೆಬ್‌ಸೈಟ್‌ನ  ಟೆನ್‌ ಮ್ಯಾಜಿಕಲ್‌ ಮೊಮೆಂಟ್ಸ್‌’ನಲ್ಲಿ ಸ್ಥಾನ ಲಭಿಸಿರುವುದು ಭಾರತೀಯರ ಪಾಲಿಗೆ ಹೆಮ್ಮೆಯ ಸಂಗತಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next