Advertisement

ಜಿಡಿಪಿ ಶೇ.7.7ಕ್ಕೆ ಕುಸಿತ ಸಾಧ್ಯತೆ, ಕೇಂದ್ರದಿಂದಲೇ ಮಾಹಿತಿ ಬಿಡುಗಡೆ

10:11 PM Jan 07, 2021 | Team Udayavani |

ನವದೆಹಲಿ: ಅರ್ಥ ವ್ಯವಸ್ಥೆಯ ಒಟ್ಟು ದೇಶೀಯ ಉತ್ಪಾದನೆ (ಜಿಡಿಪಿ) ಪ್ರಸಕ್ತ ವಿತ್ತೀಯ ವರ್ಷದ ಮುಕ್ತಾಯದ ವೇಳೆಗೆ ಅಂದರೆ ಮಾ.31ಕ್ಕೆ ಶೇ.7.7ಕ್ಕೆ ಕುಸಿಯಲಿದೆ. ಇದಕ್ಕಿಂತ ಮೊದಲು ಕೇಂದ್ರ ಸರ್ಕಾರ ಶೇ.4.2ರಷ್ಟು ಕುಸಿಯಲಿದೆ ಎಂದು ಊಹಿಸಲಾಗಿತ್ತು. ಆರ್ಥಿಕ ತಜ್ಞರು ವಿಶ್ಲೇಷಿಸಿದ ಪ್ರಕಾರ 1952ರ ಬಳಿಕ ಇಂಥ ಕುಸಿತ ಇದೇ ಮೊದಲು. ಗಮನಾರ್ಹ ಅಂಶವೆಂದರೆ ಕೃಷಿ ಕ್ಷೇತ್ರದ ಕೊಡುಗೆ ಬಗ್ಗೆ ಕೇಂದ್ರ ಸರ್ಕಾರ ಉತ್ತಮ ನಿರೀಕ್ಷೆಯನ್ನೇ ಇರಿಸಿಕೊಂಡಿದೆ.

Advertisement

“2019-20ನೇ ಸಾಲಿನಲ್ಲಿ 145.66 ಲಕ್ಷ ಕೋಟಿ ಎಂದು ಜಿಡಿಪಿ ಪ್ರಮಾಣ ಅಂದಾಜಿಸಲಾಗಿತ್ತು. ಆದರೆ 2020-21ನೇ ಸಾಲಿನಲ್ಲಿ ಜಿಡಿಪಿ ದರ 134.40 ಲಕ್ಷ ಕೋಟಿ ರೂ.’ ಎಂದು ರಾಷ್ಟ್ರೀಯ ಸಾಂಖಿಕ ಕಚೇರಿ ತಿಳಿಸಿದೆ. ಉತ್ಪಾದನಾ ಕ್ಷೇತ್ರದಲ್ಲಿ ಭಾರಿ ಪ್ರಮಾಣದ ಕುಸಿತ ಉಂಟಾಗಲಿದೆ ಎಂದು ಅದು ತಿಳಿಸಿದೆ. ಗಣಿ ಮತ್ತು ಕ್ವಾರಿ, ವ್ಯಾಪಾರ, ಹೊಟೇಲ್‌ ಉದ್ಯಮ, ಸಾರಿಗೆ, ಸಂಪರ್ಕ ಕ್ಷೇತ್ರಗಳಲ್ಲಿಯೂ ನಿರೀಕ್ಷಿತ ಗುರಿ ಸಾಧಿಸಲು ಅಸಾಧ್ಯವಾಗಲಿದೆ ಎಂದು ಸರ್ಕಾರ ಹೇಳಿದೆ.

ಜಿಡಿಪಿ ಮಾಹಿತಿ ಬಗ್ಗೆ ಪ್ರತಿಕ್ರಿಯೆ ನೀಡಿದ ವಿತ್ತ ಸಚಿವಾಲಯ “ಅರ್ಥ ವ್ಯವಸ್ಥೆ ಚೇತರಿಕೆ ಕಾಣುತ್ತಿದೆ. ಎರಡನೇ ತ್ತೈಮಾಸಿಕದಲ್ಲಿ ಚೇತರಿಕೆ ಕಂಡಿದೆ. ಅದಕ್ಕೆ ಲಾಕ್‌ಡೌನ್‌ ತೆರವುಗೊಳಿಸಿದ್ದೇ ಕಾರಣ. ಅರ್ಥ ವ್ಯವಸ್ಥೆಯ ತಳಹದಿ ಭದ್ರವಾಗಿಯೇ ಇದೆ’ ಎಂದು ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next