Advertisement

ಭಾರತದ ವಿದೇಶಿ ವಿನಿಮಯ ಮೀಸಲು ಸಾರ್ವಕಾಲಿಕ ಎತ್ತರಕ್ಕೆ: $424.864 bn

05:47 PM Apr 13, 2018 | |

ಮುಂಬಯಿ : ಭಾರತದ ವಿದೇಶಿ ವಿನಿಮಯ ಮೀಸಲು 503.6 ಮಿಲಿಯನ್‌ ಡಾಲರ್‌ ನಷ್ಟು ಹೆಚ್ಚಿದ ಪರಿಣಾಮವಾಗಿ ಎಪ್ರಿಲ್‌ 6ರ ವಾರದಲ್ಲಿ 4,234,864 ಬಿಲಿಯ ಡಾಲರ್‌ಗಳ ಸಾರ್ವಕಾಲಿಕ ಎತ್ತರದ ಮಟ್ಟವನ್ನು ತಲುಪಿದೆ. ಇದಕ್ಕೆ ಪೂರಕವಾಗಿ ವಿದೇಶಿ ಕರೆನ್ಸಿ ಸೊತ್ತುಗಳು ಕೂಡ ಗಮನಾರ್ಹ ಏರಿಕೆಯನ್ನು ಕಂಡಿರುವುದಾಗಿ ಭಾರತೀಯ ರಿಸರ್ವ್‌ ಬ್ಯಾಂಕ್‌ ಇಂದು ಶುಕ್ರವಾರ ಹೇಳಿದೆ. 

Advertisement

ಹಿಂದಿನ ವಾರದಲ್ಲಿ ವಿದೇಶಿ ವಿನಿಮಯ ಮೀಸಲು 1.8238 ಬಿಲಿಯ ಡಾಲರಗಳಷ್ಟು  ಹೆಚ್ಚಿ 424,366 ಬಿಲಿಯ ಡಾಲರ್‌ಗಳಿಗೆ ತಲುಪಿತ್ತು. 

2017ರ ಸೆಪ್ಟಂಬರ್‌ 8ರ ವಾರದಲ್ಲಿ ಭಾರತದ ವಿದೇಶಿ ವಿನಿಮಯ ಮೀಸಲು ಪ್ರಪ್ರಥಮ ಬಾರಿಗೆ 400 ಬಿಲಿಯ ಡಾಲರ್‌ ಮಟ್ಟವನ್ನು ಮುಟ್ಟಿತ್ತು.

Advertisement

Udayavani is now on Telegram. Click here to join our channel and stay updated with the latest news.

Next