ಜಬಲ್ಪುರ: ದೇಶದ ಮೊದಲ ಜಿಯೋ ಪಾರ್ಕ್‌ನ್ನು ಮಧ್ಯಪ್ರದೇಶದ ಜಬಲ್ಪುರ ಜಿಲ್ಲೆಯ ನರ್ಮದಾ ನದಿಯ ತಟದಲ್ಲಿರುವ ಲಮ್ಹೇತಾ ಗ್ರಾಮದಲ್ಲಿ ನಿರ್ಮಿಸಲಾಗುವುದು. ಅದಕ್ಕೆ ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣೆ(ಜಿಎಸ್‌ಐ)ಯು ಅನುಮತಿ ಸೂಚಿಸಿದೆಯೆಂದು ಬಿಜೆಪಿ ಸಂಸದ ರಾಜೇಶ್ ಸಿಂಗ್ ತಿಳಿಸಿದ್ದಾರೆ.
35 ಕೋಟಿ ರೂ. ವೆಚ್ಚದಲ್ಲಿ ಪಾರ್ಕ್ ನಿರ್ಮಿಸಲು ಅಂದಾಜಿಸಲಾಗಿದೆ. ಸುತ್ತಮುತ್ತಲಿನ ಪ್ರದೇಶದ ಅಭಿವೃದ್ಧಿಗೆ ಇನ್ನಷ್ಟು ಹಣ ವ್ಯಯಿಸುವುದಕ್ಕೆ ಸರ್ಕಾರ ಸಿದ್ಧವಿದೆ. ಈಗ ಸದ್ಯಕ್ಕೆ ಯೋಜನೆಯ ವಿಸ್ತೃತ ವರದಿ ತಯಾರಿಕೆಗೆಂದು ಜಿಎಸ್‌ಐ 1.5 ಕೋಟಿ ರೂ. ಬಿಡುಗಡೆ ಮಾಡಿದೆ ಎಂದು ಸಂಸದರು ಮಾಹಿತಿ ಕೊಟ್ಟಿದ್ದಾರೆ.
ಈ ಪ್ರದೇಶದಲ್ಲಿ 1828ರಲ್ಲಿ ಮೊದಲ ಬಾರಿಗೆ ಡೈನೋಸರ್‌ನ ಪಳೆಯುಳಿಕೆ ಪತ್ತೆಯಾಗಿತ್ತು. ಅದಾದ ನಂತರ ಹಲವು ವಿಶೇಷತೆಗಳು ಇಲ್ಲಿ ಸಿಕ್ಕಿವೆ. ಈಗಾಗಲೇ ಯುನೆಸ್ಕೋ ಜಿಯೋ ಹೆರಿಟೇಜ್ ತಾತ್ಕಾಲಿಕ ಪಟ್ಟಿಯಲ್ಲಿ ಈ ಸ್ಥಳದ ಹೆಸರನ್ನು ಸೇರಿಸಿಕೊಂಡಿದೆ ಎಂದು ಅವರು ಹೇಳಿದ್ದಾರೆ. ಹಾಗೆಯೇ ಭೇದಘಾಟ್‌ನಲ್ಲಿ 15.20 ಕೋಟಿ ರೂ. ವೆಚ್ಚದಲ್ಲಿ ವಿಜ್ಞಾನ ಕೇಂದ್ರ ಸ್ಥಾಪಿಸುವುದಾಗಿಯೂ ಅವರು ತಿಳಿಸಿದ್ದಾರೆ.
ಇದನ್ನೂ ಓದಿ:ಪಂಚಮಸಾಲಿ ಸಮುದಾಯವನ್ನು 2ಎ ಗೆ ಸೇರಿಸಬಾರದು: ಈಶ್ವರಪ್ಪಗೆ ಮನವಿ
ಏನಿದು ಜಿಯೋ ಪಾರ್ಕ್?
ಭೌಗೋಳಿಕ ವಿಶೇಷತೆ ಹೊಂದಿರುವ ಪ್ರದೇಶವನ್ನು ಏಕೀಕರಿಸಿ, ಅದನ್ನು ರಕ್ಷಿಸುವುದು ಹಾಗೂ ಸಕಲ ರೀತಿಯಲ್ಲಿ ಅಭಿವೃದ್ಧಿ ಪಡಿಸುವ ಯೋಜನೆಯೇ ಜಿಯೋ ಪಾರ್ಕ್ ಯೋಜನೆ.