Advertisement
ಮಣಿಪಾಲ: ಈ ವರ್ಷಾಂತ್ಯದೊಳಗೆ ಲಡಾಖ್‌ನ ಹಾನ್ಲàಯಲ್ಲಿ ದೇಶದ ಮೊದಲ “ಸಂರಕ್ಷಿತ ಕಗ್ಗತ್ತಲಿನ ಆಕಾಶ ಪ್ರದೇಶ’ ಅನಾವರಣಗೊಳ್ಳಲಿದೆ. ಇದು ಬಾಹ್ಯಾಕಾಶ ವಿಜ್ಞಾನ ಪ್ರವಾಸೋದ್ಯಮಕ್ಕೂ ಪೂರಕವಾಗಲಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆಯ ಸಹಾಯಕ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ.
“ನಕ್ಷತ್ರಗಳು ಹೊಳೆಯುವ ವಿಶಾಲ ಆಕಾಶದರ್ಶನ ಸಾಧ್ಯವಾಗುವ ಮತ್ತು ರಾತ್ರಿಯ ಶುದ್ಧ ವಾತಾವರಣವನ್ನು ಅನುಭವಿಸಲು ಸಾಧ್ಯಮಾಡಿಕೊಡಬಲ್ಲ ಸಾಕಷ್ಟು ವಿಸ್ತೀರ್ಣವುಳ್ಳ (700 ಚದರ ಕಿ.ಮೀ. ಅಥವಾ ಸುಮಾರು 1,73,000 ಎಕರೆಗಳು) ಖಾಸಗಿ ಅಥವಾ ಸರಕಾರಿ ಸ್ಥಳವಾಗಿದ್ದು, ಇದನ್ನು ಅದರ ವೈಜ್ಞಾನಿಕ, ನೈಸರ್ಗಿಕ, ಶೈಕ್ಷಣಿಕ, ಸಾಂಸ್ಕೃತಿಕ ಪರಂಪರೆಗಾಗಿ ಮತ್ತು ಸಾರ್ವಜನಿಕರ ಮನಸ್ಸಂತೋಷಕ್ಕಾಗಿ ಸಂರಕ್ಷಿಸಿರಬೇಕು’ ಎಂಬುದಾಗಿ ಅಂತಾರಾಷ್ಟ್ರೀಯ ಕಗ್ಗತ್ತಲಿನ ಆಕಾಶ ಸಂಘಟನೆ (ಐಡಿಎಸ್‌ಎ) “ಸಂರಕ್ಷಿತ ಕಗ್ಗತ್ತಲಿನ ಆಕಾಶ ಪ್ರದೇಶ’ವನ್ನು ವ್ಯಾಖ್ಯಾನಿಸಿದೆ. ಏನೇನು ಅಗತ್ಯ?
-ಯಾವುದೇ ಬಗೆಯ ಬೆಳಕಿನ ಮಾಲಿನ್ಯದಿಂದ ಮುಕ್ತವಾದ ಕೇಂದ್ರ ಪ್ರದೇಶ
-ಇಲ್ಲಿಂದ ದೂರದರ್ಶಕಗಳ ಮೂಲಕ ಆಕಾಶ ವೀಕ್ಷಣೆ ಸಾಧ್ಯವಾಗುವಂತಿರಬೇಕು
ಬೇರೆ ಎಲ್ಲೆಲ್ಲಿ ಇವೆ?
-ಯುನೈಟೆಡ್ ಕಿಂಗ್‌ಡಮ್ – 7
-ಫ್ರಾನ್ಸ್ – 4
-ಅಮೆರಿಕ, ಜರ್ಮನಿ – ತಲಾ 2
-ನ್ಯೂಜಿಲ್ಯಾಂಡ್, ಕೆನಡಾ, ನಮೀಬಿಯಾ, ಆಸ್ಟ್ರೇಲಿಯಾ – ತಲಾ 1
Related Articles
– ಹಾನ್ಲೆ ಡಾರ್ಕ್ ಸ್ಕೈ ರಿಸರ್ವ್ (ಎಚ್‌ಡಿಎಸ್‌ಆರ್) ಲಡಾಖ್‌ನ ಛಂಗ್ತಂಗ್ ಸಂರಕ್ಷಿತ ವನ್ಯಧಾಮದ ಒಳಗೆ ಸ್ಥಾಪನೆಗೊಳ್ಳಲಿದೆ
– ಇದು ಸಮುದ್ರ ಮಟ್ಟದಿಂದ 4,500 ಮೀಟರ್ ಎತ್ತರದಲ್ಲಿದೆ
-ದೂರದರ್ಶಕಗಳ ಮೂಲಕ ಆಕಾಶ ವೀಕ್ಷಣೆಗೆ ಹೇಳಿಮಾಡಿಸಿದಂತಿದೆ
– ಸಮುದ್ರ ಮಟ್ಟದಿಂದ ತುಂಬ ಎತ್ತರದಲ್ಲಿದೆ, ಜನಸಂಖ್ಯೆ ಕಡಿಮೆ, ಶುಷ್ಕ ಭೂಪ್ರದೇಶ ಆಗಿರುವುದರಿಂದ ದೀರ್ಘಕಾಲಿಕ ಆಕಾಶ ವೀಕ್ಷಣಾಲಯ ಸ್ಥಾಪನೆಗೂ ಸೂಕ್ತವಾಗಿದೆ
-ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಬೆಂಗಳೂರಿನ ಭಾರತೀಯ ಖಭೌತಶಾಸ್ತ್ರ ಸಂಸ್ಥೆ (ಐಐಎ)ಗಳು ಈ ಕೇಂದ್ರ ಸ್ಥಾಪನೆಯಲ್ಲಿ ಕೈಜೋಡಿಸಲಿವೆ
– ಹಾನ್ಲೆಯಲ್ಲಿ ಈಗಾಗಲೇ ಇರುವ ಭಾರತೀಯ ಬಾಹ್ಯಾಕಾಶ ವೀಕ್ಷಣಾ ಲಯ (ಐಎಒ)ದ ನಿರ್ವಹಣೆ ಯನ್ನು ಐಐಎ ಮಾಡುತ್ತಿದೆ
Advertisement