Advertisement
ಸಂಕಲ್ಪ ಸೆ ಸಿದ್ದಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2014 ಕ್ಕೆ ಮೊದಲು ಪ್ರತಿ ದಿನ ಪತ್ರಿಕೆಗಳಲ್ಲಿ ಭ್ರಷ್ಟಾಚಾರದ ಸುದ್ದಿ ಮುಖಪುಟದಲ್ಲಿ ರಾರಾಜಿಸುತ್ತಿತ್ತು. ಹಿಂದಿನ ಅವಧಿಯಲ್ಲಿ ಪ್ರಧಾನ ಮಂತ್ರಿಯನ್ನು ದೇಶದಲ್ಲಿ ಯಾರೂ ಪ್ರಧಾನಿ ಎಂದು ಪರಿಗಣಿಸಿರಲಿಲ್ಲ. ಎಲ್ಲಾ ಮಂತ್ರಿಗಳು ತಮ್ಮನ್ನು ತಾವೇ ಪ್ರಧಾನ ಮಂತ್ರಿ ಎಂದುಕೊಂಡಿದ್ದರು. ಆದರೆ ಈಗ ಪ್ರಧಾನಿಯ ಬಗ್ಗೆ ವಿಶ್ವವೇ ಮಾತನಾಡುತ್ತಿದೆ ಎಂದರು.
Related Articles
Advertisement
ನಾವು ಎನ್ಇಪಿ, ಆರೋಗ್ಯ ನೀತಿ, ಎಲೆಕ್ಟ್ರಾನಿಕ್ಸ್ ನೀತಿ, ಡಿಜಿಟಲ್ ಇಂಡಿಯಾ, ಉಡಾನ್, ಗ್ರೀನ್ ಇಂಡಿಯಾ, ಸ್ವಚ್ಛ ಭಾರತ ಭಾರತ ಅಭಿಯಾನ ಮಾಡಿದೆವು. ಅದರ ಪರಿಣಾಮ ಸ್ವಸ್ಥ ಭಾರತ ನಿರ್ಮಾಣ ಮಾಡಲು ಸಾಧ್ಯವಾಯಿತು. ಭಾರತವನ್ನು ಉತ್ಪಾದನಾ ಹಬ್ ಮಾಡಲು ಯೋಜನೆ ರೂಪಿಸಲಾಗುತ್ತಿದೆ. ಕೋವಿಡ್ ನಂತರ ಭಾರತದ ಜಿಡಿಪಿ 7.4 ಆಗಿದೆ. ವಿಶ್ವದ ಶ್ರೀಮಂತ ರಾಷ್ಟ್ರಗಳ ಜಿಡಿಪಿ ಬಿದ್ದು ಹೋಗಿದೆ. ಈಸ್ ಆಪ್ ಡೂಯಿಂಗ್ ನಲ್ಲಿ ನಾವು 143 ನೇ ಸ್ಥಾನದಿಂದ 63 ಕ್ಕೆ ಬಂದಿದ್ದೇವೆ. ಪಿಎಂ ಗತಿ ಶಕ್ತಿಯಿಂದ ಉದ್ಯಮಗಳಿಗೆ ಸಾಕಷ್ಟು ಅನುಕೂಲವಾಗಲಿದೆ. ರೂಪಾಯಿ ಮೌಲ್ಯದ ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತಿದೆ. ಆದರೆ, ಚೀನಾ, ಯುರೋಪ್, ಜಪಾನ್ ಕರೆನ್ಸಿಗಳ ಬಗ್ಗೆಯೂ ನಾವು ಹೋಲಿಕೆ ಮಾಡಿಕೊಳ್ಳಬೇಕು ಎಂದು ಟೀಕಾಕಾರರಿಗೆ ತಿರುಗೇಟು ನೀಡಿದರು.
ಪ್ರತಿ ಮನೆಗೂ ಶೌಚಾಲಯ ನೀಡಿದೆವು, ನೇರ ಬೆಮೆಪಿಟ್ ಯೋಜನೆ ಜಾರಿಗೆ ತಂದೆವು, ರೈತರ ಅಕೌಂಟ್ ಗೆ ನೇರ ಹಣ ವರ್ಗಾವಣೆ ಮಾಡಿದೆವು. ಜನರು ನಿತ್ಯ ಜೀವನದ ಸಮಸ್ಯೆಯಿಂದ ಹೊರ ಬರುವಂತೆ ಮಾಡಿದೆವು. 60 ಕೋಟಿ ಜನರು ತಮ್ಮ ಜೀವನ ಮಟ್ಟ ಸುಧಾರಿಸಿಕೊಳ್ಳಲು ಅವಕಾಶ ಕಲ್ಪಿಸಿದ್ದೇವೆ. ಆದರೆ ಪುಸ್ತಕ ಓದಿ ಅರ್ಥಶಾಸ್ತ್ರ ಹೇಳಬೇಡಿ, ವಾಸ್ತವ ನೋಡಿ ಅರ್ಥಶಾಸ್ತ್ರ ಹೇಳಬೇಕು. ಪ್ರತಿ ಮನೆಗೆ ನೀರು ಬಂದರೆ, ವಿದ್ಯುತ್ ಬಂದರೆ ಜಿಡಿಪಿ ಅಭಿವೃದ್ಧಿಯಾಗುವುದಿಲ್ಲವೆ? ಅದನ್ನು ಪುಸ್ತಕದಲ್ಲಿ ಬರೆದಿಲ್ಲ ಎಂದು ಚಿಂತಿಸಬೇಡಿ, ನಾವು ಜಿಡಿಪಿಯನ್ನು ಸುಸ್ಥಿತಿಯಲ್ಲಿ ಇಟ್ಟಿದ್ದೇವೆ ಎಂದು ಶಾ ವಿಪಕ್ಷಗಳ ಟೀಕೆಗೆ ಉತ್ತರ ನೀಡಿದರು.
ಉದ್ಯಮಗಳು ತಮ್ಮ ಸ್ಕೇಲ್ ಬದಲಾಯಿಸಬೇಕಿದೆ. ಆರ್ ಆಂಡ್ ಡಿ ಕಡೆಗೆ ಹೆಚ್ಚಿನ ಗಮನ ಹರಿಸಬೇಕಿದೆ. ಸ್ಟಾರ್ಟ್ ಅಪ್ ಗಳು ಮತ್ತು ಉದ್ಯಮಗಳ ನಡುವೆ ಜೋಡಣೆ ಮಾಡಿ ಅಭಿವೃದ್ದಿಯಾಗಬೇಕು. ಉದ್ಯಮಗಳು ಕಚ್ಚಾ ವಸ್ತುವಿನಿಂದ ಹಿಡಿದು ಉತ್ಪಾದನೆಯಾದ ವಸ್ತುವನ್ನು ರಫ್ತು ಮಾಡುವವರೆಗೂ ಎಲ್ಲವೂ ಆತ್ಮ ನಿರ್ಭರವಾಗಬೇಕು. ಉದ್ಯಮ ಪ್ರತ್ಯೇಕವಾಗಿ ಅಭಿವೃದ್ಧಿಯಾಗಲು ಸಾಧ್ಯವಿಲ್ಲ. ದೇಶದ ಜನರ ಜೊತೆಗೆ ಅಭಿವೃದ್ಧಿ ಮಾಡುವುದು ನಮ್ಮ ಉದ್ದೇಶವಾಗಿದೆ. ದೇಶದ ಅಭಿವೃದ್ಧಿಯಲ್ಲಿ ನಿಮ್ಮ ಸಹಕಾರ ಇರಲಿ ಎಂದು ಅಮಿತ್ ಶಾ ಹೇಳಿದರು.