Advertisement

ಐಪಿಎಲ್‌ ಮಾದರಿಯಲ್ಲಿ ಅಂಧರ ಟಿ20

07:00 AM May 11, 2018 | Team Udayavani |

ಹೊಸದಿಲ್ಲಿ: ಅಂಧರ ಕ್ರಿಕೆಟ್‌ ಬದುಕಿನಲ್ಲಿ ಹೊಸದೊಂದು ಆಶಾಕಿರಣ ಉದಯವಾಗುತ್ತಿದೆ. ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಮಾದರಿಯಲ್ಲಿ ಟಿ20 ಕ್ರಿಕೆಟ್‌ ಕೂಟ ಆರಂಭಿಸಲು ನಿರ್ಧರಿಸಲಾಗಿದೆ. ಈ ವಿಷಯವನ್ನು ಸಿಎಬಿಐ (ಭಾರತೀಯ ಅಂಧರ ಕ್ರಿಕೆಟ್‌ ಮಂಡಳಿ) ಪ್ರಧಾನ ಕಾರ್ಯದರ್ಶಿ ಜಾನ್‌ ಡೇವಿಡ್‌ ತಿಳಿಸಿದ್ದಾರೆ.

Advertisement

ಕೂಟವನ್ನು ನವೆಂಬರ್‌ ಅಥವಾ ಡಿಸೆಂಬರ್‌ ಮಧ್ಯಭಾಗದಲ್ಲಿ ಆರಂಭಿಸುವ ಸಾಧ್ಯತೆ ಇದೆ. ಒಟ್ಟು 10 ಫ್ರಾಂಚೈಸಿಗಳಿಂದ 10 ತಂಡಗಳು ಈ ಕೂಟದಲ್ಲಿ ಸೆಣಸಲಿವೆ. ಪ್ರತಿ ತಂಡಗಳು ತವರಿನಲ್ಲಿ ಹಾಗೂ ತವರಿನಾಚೆ ಕ್ರಮವಾಗಿ ಪಂದ್ಯವನ್ನು ಆಡಲಿವೆ.ಪಂದ್ಯಗಳು ಸ್ಟಾರ್‌ ನ್ಪೋರ್ಟ್ಸ್ನಲ್ಲಿ ನೇರ ಪ್ರಸಾರವಾಗುವ ಸಾಧ್ಯತೆ ಇದೆ. ಈ ಕುರಿತಂತೆ ಸಿಎಬಿಐ ನಿಂದ ಸ್ಟಾರ್‌ ನ್ಪೋರ್ಟ್ಸ್ ಜತೆಗೆ ಮಾತುಕತೆ ನಡೆಸಲಾಗಿದೆ ಎಂದು ಜಾನ್‌ ಡೇವಿಡ್‌ ಸ್ಪಷ್ಟಪಡಿಸಿದ್ದಾರೆ.

ಬಾಲಿವುಡ್‌ ಫ್ರಾಂಚೈಸಿ?
ಐಪಿಎಲ್‌ನಲ್ಲಿ ಕೋಲ್ಕತಾ ನೈಟ್‌ರೈಡರ್ ತಂಡದ ಮಾಲಕರಾಗಿರುವ ಬಾಲಿವುಡ್‌ ನಟ ಶಾರುಖ್‌ ಖಾನ್‌ ಹಾಗೂ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡದ ಫ್ರಾಂಚೈಸಿಯಾಗಿರುವ ಬಾಲಿವುಡ್‌ ನಟಿ ಪ್ರೀತಿ ಜಿಂಟಾ ಅವರೊಂದಿಗೆ ಭಾರತೀಯ ಅಂಧರ ಕ್ರಿಕೆಟ್‌ ಮಂಡಳಿ ಮಾತುಕತೆ ನಡೆಸಿದ್ದು ತಂಡವನ್ನು ಖರೀದಿಸುವ ಉತ್ಸಾಹ ತೋರಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next