ಹೊಸದಿಲ್ಲಿ: ಚೀನ ದಲ್ಲಿ ನಡೆಯುತ್ತಿರುವ ಏಷ್ಯನ್ ಜೂನಿಯರ್ ಸ್ಕ್ವಾಷ್ ಚಾಂಪಿ ಯನ್‌ಶಿಪ್‌ನಲ್ಲಿ ಭಾರತದ ಅನಾಹತ್ ಸಿಂಗ್ ಬಾಲಕಿಯರ ಅಂಡರ್-17 ವಿಭಾಗದಲ್ಲಿ ಸ್ವರ್ಣ ಪದಕ ಜಯಿಸಿದ್ದಾರೆ. ಹೊಸದಿಲ್ಲಿ ಮೂಲದ 15 ವರ್ಷದ ಅನಾಹತ್, ರವಿವಾರದ ಫೈನಲ್‌ನಲ್ಲಿ ಹಾಂಕಾಂಗ್‌ನ ಇನಾ ಕ್ವೊಂಗ್ ವಿರುದ್ಧ 3-1 ಅಂತರದ ಗೆಲುವು ಸಾಧಿಸಿದರು.
ಅನಾಹತ್ ಸಿಂಗ್ ಕ್ವಾರ್ಟರ್ ಫೈನಲ್ ಮತ್ತು ಸೆಮಿಫೈನಲ್‌ನಲ್ಲಿ ಕ್ರಮವಾಗಿ ಮಲೇ ಷ್ಯಾದ ಡಾಯ್ಸ ಲೀ ಮತ್ತು ವಿಟ್ನಿ ಇಸಾಬೆಲ್ ವಿಲ್ಸನ್ ಅವರನ್ನು ಪರಾಭವಗೊಳಿಸಿದ್ದರು.
ಕಳೆದ ವರ್ಷ ಥಾಯ್ಲೆಂಡ್‌ನಲ್ಲಿ ನಡೆದ ಕೂಟದಲ್ಲಿ ಅನಾಹತ್ ಸಿಂಗ್ ಮೊದಲ ಬಾರಿಗೆ ಬಂಗಾರ ಜಯಿಸಿದ್ದರು. 2019ರ ಮಕಾವು ಟೂರ್ನಿಯ ಅಂಡರ್-13 ವಿಭಾ ಗದಲ್ಲಿ ಕಂಚಿನ ಪದಕ ಗೆದ್ದ ಸಾಧನೆಯೂ ಇವರದಾಗಿದೆ.
ಈ ವರ್ಷ ನಡೆದ ಬ್ರಿಟಿಷ್ ಜೂನಿಯರ್ ಸ್ಕ್ವಾಷ್ ಪಂದ್ಯಾವಳಿಯ ಅಂಡರ್-15 ವಿಭಾಗದಲ್ಲಿ ಚಾಂಪಿಯನ್ ಆದ ಹೆಗ್ಗಳಿಕೆ ಅನಾಹತ್ ಆವರದು. ಫೈನಲ್‌ನಲ್ಲಿ ಅವರು ಈಜಿಪ್ಟ್ನ ಸೊಹೈಲಾ ಹಾಜೆಮ್ ವಿರುದ್ಧ ಜಯ ಸಾಧಿಸಿದ್ದರು.
ಅನಾಹತ್ 2022ರ ಬರ್ಮಿಂಗ್‌ಹ್ಯಾಮ್ ಕಾಮನ್ವೆಲ್ತ್ ಗೇಮ್ಸ್‌ನಲ್ಲೂ ಭಾರತವನ್ನು ಪ್ರತಿನಿಧಿಸಿದ್ದರು. ಆಗ ಇವರ ವಯಸ್ಸು ಕೇವಲ 14 ವರ್ಷ ಆಗಿತ್ತು. ಗೇಮ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ ಕಿರಿಯ ಆಟಗಾರ್ತಿ ಎಂಬ ದಾಖಲೆಯನ್ನು ಒಲಿಸಿಕೊಂಡಿದ್ದರು.