Advertisement
ಭಾರತ ಈವರೆಗಿನ ಮೂರೂ ಪಂದ್ಯಗಳನ್ನು ಗೆದ್ದು ಅಗ್ರಸ್ಥಾನ ಅಲಂಕರಿಸಿದ್ದರೆ, ಶ್ರೀಲಂಕಾ ಮೂರರಲ್ಲೂ ಸೋತು ನಿರ್ಗಮನದ ಹಾದಿ ಯಲ್ಲಿದೆ. ಹೀಗಾಗಿ ಈ ಮುಖಾಮುಖೀಯ ಫಲಿ ತಾಂಶವನ್ನು ಊಹಿಸುವುದು ಕಷ್ಟವೇನಲ್ಲ!ಹೀತರ್ ನೈಟ್ ನೇತೃತ್ವದ ಆತಿಥೇಯ ಇಂಗ್ಲೆಂಡನ್ನು ಅವರದೇ ನೆಲದಲ್ಲಿ ಹೊಡೆದುರು ಳಿಸುವ ಮೂಲಕ ಪ್ರಚಂಡ ಆರಂಭ ಕಂಡು ಕೊಂಡ ಭಾರತದ ವನಿತೆಯರು ಮುಂದಿನ ಪಂದ್ಯ ದಲ್ಲಿ ವೆಸ್ಟ್ ಇಂಡೀಸಿಗೆ ನೀರು ಕುಡಿಸಿದರು.
ಕೊನೆಯ ಪಂದ್ಯದಲ್ಲಿ ಪಾಕಿಸ್ಥಾನವನ್ನು ಮಣಿಸಿ ಸೈ ಎನಿಸಿಕೊಂಡರು. ಇದೇ ಲಯ ಹಾಗೂ ರಭಸ ವನ್ನು ಕಾಯ್ದುಕೊಂಡರೆ ಭಾರತಕ್ಕೆ ಶ್ರೀಲಂಕಾ ತಂಡ ಸುಲಭದ ತುತ್ತಾಗುವ ಎಲ್ಲ ಸಾಧ್ಯತೆ ಇದೆ.
ವಿಶ್ವಕಪ್ ಲೀಗ್ ಹಂತದಲ್ಲಿ ಭಾರತಕ್ಕೆ ಎದುರಾಗ ಲಿರುವ ಕೊನೆಯ “ದುರ್ಬಲ ತಂಡ’ವನ್ನಾಗಿ ಶ್ರೀಲಂಕಾವನ್ನು ಗುರುತಿ ಸಬಹುದು. ಉಳಿದ 3 ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯ ಮತ್ತು ನ್ಯೂಜಿಲ್ಯಾಂಡ್ ತಂಡ ಗಳ ಸವಾಲನ್ನು ಭಾರತ ಎದುರಿ ಸಬೇಕಿದೆ. ಇವೆಲ್ಲವೂ ಅತ್ಯಂತ ಬಲಿಷ್ಠ ಹಾಗೂ ಅಪಾಯಕಾರಿ ತಂಡಗಳೆಂಬುದನ್ನು ಮರೆಯು ವಂತಿಲ್ಲ. ಮಿಥಾಲಿ ಪಡೆಗೆ ಲೀಗ್ ಹಂತದ ನಿಜವಾದ ಸವಾಲು ಎದುರಾಗುವುದೇ ಶ್ರೀಲಂಕಾ ಪಂದ್ಯದ ಬಳಿಕ. ಹೀಗಾಗಿ ಲಂಕೆಯನ್ನೂ ಮಣಿಸಿ ತನ್ನ ಸೆಮಿಫೈನಲ್ ಸಾಧ್ಯತೆಯನ್ನು ಭಾರತ ಉಜ್ವಲಗೊಳಿಸಬೇಕಿದೆ. ಶ್ರೀಲಂಕಾವನ್ನು ಕಳೆದ ಏಕದಿನ ಸರಣಿಯಲ್ಲಿ ವೈಟ್‌ವಾಶ್ ಮಾಡಿದ ಹೆಗ್ಗಳಿಕೆ ಭಾರತದ್ದಾಗಿದೆ ಎಂಬುದನ್ನು ಇಲ್ಲೊಮ್ಮೆ ನೆನಪಿಸಿಕೊಳ್ಳುವುದು ಒಳ್ಳೆಯದು. ಮೊದಲ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡನ್ನು 35 ರನ್ನುಗಳಿಂದ ಸದೆಬಡಿಯುವ ಮೂಲಕ ಭಾರತ ಉಳಿದೆಲ್ಲ ತಂಡಗಳಿಗೆ ಎಚ್ಚರಿಕೆ ನೀಡಿತು. ತನ್ನ ಶಕ್ತಿಯನ್ನು ವೆಸ್ಟ್ ಇಂಡೀಸ್ ಮೇಲೂ ಪ್ರಯೋಗಿಸಿತು. ಪರಿಣಾಮ, 7 ವಿಕೆಟ್ ಜಯಭೇರಿ. ಸಾಂಪ್ರದಾಯಕ ಎದು ರಾಳಿ ಪಾಕಿಸ್ಥಾನ ವಿರುದ್ಧ 169 ರನ್ನಿಗೆ ಕುಸಿದಾಗ ಹೇಗೋ, ಏನೋ ಎಂಬ ಆತಂಕವಿತ್ತು. ಆದರೆ ಬೌಲರ್‌ಗಳು ಮ್ಯಾಜಿಕ್ ಮಾಡಿದರು. ಪಾಕ್ 74 ರನ್ನಿಗೆ ಗಂಟುಮೂಟೆ ಕಟ್ಟಿತು. ಪಾಕಿಸ್ಥಾನ ವಿರುದ್ಧದ ಈ ಜಯವನ್ನು ಪುರುಷರ ತಂಡ ಕ್ಕಿಂತಲೂ ಮಿಗಿಲಾದ ಸಾಧನೆ ಎಂದು ಬಣ್ಣಿಸಲಾಗುತ್ತಿದೆ. ಇದು ಮಿಥಾಲಿ ಬಳಗದ ಆತ್ಮವಿಶ್ವಾಸವನ್ನು ದೊಡ್ಡ ಮಟ್ಟದಲ್ಲೇ ಹೆಚ್ಚಿಸಿದೆ.
Related Articles
ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಭಾರತದ ಬ್ಯಾಟಿಂಗ್ ಸಾಮರ್ಥ್ಯ ಅನಾವರಣಗೊಂಡಿತ್ತು. ಎಡಗೈ ಆರಂಭಕಾರ್ತಿ ಸ್ಮತಿ ಮಂಧನಾ, ಪೂನಂ ರಾವತ್, ಮಿಥಾಲಿ ರಾಜ್ ಅವರೆಲ್ಲ ಭಾರತದ ಬ್ಯಾಟಿಂಗ್ ಶಕ್ತಿಯಾಗಿ ಮೂಡಿಬಂದಿದ್ದರು. ಪಾಕಿಸ್ಥಾನ ವಿರುದ್ಧ ಬ್ಯಾಟಿಂಗ್ ಹೆಚ್ಚು ಕ್ಲಿಕ್ ಆಗಲಿಲ್ಲ. ಆದರೆ ಬೌಲರ್ ಗಳು ಜಬರ್ದಸ್ತ್ ದಾಳಿ ಸಂಘಟಿಸಿದರು. ಅದ ರಲ್ಲೂ ಮುಖ್ಯವಾಗಿ ಎಡಗೈ ಸ್ಪಿನ್ನರ್ ಏಕ್ತಾ ಬಿಷ್ಟ್ 5 ವಿಕೆಟ್ ಉಡಾಯಿಸಿ ಮೆರೆದರು. ಹೀಗಾಗಿ ಭಾರತಕ್ಕೆ 169ರಷ್ಟು ಸಾಮಾನ್ಯ ಮೊತ್ತವನ್ನು ಉಳಿಸಿಕೊಳ್ಳಲು ಸಾಧ್ಯವಾಯಿತು. ಆಫ್ ಸ್ಪಿನ್ನರ್ ದೀಪ್ತಿ ಶರ್ಮ ಕೂಡ ಭಾರತದ ಕೀ ಬೌಲರ್ ಆಗಿ ಕಾಣಿಸಿಕೊಂಡಿದ್ದಾರೆ. ಸ್ಪಿನ್ನಿಗೆ ಹೆಚ್ಚಿನ ನೆರವು ನೀಡದ ಇಂಗ್ಲೆಂಡ್ ಟ್ರ್ಯಾಕ್‌ಗಳಲ್ಲಿ ಸ್ಪಿನ್ ಮ್ಯಾಜಿಕ್ ನಡೆಸಿದ ಹೆಗ್ಗಳಿಕೆ ಭಾರತದ್ದು!
Advertisement
ಏಕದಿನದಲ್ಲಿ ಸರ್ವಾಧಿಕ ವಿಕೆಟ್ ಕಿತ್ತು ವಿಶ್ವ ದಾಖಲೆ ನಿರ್ಮಿಸಿದ ಜೂಲನ್ ಗೋಸ್ವಾಮಿ ಈ ಸರಣಿಯಲ್ಲಿ ನಿರೀಕ್ಷಿತ ಪ್ರದ ರ್ಶನ ನೀಡಿಲ್ಲ. ಜೂಲನ್ ಸಹಿತ ಉಳಿದ ವೇಗಿಗಳೂ ಮಿಂಚ ಲಾರಂಭಿಸಿದರೆ ಭಾರತದ ಬೌಲಿಂಗ್ ಇನ್ನಷ್ಟು ಹರಿತಗೊಳ್ಳಲಿದೆ. ಇದಕ್ಕೆ ಲಂಕಾ ಪಂದ್ಯ ಉತ್ತಮ ವೇದಿಕೆ ಒದಗಿಸಬಹುದೆಂಬ ನಿರೀಕ್ಷೆ ಇದೆ.
ಲಂಕೆಗೆ ಚಾಮರಿ ಅತ್ತಪಟ್ಟು ಬಲಶ್ರೀಲಂಕಾ ಪ್ರತಿಭಾನ್ವಿತ ಹಾಗೂ ಅನುಭವಿ ಆಟ ಗಾರರನ್ನು ಹೊಂದಿದ್ದರೂ ಪಂದ್ಯಕ್ಕೆ ಪರಿಪೂರ್ಣ ಮುಕ್ತಾಯ ನೀಡುವಲ್ಲಿ ವಿಫಲವಾಗುತ್ತಿದೆ. ಮೂರೂ ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ನಡೆಸಿದರೂ ಎದುರಾಳಿಗಳನ್ನು ನಿಯಂತ್ರಿಸಲು ಲಂಕಾ ಬೌಲರ್‌ಗಳು ಸಂಪೂರ್ಣವಾಗಿ ಎಡವಿ ದ್ದಾರೆ. ಪರಿಣಾಮ, ನ್ಯೂಜಿಲ್ಯಾಂಡ್ ವಿರುದ್ಧ 9 ವಿಕೆಟ್ ಸೋಲು, ಆಸ್ಟ್ರೇಲಿಯ ವಿರುದ್ಧ 8 ವಿಕೆಟ್ ಸೋಲು, ಇಂಗ್ಲೆಂಡ್ ವಿರುದ್ಧ 7 ವಿಕೆಟ್ ಸೋಲು! ಆಸ್ಟ್ರೇಲಿಯ ವಿರುದ್ಧ ಅಜೇಯ 178 ರನ್ ಬಾರಿಸಿ ಮಿಂಚಿದ ಚಾಮರಿ ಅತ್ತಪಟ್ಟು ಅವ ರನ್ನು ಶ್ರೀಲಂಕಾ ಬಹ ಳಷ್ಟು ನೆಚ್ಚಿಕೊಂಡಿದೆ. ಇದು ವನಿತಾ ಕ್ರಿಕೆಟ್ ಇತಿಹಾಸದ ಸ್ಮರ ಣೀಯ ಇನ್ನಿಂಗ್ಸ್ ಗಳಲ್ಲಿ ಒಂದಾಗಿ ದಾಖಲಾಗಿದೆ. ಆದರೂ ಈ ಪಂದ್ಯವನ್ನು ಲಂಕಾ ಸೋತಿತು. ನ್ಯೂಜಿ ಲ್ಯಾಂಡ್ ವಿರುದ್ಧವೂ ಮಿಂಚಿದ ಚಾಮರಿ 53 ರನ್ ಹೊಡೆದಿದ್ದರು.
“ಭಾರತ ಈ ಪಂದ್ಯಾವಳಿಯಲ್ಲಿ ಅಮೋಘ ಪ್ರದರ್ಶನ ನೀಡುತ್ತಿದೆ. ಅವರೆದುರು ಗೆಲ್ಲ ಬೇಕಾದರೆ ನಾವು ಅತ್ಯಮೋಘ ಮಟ್ಟದ ಆಟವನ್ನೇ ಆಡಬೇಕಿದೆ. ಕಳೆದ ಕೆಲವು ವರ್ಷಗಳಿಂದ ನಮ್ಮ ಬ್ಯಾಟಿಂಗ್ ಬಗ್ಗೆ ಯಾವುದೇ ದೂರುಗಳಿಲ್ಲ. ಆದರೆ ಬೌಲಿಂಗ್ ಸಾಮರ್ಥ್ಯ ಸಾಲದು. ಭಾರತದ ವಿರುದ್ಧ ಗರಿಷ್ಠ ಪ್ರಯತ್ನ ಮಾಡಲಿದ್ದೇವೆ’ ಎಂದಿದ್ದಾರೆ ಲಂಕಾ ನಾಯಕಿ ಇನೋಕಾ ರಣವೀರ. ತಂಡಗಳು
ಭಾರತ: ಮಿಥಾಲಿ ರಾಜ್ (ನಾಯಕಿ), ಸ್ಮತಿ ಮಂಧನಾ, ಪೂನಂ ರಾವತ್, ಹರ್ಮನ್‌ಪ್ರೀತ್ ಕೌರ್, ವೇದಾ ಕೃಷ್ಣಮೂರ್ತಿ, ದೀಪ್ತಿ ಶರ್ಮ, ಸುಷ್ಮಾ ವರ್ಮ, ಪೂನಂ ಯಾದವ್, ಜೂಲನ್ ಗೋಸ್ವಾಮಿ, ಮಾನ್ಸಿ ಜೋಶಿ, ಮೋನಾ ಮೆಶ್ರಮ್, ನುಝತ್ ಪರ್ವೀನ್, ಶಿಖಾ ಪಾಂಡೆ. ಶ್ರೀಲಂಕಾ: ಇನೋಕಾ ರಣವೀರ (ನಾಯಕಿ), ಚಾಮರಿ ಅತ್ತಪಟ್ಟು, ಚಂಡಿಮಾ ಗುಣರತ್ನೆ, ನಿಪುಣಿ ಹಂಸಿಕಾ, ಅಮಾ ಕಾಂಚನಾ, ಇಶಾನಿ ಲೋಕುಸೂರ್ಯ, ಹರ್ಷಿತಾ ಮಾಧವಿ, ದಿಲಾನಿ ಮನೋದರಾ, ಹಾಸಿನಿ ಪೆರೆರ, ಚಾಮರಿ ಪೊಲ್ಗಂಪಲಾ, ಉದೇಶಿಕಾ ಪ್ರಬೋದನಿ, ಒಶಾದಿ ರಣಸಿಂಘೆ, ಶಶಿಕಲಾ ಸಿರಿವರ್ಧನಾ, ಪ್ರಸಾದನಿ ವೀರಕೋಡಿ, ಶ್ರಿಪಾಲಿ ವೀರಕೋಡಿ.