Advertisement

ಚೊಚ್ಚಲ ಸ್ವದೇಶಿ ನಿರ್ಮಿತ “ಸೂಪರ್‌ ಪವರ್‌ ಧ್ರುವ್‌”; ಭಾರತಕ್ಕೆ ಏನು ಲಾಭ?

12:53 PM Sep 04, 2021 | Team Udayavani |

ಭಾರತದ ಚೊಚ್ಚಲ ಸ್ವದೇಶಿ ನಿರ್ಮಿತ ನ್ಯೂಕ್ಲಿಯರ್‌ ಕ್ಷಿಪಣಿ ಟ್ರ್ಯಾಕಿಂಗ್‌ ಶಿಪ್‌ “ಐಎನ್‌ಎಸ್‌ ಧ್ರುವ್‌’ ಅತಿ ಶೀಘ್ರದಲ್ಲಿ ನೌಕಾಪಡೆಗೆ ನಿಯೋಜನೆಗೊಳ್ಳಲಿದೆ. “ಧ್ರುವ್‌’ ಸುತ್ತಮುತ್ತ ಒಂದು ಕಿರುನೋಟ..

Advertisement

ದೋವಲ್‌ರಿಂದ ರಾಷ್ಟ್ರಾರ್ಪಣೆ
ಸೆ.10ರಂದು ವಿಶಾಖಪಟ್ಟಣಂನಿಂದ “ಐಎನ್‌ಎಸ್‌ ಧ್ರುವ’ವನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ರಾಷ್ಟ್ರಾರ್ಪಣೆಗೊಳಿಸುವ ಸಾಧ್ಯತೆ ಇದೆ. ನೌಕಾ ಪಡೆ ಮುಖ್ಯಸ್ಥ ಅಡ್ಮಿರಲ್‌ ಕರಮ್‌ಬೀರ್‌ ಸಿಂಗ್‌ ಮತ್ತು ಎನ್‌ಟಿಆರ್‌ಒ ಅಧ್ಯಕ್ಷ ಅನಿಲ್‌ ದಸ್ಮಾನ ಉಪಸ್ಥಿತರಿರಲಿದ್ದಾರೆ.

ನಿರ್ಮಾಣ
ಹಿಂದೂಸ್ತಾನ್‌ ಶಿಪ್‌ಯಾರ್ಡ್‌ ಸಂಸ್ಥೆ, ಡಿಆರ್‌ಡಿಒ ಮತ್ತು ಎನ್‌ ಡಿಆರ್‌ಒ ಸಹಯೋಗ

ಭಾರತ 6ನೇ ರಾಷ್ಟ್ರ
ನ್ಯೂಕ್ಲಿಯರ್‌ಕ್ಷಿಪಣಿ ಟ್ರ್ಯಾಕಿಂಗ್‌ ಸಾಮರ್ಥ್ಯದ ನೌಕೆ ಪ್ರಸ್ತುತ ಫ್ರಾನ್ಸ್‌, ಅಮೆರಿಕ, ಇಂಗ್ಲೆಂಡ್‌, ರಷ್ಯಾ ಮತ್ತು ಚೀನಾಗಳಲ್ಲಿ ಮಾತ್ರವೇ ಇದೆ. ಭಾರತ 6ನೇ ರಾಷ್ಟ್ರವಾಗಿ ಇಂಥ ನೌಕೆಯನ್ನು ನಿಯೋಜಿಸುತ್ತಿದೆ.

Advertisement

ಸಾಮರ್ಥ್ಯವೇನು?
● 10 ಸಾವಿರ ಟನ್‌ ತೂಕದ ಶಿಪ್‌.
● ಖಂಡಾಂತರ ಕ್ಷಿಪಣಿ ನಿರೋಧಕ ಸಾಮರ್ಥ್ಯ.
● ಶತ್ರುಕ್ಷಿಪಣಿ ದಾಳಿ ಕುರಿತ ಮುನ್ಸೂಚಕ ವ್ಯವಸ್ಥೆ.
● ಶತ್ರು ರಾಡಾರ್‌ ಸಿಗ್ನಲ್‌ಗ‌ಳ ಮೇಲೆ ನಿಗಾ.
● ಸ್ಪೈ ಸ್ಯಾಟ್‌ಲೈಟ್‌ ಗಳ ಕಳ್ಳಗಣ್ಣನ್ನು ಛೇದಿಸುವ ಸಾಮರ್ಥ್ಯ.
● ಜಲಾಂತರ್ಗಾಮಿ ಡ್ರೋನ್‌ ದಾಳಿ ತಡೆ ಸಾಮರ್ಥ್ಯ.

ಭಾರತಕ್ಕೆ ಏನು ಲಾಭ?
● ಇಂಡೋಪೆಸಿಫಿಕ್‌ ಸೀಮೆಯಲ್ಲಿ ಭಾರತದ ಐಎನ್‌ಎಸ್‌ ಧ್ರುವ ನಿಯೋಜನೆ.
● ಪಾಕಿಸ್ತಾನ, ಚೀನಾ- ಎರಡೂ ಅಣ್ವಸ್ತ್ರ ರಾಷ್ಟ್ರಗಳು. ನಮ್ಮ ಸಾಗರ ಗಡಿಯಲ್ಲಿ ಇವು ಖಂಡಾಂತರ ಕ್ಷಿಪಣಿ ಪರೀಕ್ಷೆ ಅಥವಾ ದೇಶದ ಮೇಲೆ ಪ್ರಯೋಗಿಸಿದರೆ ತಕ್ಷಣವೇ ಮುನ್ಸೂಚನೆ.

Advertisement

Udayavani is now on Telegram. Click here to join our channel and stay updated with the latest news.

Next