ನವದೆಹಲಿ: ವೈಯಕ್ತಿಕ ಡೇಟಾ ಗೌಪ್ಯತೆ ಕುರಿತು ಕಾಳಜಿ ಹೆಚ್ಚಾಗುತ್ತಿರುವ ನಡುವೆಯೇ ಈಗಲೂ ಹೆಚ್ಚಿನ ಜನರು ಸುಲಭದ ಪಾಸ್‌ವರ್ಡ್ ಬಳಸುತ್ತಿರುವುದು ಸಮೀಕ್ಷೆಯಿಂದ ತಿಳಿದುಬಂದಿದೆ.
ನಾರ್ಡ್‌ಪಾಸ್ ಅಧ್ಯಯನದ ಐದನೇ ಆವೃತ್ತಿಯ ವರದಿ ಪ್ರಕಾರ, 2023ರಲ್ಲಿ ಭಾರತದಲ್ಲಿ ಅಧಿಕ ಸಂಖ್ಯೆಯ ಜನರ ಪಾಸ್‌ವರ್ಡ್ “123456′ ಆಗಿದೆ.
ಇದೇ ವೇಳೆ ಜಗತ್ತಿನ ಶೇ.31ರಷ್ಟು ಪಾಸ್‌ವರ್ಡ್‌ಗಳು ಕೇವಲ ಸಂಖ್ಯೆಗಳನ್ನು ಹೊಂದಿದೆ. ಉದಾಹರಣೆಗೆ “123456789′, “12345′ ಮತ್ತು “00000′ ಆಗಿದೆ.
ಹೆಚ್ಚಿನ ಇಂಟರ್ನೆಟ್ ಬಳಕೆದಾರರು ದೇಶದ ಅಥವಾ ನಗರದ ಹೆಸರನ್ನು ಪಾಸ್‌ವರ್ಡ್ ಆಗಿ ಬಳಸುತ್ತಾರೆ. ಭಾರತೀಯರು ಕೂಡ ಇದಕ್ಕೆ ಹೊರತಲ್ಲ. ಭಾರತದಲ್ಲಿ “ಇಂಡಿಯಾ123′ ಎಂದು, ಸ್ಪೇನ್‌ನಲ್ಲಿ “ಬಾರ್ಸಿಲೊನಾ’ ಮತ್ತು ಗ್ರೀಸ್‌ನಲ್ಲಿ “ಕಲಾಮತ’ ಎಂದು ಹೆಚ್ಚಿನ ಜನರು ಬಳಸುತ್ತಾರೆ.
ಭಾರತದಲ್ಲಿ ಅನೇಕ ಜನರು “ಪಾಸ್‌ವರ್ಡ್’, “ಪಾಸ್‌ವರ್ಡ್123′, “ಪಾಸ್123′ ಮತ್ತು “ಅಡ್ಮಿನ್’ ಎಂದು ಬಳಸುವುದು ಸಾಮಾನ್ಯವಾಗಿದೆ ಎಂದು ವರದಿ ತಿಳಿಸಿದೆ. ಸೈಬರ್ ಅಪರಾಧಗಳು ಹೆಚ್ಚುತ್ತಿರುವ ಈ ದಿನಮಾನದಲ್ಲಿ ಸುಲಭವಾದ ಪಾಸ್‌ವರ್ಡ್ ಬಳಕೆಯು, ಸೈಬರ್ ಕಳ್ಳರಿಗೆ ಸುಲಭದ ತುತ್ತಾಗಲಿದೆ. ಆದಷ್ಟು ಬಳಕೆದಾರರು ಅಕ್ಷರ, ಸಂಖ್ಯೆ, ವಿಶೇಷ ಕೀಲಿಗಳು ಹೊಂದಿರುವ ಬಲಿಷ್ಠ ಪಾಸ್‌ಪಾರ್ಡ್‌ಗಳನ್ನು ಬಳಸಬೇಕಿದೆ.