Advertisement
ಇಂಗ್ಲೆಂಡ್ ಉತ್ತಮ ತಂಡವಲ್ಲ!ಕೆ.ಎಲ್.ರಾಹುಲ್ ಶೇ. 8.12, ಅಜಿಂಕ್ಯ ರಹಾನೆ 11.4, ಮುರಳಿ ವಿಜಯ್ 12.8, ರೋಹಿತ್ ಶರ್ಮ 10.33, ಚೇತೇಶ್ವರ ಪೂಜಾರ 14.75, ಶಿಖರ್ ಧವನ್ 17.75 ಹಾಗೂ ತಂಡದ ನಾಯಕ ವಿರಾಟ್ ಕೊಹ್ಲಿ 52.6ರ ಸರಾಸರಿಯಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡ್‌ನಲ್ಲಿ ರನ್ ಸಂಗ್ರಹಿಸಿದ್ದಾರೆ. ವಿಶ್ವದ ಟಾಪ್ ಒನ್ ಟೆಸ್ಟ್ ತಂಡ ಎಂಬ ಗೌರವ ಕೂಡ ಭಾರತವನ್ನು ರಕ್ಷಿಸುತ್ತಿಲ್ಲ. ಕಾರಣವಿಷ್ಟೇ, ರನ್‌ಗಳು ಬರದೆ ತಂಡದ 20 ವಿಕೆಟ್ ನಷ್ಟವಾದರೆ ಟೆಸ್ಟ್‌ನಲ್ಲಿ ಸೋಲಿನ ಹೊರತಾದ ಫಲಿತಾಂಶ ಬರಲು ಸಾಧ್ಯವಿಲ್ಲ!
Related Articles
ಎಜ್‌ಬಾಸ್ಟನ್‌ನಲ್ಲಿ ಒಟ್ಟಾರೆಯಾಗಿ ಭಾರತ ಬಾಳಿದ್ದು 130.2 ಓವರ್‌ಗಳಲ್ಲಿ ಮಾತ್ರ. ಲಾರ್ಡ್ಸ್‌ನಲ್ಲಂತೂ ಭಾರತದ ಮೊದಲ ಪಾಳಿ ಕೇವಲ 35.2 ಓವರ್‌ಗೆ ಸೀಮಿತವಾಗಿತ್ತು. ಈವರೆಗೆ ಭಾರತ ಎದುರಿಸಿದ ಚೆಂಡುಗಳಲ್ಲಿ ಶೇ. 32ರಷ್ಟನ್ನು ವಿರಾಟ್ ಒಬ್ಬರೇ ಎದುರಿಸಿದ್ದಾರೆ. ವಿಜಯ್, ಧವನ್, ರಾಹುಲ್, ಪುಜಾರ, ರಹಾನೆಯರೆಲ್ಲ ಸೇರಿ ಶೇ. 34ರಷ್ಟು ಚೆಂಡನ್ನು ಆಡಿದ್ದಾರೆ. ಕೇವಲ ಮೂರು 50 ಪ್ಲಸ್ ಜೊತೆಯಾಟ ಬಂದಿದೆ. ಭಾರತದ ಟಾಪ್ 10 ಜೊತೆಯಾಟದಲ್ಲಿ ಎಂಟರಲ್ಲಿ ಕೊಹ್ಲಿ ಇದ್ದಾರೆ. ಬಹುಷಃ ಕೋಚ್ ರವಿಶಾಸ್ತ್ರಿಯವರಿಗೂ ಭಾರತದ ಯಶಸ್ಸಿಗೆ ಮಾಡಬೇಕಾಗಿರುವುದು ಅರ್ಥವಾಗಿದೆ. ಟೆಸ್ಟ್ ಕ್ರಿಕೆಟ್ ಎಂದರೆ ಏನು ಎಂಬುದನ್ನು ಆಟಗಾರರು ಆಡಿಯೇ ಅರ್ಥ ಮಾಡಿಕೊಳ್ಳಬೇಕಿದೆ!
Advertisement
ಕಾಂಗರೂ ನಾಡಿನಲ್ಲಿ ಅನಿಲ್ ಕುಂಬ್ಳೆ ನಾಯಕತ್ವದಲ್ಲಿ 2007ರಲ್ಲಿ ಭಾರತ ಪ್ರವಾಸಗೈದಾಗ ಡಿಸೆಂಬರ್‌ನಲ್ಲಿ ನಡೆದ ಮೆಲ್ಬೋರ್ನ್ ಟೆಸ್ಟ್‌ನಲ್ಲಿ ಭಾರತ 337 ರನ್‌ಗಳ ಬೃಹತ್ ಅಂತರದಿಂದ ಸೋಲು ಅನುಭವಿಸಿತ್ತು. ಕ್ಯಾಲೆಂಡರ್ ಬದಲಾದರೂ ನಸೀಬು ಖುಲಾಯಿಸಲಿಲ್ಲ. 2008ರ ಜನವರಿಯ ಸಿಡ್ನಿ ಟೆಸ್ಟ್‌ನಲ್ಲಿ 122 ರನ್ ಪರಾಭವ ಎದುರಾಗಿತ್ತು. 4-0? ಪರ್ತ್‌ನಲ್ಲಿ ಅಮೋಘ ಜಯ ಹಾಗೂ ನಾಲ್ಕನೇ ಟೆಸ್ಟ್‌ನಲ್ಲಿ ಗೌರವಾನ್ವಿತ ಡ್ರಾ. ಪರಿಣಿತರು ಈಗಲೂ ಹೇಳುವುದು ಒಂದೇ ಮಾತು, ಭಾರತದ ಆಟಗಾರರು ವಿದೇಶಗಳಲ್ಲಿನ ತಮ್ಮ ಫಲಿತಾಂಶಗಳನ್ನು ನೋಡುತ್ತ ಕೂರುವ ಬದಲು ತಮ್ಮ ಪ್ರದರ್ಶನದ ಬಗ್ಗೆ ಮಾತ್ರ ಗಂಭೀರವಾಗಿ ಚಿಂತಿಸಬೇಕು. ಆಟಗಾರರ ರನ್‌ಗಳು ಸುಧಾರಿಸಿದರೆ, ವಿಕೆಟ್ ಕೀಳುವ ಪ್ರಮಾಣ ಹೆಚ್ಚಿದರೆ ವಿಜಯಗಳ ಉಡುಗೊರೆ ಸಿಗದೆ ಹೋಗದು. 2007-08ರ ಆಸ್ಟ್ರೇಲಿಯಾ ಸರಣಿ ಈಗಲೂ ನೆನಪಿನಲ್ಲಿದೆ. ಇಂಗ್ಲೆಂಡ್ ವಿರುದ್ಧದ ಸರಣಿಯನ್ನು ಸ್ಮರಣಾರ್ಹ ಮಾಡಲು ಈಗಲೂ ಅವಕಾಶವಿದೆ.
5-0? ನಾಲ್ಕು ವರ್ಷಗಳ ಕೆಳಗೆ ಇದೇ ಟ್ರೆಂಡ್‌ಬ್ರಿಡ್ಜ್ನಲ್ಲಿ ಭಾರತ ತಲೆ ಎತ್ತಿನಿಂತಿತ್ತು. ಮುರಳಿ ವಿಜಯ್‌ರ 146, ಭುವನೇಶ್ವರ್ ಕುಮಾರ್‌ರ ಎರಡು ಅರ್ಧ ಶತಕ ಹಾಗೂ ಒಂದು 5 ವಿಕೆಟ್ ಸಾಧನೆ, ಸ್ಟುವರ್ಟ್ ಬಿನ್ನಿಯವರ ಪಾದಾರ್ಪಣೆಯ 78 ಪಂದ್ಯವನ್ನು ಡ್ರಾ ಮಾಡಿಸಿಕೊಟ್ಟಿತ್ತು. ಟೆಸ್ಟ್ ಕ್ರಿಕೆಟ್‌ನ್ನು ಖುದ್ದು ಬಿಸಿಸಿಐ ಕೂಡ ಗಂಭೀರವಾಗಿ ಪರಿಗಣಿಸದಿರುವುದರಿಂದಲೇ ಭಾರತದ ಜಸ್‌ಪ್ರೀತ್ ಬುಮ್ರಾ ತರದವರು ಗಾಯಾಳುವಾಗುತ್ತಿದ್ದಾರೆ. ಕೊಹ್ಲಿ ಬೆನ್ನು ನೋವು ಎಂದು ಹೇಳುತ್ತಿದ್ದಾರೆ. ಅಭ್ಯಾಸ ಪಂದ್ಯಗಳು ರದ್ದಾಗುತ್ತಿವೆ. ಈ ಎಲ್ಲ ಸಮಸ್ಯೆ, ನಾಳೆ 5-0ದ ಸೋಲನ್ನು ಕೂಡ ಒಂದು ಐಪಿಎಲ್ ಟೂರ್ನಿ ಮರೆಸಿಬಿಡುತ್ತದೆ ಗೊತ್ತೇ?
ಬಿಸಿಸಿಐ ಮಾಡುವುದು ಎಡವಟ್ಟು!ಭುವನೇಶ್ವರ ಕುಮಾರ್ ಗಾಯಾಳುವಾಗಿಯೇ ಇಂಗ್ಲೆಂಡ್‌ಗೆ ಪ್ರವಾಸ ಹೋದರೋ ಗೊತ್ತಿಲ್ಲ. ಬಿಸಿಸಿಐ ಭುವಿ ಫಿಟ್ ಆಗಿದ್ದಾರೆ ಎಂದು ತೋರಿಸಲು ಭುವಿ ಅವರ ಬೌಲಿಂಗ್ ನೆಟ್ ಪ್ರಾಕ್ಟೀಸ್‌ನ ವಿಡಿಯೋವನ್ನು ಅ ಕೃತ ಟ್ವಿಟರ್ ಖಾತೆಯಲ್ಲಿ ಹಾಕಿತು. ನೋಡಿದರೆ, ಭುವಿ ಮಾಡಿದ್ದು ಕಣ್ಣಿಗೆ ರಾಚುವ ನೋಬಾಲ್! ಟ್ವೀಟಿಗರು ಕಿಚಾಯಿಸಿದರು, ಮ್ಯಾಚ್ ಫಿಕ್ಸಿಂಗ್ ಮಾಡಲು ನೋ ಬಾಲ್ ತರಬೇತಿ! 2014ರ ಡಿಸೆಂಬರ್‌ನಲ್ಲಿ, 2017ರ ಜನವರಿಯಲ್ಲಿ ಮಹೇಂದ್ರಸಿಂಗ್ ಧೋನಿ ಅನುಕ್ರಮವಾಗಿ ಟೆಸ್ಟ್, ಸೀಮಿತ ಓವರ್ ಪಂದ್ಯಗಳ ನಾಯಕತ್ವವನ್ನು ತ್ಯಜಿಸಿದರು. ಮೊನ್ನೆ ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿ ಸಂದರ್ಭದಲ್ಲೂ ಬಿಸಿಸಿಐ ತನ್ನ ವೆಬ್ ಪುಟದಲ್ಲಿ ಭಾರತದ ನಾಯಕ ಎಂದೇ ಕರೆದು ಮುಖಭಂಗಕ್ಕೀಡಾಗಿತ್ತು! ಆಸೀಸ್ ಬರುವ ವರ್ಷದ ಆ್ಯಷಸ್‌ಗಾಗಿ ಈ ವರ್ಷದ ಶೆಫೀಲ್ಡ್‌ಶೀಲ್ಡ್ ಸ್ಪರ್ಧೆಗೆ ಇಂಗ್ಲೆಂಡ್‌ನ ಕೆಂಪು ಡ್ನೂಕ್ ಚೆಂಡು ಬಳಸಿ ಸಿದ್ಧತೆ ನಡೆಸುತ್ತದೆ. ಬಿಸಿಸಿಐ ವರ್ಷದ ಮುನ್ನ ನಿಗದಿಯಾದ ಅಭ್ಯಾಸದ ಎಸೆಕ್ಸ್ ವಿರುದ್ಧದ ಪಂದ್ಯವನ್ನು ರದ್ದುಮಾಡುತ್ತದೆ! ಮಾ.ವೆಂ.ಸ.ಪ್ರಸಾದ್