ನವದೆಹಲಿ: ಭಾರತದ ಬಳಕೆದಾರರು ಸಾಂಪ್ರದಾಯಿಕ ಪಿನ್ ಬಳಕೆಗಿಂತ ಆಧುನಿಕ ಸುರಕ್ಷತಾ ವಿಧಾನಗಳಾಗಿರುವ ಫಿಂಗರ್‌ಪ್ರಿಂಟ್, ಮುಖ ಗುರುತು ಮತ್ತು ಧ್ವನಿ ಗುರುತಿಸುವಿಕೆ ಮೂಲಕ ಕಾರ್ಡ್ ದೃಢಪಡಿಸುವಿಕೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಇಷ್ಟ ಪಡುತ್ತಿದ್ದಾರೆ. ಹೀಗೆಂದು ಡಿಜಿಟಲ್ ಪಾವತಿ ಕ್ಷೇತ್ರದ ಪ್ರಮುಖ ಕಂಪನಿ ವೀಸಾ ನಡೆಸಿದ ಅಧ್ಯಯನದಲ್ಲಿ ಅಭಿಪ್ರಾಯಪಟ್ಟಿದೆ. ಇಂಥ ತಂತ್ರ ಜ್ಞಾನಗಳು ಸಾಂಪ್ರದಾಯಿಕವಾಗಿ ಇರುವ ಪಿನ್ ಸಂಖ್ಯೆಗಳಿಗಿಂತ ಸುಲಭವಾಗಿವೆ. ಕೆಲವೊಂದು ಬಾರಿ ಅವು ಮರೆತು, ಕಳೆದು ಹೋಗುತ್ತವೆ ಎಂದು ಭಾರತೀಯರು ಅಭಿಪ್ರಾಯಪಟ್ಟಿದ್ದಾರೆ ಎಂದು ಅಧ್ಯಯನದಲ್ಲಿ ಉಲ್ಲೇಖೀಸಲಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗುತ್ತಿರುವ ಸ್ಮಾರ್ಟ್‌ಫೋನ್‌ಗಳಿಂದಾಗಿ ಬಯೋಮೆಟ್ರಿಕ್, ಧ್ವನಿ ಗುರುತಿಸುವಿಕೆ ವ್ಯವಸ್ಥೆ ಸೇರಿದಂತೆ ಆಧುನಿಕ ವ್ಯವಸ್ಥೆಗಳನ್ನು ಸುಲಭವಾಗಿ ಗುರುತಿಸಲು ಅನುಕೂಲವಾಗುತ್ತಿದೆ ಎಂದು ಅದರಲ್ಲಿ ಪ್ರತಿಪಾದಿಸಲಾಗಿದೆ. ಶೇ.99ರಷ್ಟು ಬಳಕೆದಾರರು ಒಂದು ಮಾದರಿಯ ಬಯೋಮೆಟ್ರಿಕ್ ವ್ಯವಸ್ಥೆಯ ಗುರುತಿಸುವಿಕೆಯನ್ನು ಬಯಸುತ್ತಾರೆ.