Advertisement

ವಾತ್ವಾನಿ, ವಾಂಗ್‌ಚುಕ್‌ಗೆ “ಮ್ಯಾಗ್ಸೆಸೆ’ಪ್ರಶಸ್ತಿ ಗರಿ

06:00 AM Jul 27, 2018 | Team Udayavani |

ಮನಿಲಾ: ಏಷ್ಯಾ ಮಟ್ಟದ ನೋಬೆಲ್‌ ಬಹುಮಾನ ಎಂದೇ ಖ್ಯಾತಿ ಗಳಿಸಿರುವ ರೇಮನ್‌ ಮ್ಯಾಗ್ಸೆಸೆ ಪ್ರಶಸ್ತಿಗೆ ಮುಂಬೈನ ಮನೋವೈದ್ಯ ಭರತ್‌ ವಾತ್ವಾನಿ ಹಾಗೂ ಈಶಾನ್ಯ ರಾಜ್ಯಗಳ ಪ್ರಾಂತ್ಯದ ಶಿಕ್ಷಣ ತಜ್ಞ ಸೋನಂ ವಾಂಗ್‌ಚುಕ್‌ಗೆ ಸಂದಿದೆ.1988ರಲ್ಲಿ ಅವರು ಸ್ಥಾಪಿಸಿರುವ ಶ್ರದ್ಧಾ ರಿಹಬಲಿಟೇಷನ್‌ ಫೌಂಡೇಷನ್‌ ಮೂಲಕ ಡಾ. ಭರತ್‌ ವಾಗ್ವಾಣಿ, ಮನೋರೋಗಕ್ಕೆ ತುತ್ತಾಗಿರುವ ನಿರ್ಗತಿಕರನ್ನು ಗುಣಪಡಿಸುವ ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇನ್ನು, ಲಡಾಖ್‌ನಲ್ಲಿ ಶೈಕ್ಷಣಿಕವಾಗಿ ಹಿಂದು ಳಿದ ವಿದ್ಯಾರ್ಥಿಗಳ ಅಭಿವೃದ್ಧಿಗಾಗಿ ಸ್ಟೂಡೆಂಟ್ಸ್‌ ಎಜುಕೇಷನ್‌ ಆ್ಯಂಡ್‌ ಕಲ್ಚರಲ್‌ ಮೂವ್‌ಮೆಂಟ್‌ ಆಫ್ ಲಡಾಕ್‌ (ಸೆಕ್‌ವೊಲ್‌) ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. 

Advertisement

ಇವರಲ್ಲದೆ,  ಈ ಬಾರಿಯ ರೇಮನ್‌ ಮ್ಯಾಗ್ಸೆಸೆ ಪ್ರಶಸ್ತಿಯು ಯೋಕ್‌ ಚಾಂಗ್‌ (ಕಾಂಬೋಡಿಯಾ), ಮರಿಯಾ ಡಿ ಲಾರ್ಡೆಸ್‌ ಮಾರ್ಟಿನ್ಸ್‌ ಕ್ರುಜ್‌ (ಈಸ್ಟ್‌ ತೈಮೊರ್‌), ಹೊವಾರ್ಡ್‌ ಡೀ (ಫಿಲಿಪ್ಪೀನ್ಸ್‌) ಹಾಗೂ ವೊ ಥಿ ಹೊವಾಂಗ್‌ ಯೆನ್‌ (ವಿಯೆಟ್ನಾಂ) ಅವರಿಗೂ ಸಂದಿದೆ.
 

Advertisement

Udayavani is now on Telegram. Click here to join our channel and stay updated with the latest news.

Next