Advertisement
ನೇಪಿಯರ್ ಅಂಗಳದಲ್ಲಿ ನಡೆದ ಐಸಿಸಿ ಚಾಂಪಿಯನ್ ಶಿಪ್ ನ ಮೊದಲ ಪಂದ್ಯದಲ್ಲಿ ಭಾರತ ಆಲ್ ರೌಂಡ್ ಪ್ರದರ್ಶನ ನಿಡಿತು. ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ನ್ಯೂಜಿಲ್ಯಾಂಡ್ ವನಿತೆಯರು ಭಾರತೀಯರ ಸ್ಪಿನ್ ದಾಳಿಗೆ ಸಿಲುಕಿ 48.4 ಓವರ್ ನಲ್ಲಿ 192 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡರು. ಏಕ್ತಾ ಬಿಷ್ಟ್, ಪೂನಂ ಯಾದವ್ ತಲಾ ಮೂರು ವಿಕೆಟ್ ಪಡೆದರೆ ದೀಪ್ತಿ ಶರ್ಮಾ 2 ವಿಕೆಟ್ ಪಡೆದರು. ಅನುಭವಿ ಆಟಗಾತಿ ಸ್ಯೂಜಿ ಬೇಟ್ಸ್ 32 ರನ್ ಗಳಿಸಿ ಕಿವೀಸ್ ಪರ ಅಧಿಕ ರನ್ ಗಳಿಸಿದರು.
ಏಕದಿನ ಪಂದ್ಯಗಳಲ್ಲಿ ಅದ್ಭುತ ಫಾರ್ಮ್ನಲ್ಲಿರುವ ಸ್ಮೃತಿ ಮಂದನಾ ಕಳೆದ 13 ಇನ್ನಿಂಗ್ಸ್ ಗಳಲ್ಲಿ 9ನೇ ಬಾರಿ ಅರ್ಧ ಶತಕದ ಗಡಿ ದಾಟಿದ ಸಾಧನೆ ಮಾಡಿದರು. ಮಂದನಾ 9 ಬೌಂಡರಿ 3 ಭರ್ಜರಿ ಸಿಕ್ಸರ್ ನೆರವಿನಿಂದ 105 ರನ್ ಗಳಿಸಿ ಔಟ್ ಆದರೆ, ಏಕದಿನದಲ್ಲಿ ಮೊದಲ ಅರ್ಧ ಶತಕ ಗಳಿಸಿದ ರೋಡ್ರಿಗಸ್ 81 ರನ್ ಗಳಿಸಿ ಅಜೇಯರಾಗುಳಿದರು. ನ್ಯೂಜಿಲ್ಯಾಂಡ್ ಪರ ಅಮೆಲಿಯಾ ಕರ‍್ರ್ ಏಕೈಕ ವಿಕೆಟ್ ಪಡೆದರು.
ನಾಲ್ಕನೇ ಏಕದಿನ ಶತಕ ಬಾರಿಸಿದ ಅರ್ಹವಾಗಿಯೇ ಮಂದನಾ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.