Advertisement
ಬ್ಯಾಟಿಂಗ್ ಮೇಲಾಟವಾಗಿ ಪರಿಣಮಿಸಿದ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ 38 ರನ್ನುಗಳ ಗೆಲುವು ಸಾಧಿಸಿತ್ತು. ಇದರೊಂದಿಗೆ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಗಳಿಸಿದೆ.ಬುಧವಾರದ ಮುಖಾಮುಖೀಯ ಮೊದಲ ಓವರ್‌ನಲ್ಲೇ 2 ವಿಕೆಟ್ ಕಳೆದುಕೊಂಡ ಬಳಿಕ ಅಮೋಘ ಚೇತರಿಕೆ ಕಂಡ ಇಂಗ್ಲೆಂಡ್ 6 ವಿಕೆಟಿಗೆ 197 ರನ್ ಪೇರಿಸಿತ್ತು. ಜವಾಬಿತ್ತ ಭಾರತ 6ಕ್ಕೆ 159 ರನ್ ಗಳಿಸಿ ಸೋಲನುಭವಿಸಿತು.
ಪರಿಸ್ಥಿತಿಯನ್ನು ಅಂದಾಜಿಸುವಲ್ಲಿ ವಿಫಲವಾದದ್ದೇ ಭಾರತದ ಸೋಲಿಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಭಾರತ 4 ಮಂದಿ ಸ್ಪಿನ್ನರ್‌ಗಳನ್ನು ಕಣಕ್ಕಿಳಿಸಿ ಇಂಗ್ಲೆಂಡನ್ನು ಕಟ್ಟಿಹಾಕುವ ಯೋಜನೆ ರೂಪಿಸಿತಾದರೂ ಇದು ಉಲ್ಟಾ ಹೊಡೆಯಿತು. ಇವರ 12 ಓವರ್‌ಗಳಲ್ಲಿ 121 ರನ್ ಸೋರಿ ಹೋಯಿತು. ಇವರಲ್ಲಿ ಇಬ್ಬರು ಸ್ಪಿನ್ನರ್‌ಗಳಿಗೆ ಇದು ಪದಾರ್ಪಣ ಪಂದ್ಯವಾಗಿತ್ತು. ಒಬ್ಬರು ಕರ್ನಾಟಕದ ಶ್ರೇಯಾಂಕಾ ಪಾಟೀಲ್. ಇವರು 44 ರನ್ ವೆಚ್ಚದಲ್ಲಿ 2 ವಿಕೆಟ್ ಉರುಳಿಸುವಲ್ಲಿ ಯಶಸ್ವಿಯಾದರು. ಸೈಕಾ ಇಶಾಖ್ 38 ರನ್ನಿಗೆ ಒಂದು ವಿಕೆಟ್ ಕಿತ್ತರು. ಹಿರಿಯ ಸ್ಪಿನ್ನರ್ ದೀಪ್ತಿ ಶರ್ಮ ಅವರಿಗೆ (0/28) ಮೂರೇ ಓವರ್ ಅವಕಾಶ ಸಿಕ್ಕಿತು. ಕನಿಕಾ ಅಹುಜಾ ಒಂದು ಓವರ್‌ನಲ್ಲಿ 12 ರನ್ ಬಿಟ್ಟುಕೊಟ್ಟರು. ಸ್ಪಿನ್ನರ್‌ಗಳ ಶಾರ್ಟ್ ಹಾಗೂ ಫುಲ್‌ಟಾಸ್ ಎಸೆತಗಳನ್ನು ಡೇನಿಯಲ್ ವ್ಯಾಟ್-ನ್ಯಾಟ್ ಸ್ಕಿವರ್ ಬ್ರಂಟ್ ಚೆನ್ನಾಗಿಯೇ ನಿಭಾಯಿಸಿದರು.
Related Articles
“ವಾಂಖೇಡೆ’ ಟ್ರ್ಯಾಕ್ ಸ್ಪಿನ್ ದಾಳಿಯ ಲಾಭ ಪಡೆದವರಿಗೆ ಹಾಗೂ ಇದನ್ನು ಸಮರ್ಥ ರೀತಿಯಲ್ಲಿ ನಿಭಾಯಿಸಿದವರಿಗೆ ಯಶಸ್ಸು ಒಲಿಯಲಿದೆ ಎಂಬುದು ಮೊದಲ ಪಂದ್ಯದಲ್ಲಿ ಸಾಬೀತಾಗಿದೆ.
Advertisement
ಇಂಗ್ಲೆಂಡ್ ವಿರುದ್ಧ ಕಳಪೆ ದಾಖಲೆಇಂಗ್ಲೆಂಡ್ ವಿರುದ್ಧ ಭಾರತದ ಟಿ20 ದಾಖಲೆ ಅತ್ಯಂತ ಕಳಪೆ ಎಂಬುದಾಗಿ ಅಂಕಿಅಂಶಗಳು ಸಾರುತ್ತವೆ. 2006ರ ಆರಂಭಿಕ ಟಿ20 ಸರಣಿ ಬಳಿಕ ಇಂಗ್ಲೆಂಡ್ ವಿರುದ್ಧ ಭಾರತ ಜಯ ಸಾಧಿಸಿಲ್ಲ. ಇಂಗ್ಲೆಂಡ್ ವಿರುದ್ಧ ಆಡಿದ ಒಟ್ಟು 28 ಪಂದ್ಯಗಳಲ್ಲಿ ಭಾರತ ಜಯಿಸಿದ್ದು ಏಳರಲ್ಲಿ ಮಾತ್ರ. ಇಂಗ್ಲೆಂಡ್ ಉಳಿದ 21 ಪಂದ್ಯಗಳನ್ನು ಜಯಿಸಿದೆ.
ಆದರೆ ಹಿಂದಿನ ದಾಖಲೆ, ಅಂಕಿಅಂಶಗಳ ಕುರಿತು ಯೋಚಿಸುತ್ತ ಕೂರುವ ಬದಲು ಭವಿಷ್ಯದತ್ತ ವಿಶಾಲ ದೃಷ್ಟಿಯನ್ನು ಹೊಂದಿರಬೇಕಾದ ಅಗತ್ಯವಿದೆ ಎಂಬುದು ತಂಡದ ನೂತನ ಕೋಚ್ ಅಮೋಲ್ ಮುಜುಮಾªರ್ ಅಭಿಪ್ರಾಯ. ಈ ಸರಣಿಯ ನಿಕಟಪೂರ್ವ ಸಾಧನೆಯ ಹೆಗ್ಗಳಿಕೆಯೊಂದು ಭಾರತದ ಪರವಾಗಿರುವುದನ್ನು ಮರೆಯುವಂತಿಲ್ಲ. ಅದೆಂದರೆ, ನಮ್ಮ ವನಿತೆಯರಿಗೆ ಹ್ಯಾಂಗ್‌ಝೂ ಏಷ್ಯಾಡ್‌ನಲ್ಲಿ ಒಲಿದ ಚಿನ್ನದ ಪದಕ. ಇನ್ನೊಂದೆಡೆ ಇಂಗ್ಲೆಂಡ್ ತನ್ನ ತವರಲ್ಲೇ 7ನೇ ರ್‍ಯಾಂಕಿಂಗ್ ತಂಡವಾದ ಶ್ರೀಲಂಕಾ ವಿರುದ್ಧ 1-2ರಿಂದ ಸರಣಿ ಸೋತಿತ್ತು! ಆರಂಭ: ರಾತ್ರಿ 7.00
ಪ್ರಸಾರ: ಸ್ಪೋರ್ಟ್ಸ್ 18