ಇದರೊಂದಿಗೆ ಎಲ್ಲಾ ಮೂರು ಚುಟುಕು ಪಂದ್ಯಗಳನ್ನು ಸೋತ ಟೀಮ್ ಇಂಡಿಯಾ ವೈಟ್ ವಾಶ್ ಅನುಭವಿಸಿದೆ.
Advertisement
ಸೆಡ್ಡಾನ್ ಪಾರ್ಕ್ ಅಂಗಳದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಕಿವೀಸ್ ಅನುಭವಿ ಸೋಫೀ ಡಿವೈನ್ 72 ರನ್ ಸಹಾಯದಿಂದ ನಿಗದಿತ 20 ಓವರ್ ನಲ್ಲಿ ಏಳು ವಿಕೆಟ್ ನಷ್ಟಕ್ಕೆ 161 ರನ್ ಗಳಿಸಿತ್ತು. ನಾಯಕಿ ಆಮಿ ಸ್ಯಾಟರ್ ವೈಟ್ 31 ರನ್ ಗಳಿಸದರೆ ಭಾರತದ ಪರ ದೀಪ್ತಿ ಶರ್ಮಾ ಎರಡು ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು.
ಮಿಂಚಿದ ಮಂಧನಾ: ನ್ಯೂಜಿಲ್ಯಾಂಡ್ ಸರಣಿಯಲ್ಲಿ ಭರ್ಜರಿ ಫಾರ್ಮ್ನಲ್ಲಿರುವ ಸ್ಮೃತಿ ಮಂಧನಾ ಇಂದು ಮತ್ತೆ ಉತ್ತಮ ಪ್ರದರ್ಶನ ನೀಡಿದರು. 62 ಎಸೆತಗಳಿಂದ 86 ರನ್ ಬಾರಿಸಿದ ಮಂಧನಾ ಡಿವೈನ್ ಗೆ ವಿಕೆಟ್ ಒಪ್ಪಿಸಿ ತಮ್ಮ ಚೊಚ್ಚಲ ಟಿ-ಟ್ವೆಂಟಿ ಶತಕದಿಂದ ವಂಚಿತರಾದರು. ಮಂಧನಾ ಔಟ್ ಆಗುವ ವೇಳೆಗೆ ಭಾರತ 15.3 ಓವರ್ ನಲ್ಲಿ123 ರನ್ ಗಳಿಸಿ ಸುಭದ್ರ ಸ್ಥಿತಿಯಲ್ಲಿತ್ತು.
Related Articles
Advertisement
ಮಂಧನಾ ವಿಕೆಟ್ ಪತನದ ನಂತರ ಮಿಥಾಲಿ ರಾಜ್ ಮತ್ತು ದೀಪ್ತಿ ಶರ್ಮಾ ತಂಡವನ್ನು ಆಧರಿಸುವ ಕೆಲಸ ಮಾಡಿದರೂ ರನ್ ವೇಗವಾಗಿ ಬರಲಿಲ್ಲ. ಕೊನೆಯ ಓವರ್ ನಲ್ಲಿ ಗೆಲ್ಲಲು 16 ರನ್ ಗಳಿಸಬೇಕಾದ ಒತ್ತಡಕ್ಕೆ ಸಿಲುಕಿದ ಭಾರತ ಗಳಿಸಿದ್ದು 13 ರನ್. ಮಿಥಾಲಿ ರಾಜ್ 24 ರನ್ ಗಳಿಸಿದರೆ ದೀಪ್ತಿ ಶರ್ಮಾ 21ರನ್ ಗಳಿಸಿದರು. ಸೋಫಿ ಡಿವೈನ್ ಪಂದ್ಯ ಶ್ರೇಷ್ಠ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು