Advertisement

ಕ್ಲೀನ್‌ ಸ್ವೀಪ್‌ಗೆ ಭಾರತ ಮಹಿಳೆಯರು ಸಜ್ಜು

06:50 AM Feb 10, 2018 | |

ಕೇಪ್‌ಟೌನ್‌: ಗೆಲುವಿನ ಅಲೆಯಲ್ಲಿ ಬೀಗುತ್ತಿರುವ ಭಾರತ ತಂಡ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕ್ಲೀನ್‌ ಸ್ವೀಪ್‌ ಸಾಧನೆಗೆ ಸಜ್ಜಾಗಿದೆ. ಈಗಾಗಲೇ ಭಾರತ 2 ಪಂದ್ಯ ಗೆದ್ದು ಸರಣಿ ಜಯ ಸಾಧಿಸಿದೆ. ಸರಣಿಯ ಕೊನೆಯ ಪಂದ್ಯ ಶನಿವಾರ ನಡೆಯಲಿದೆ.

Advertisement

ಭಾರತದ ಪರ ಬ್ಯಾಟಿಂಗ್‌ನಲ್ಲಿ ಆರಂಭಿಕ ಆಟಗಾರ್ತಿ ಸ್ಮತಿ ಮಂದನಾ (219 ರನ್‌) ಭರ್ಜರಿ ಬ್ಯಾಟಿಂಗ್‌ ಪ್ರದರ್ಶಿಸುತ್ತಿದ್ದಾರೆ. ಮೊದಲನೇ ಏಕದಿನದಲ್ಲಿ ಅರ್ಧಶತಕ, 2ನೇ ಏಕದಿನದಲ್ಲಿ ಶತಕ ಸಿಡಿಸಿದ್ದಾರೆ. ಉಳಿದಂತೆ ಹರ್ಮನ್‌ಪ್ರೀತ್‌ ಕೌರ್‌ (71 ರನ್‌), ಮಿಥಾಲಿ ರಾಜ್‌ (65 ರನ್‌), ವೇದಕೃಷ್ಣಮೂರ್ತಿ (53 ರನ್‌) ತಂಡಕ್ಕೆ ನೆರವಾಗುತ್ತಿದ್ದಾರೆ. ಬೌಲಿಂಗ್‌ನಲ್ಲಿ 200 ವಿಕೆಟ್‌ ಪಡೆದು ಸಾಧನೆ ಮಾಡಿದ ಜೂಲನ್‌ ಗೋಸ್ವಾಮಿ ಬಲ ಭಾರತಕ್ಕಿದೆ. ಉಳಿದಂತೆ ಶಿಖಾ ಪಾಂಡೆ, ಪೂನಂ ಯಾದವ್‌ ಚುರುಕಿನ ದಾಳಿ ನಡೆಸುತ್ತಿದ್ದಾರೆ. ಆದರೆ ಎರಡೂ ಪಂದ್ಯದಲ್ಲಿ ಹೀನಾಯ ಪ್ರದರ್ಶನ ನೀಡಿರುವ ದಕ್ಷಿಣ ಆಫ್ರಿಕಾ ಸ್ಥಿತಿ ಚಿಂತಾಜನಕವಾಗಿದೆ. ಹೀಗಾಗಿ ಬಲಾಬಲದ ದೃಷ್ಟಿಯಲ್ಲಿ ನೋಡಿದರೆ ಭಾರತವೇ ಗೆಲ್ಲುವ ಫೇವರಿಟ್‌ ತಂಡವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next